‘ಆ ಎಪಿಸೋಡ್ ನಡೆಸಿಕೊಡದಿದ್ದರೆ ಸುದೀಪ್ ಕೊನೆಯದಾಗಿ ತಾಯಿ ಜೊತೆ ಮಾತನಾಡುತ್ತಿದ್ದರು’; ಕಣ್ಣೀರಲ್ಲಿ ಮನೆ ಮಂದಿ

ಸುದೀಪ್ ತಾಯಿಯ ನಿಧನದ ನಂತರ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಯೋಗರಾಜ್ ಭಟ್ ಅವರು ಮಾಡಿದ ಭಾವನಾತ್ಮಕ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಅಸ್ಥಿರತೆಗೆ ಕಾರಣವಾಗಿದೆ.

‘ಆ ಎಪಿಸೋಡ್ ನಡೆಸಿಕೊಡದಿದ್ದರೆ ಸುದೀಪ್ ಕೊನೆಯದಾಗಿ ತಾಯಿ ಜೊತೆ ಮಾತನಾಡುತ್ತಿದ್ದರು’; ಕಣ್ಣೀರಲ್ಲಿ ಮನೆ ಮಂದಿ
ಸುದೀಪ್

Updated on: Oct 28, 2024 | 7:24 AM

ಅಕ್ಟೋಬರ್ 19ರಂದು ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡಿ ನಡೆದಿದ್ದರು. ಭಾನುವಾರದ ಎಪಿಸೋಡ್ ಶೂಟ್ ಆಗಿರಲಿಲ್ಲ. ಇದಕ್ಕೆ ಕಾರಣ ಆಗಿದ್ದು ಅವರ ತಾಯಿಯ ನಿಧನ. ಸುದೀಪ್ ಭಾವನಾತ್ಮಕ ಜೀವಿ. ಹೀಗಾಗಿ, ತಾಯಿಯನ್ನು ಕಳೆದುಕೊಂಡಿದ್ದು ಅವರಿಗೆ ಸಾಕಷ್ಟು ನೋವು ಕೊಟ್ಟಿದೆ. ಈ ಕಾರಣದಿಂದಲೇ ಅವರು ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡಿಲ್ಲ. ಈಗ ಯೋಗರಾಜ್ ಭಟ್ ಅವರು ಹೇಳಿದ ಆ ಒಂದು ಮಾತು ಮನೆ ಮಂದಿಗೆ ಸಾಕಷ್ಟು ನೋವು ತರಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಶನಿವಾರದ (ಅಕ್ಟೋಬರ್ 26) ಎಪಿಸೋಡ್​ಗೆ ಸುದೀಪ್ ಬದಲು ಯೋಗರಾಜ್ ಭಟ್ ಅವರು ಅತಿಥಿಯಾಗಿ ಬಂದಿದ್ದರು. ಈ ವೇಳೆ ಸುದೀಪ್ ತಾಯಿಯ ನಿಧನ ವಾರ್ತೆ ಬಗ್ಗೆ ಹೇಳಿದರು. ಅಷ್ಟೇ ಅಲ್ಲ, ‘ಅಂದು ನಿಮ್ಮ ಗಲಾಟೆಗಳನ್ನೆಲ್ಲ ಅಟೆಂಡ್​​ ಮಾಡದೇ ಇದ್ದಿದ್ದರೆ ಕೊನೆಯ ಒಂದು ಅಥವಾ ಎರಡು ಗಂಟೆ ಅವರು ತಾಯಿಯ ಜೊತೆ ಇರಬಹುದಿತ್ತು’ ಎಂದು ಯೋಗರಾಜ್ ಭಟ್​ ಹೇಳಿದರು.

ಈ ವಿಚಾರ ಮನೆಯವರನ್ನು ಅತಿಯಾಗಿ ಕಾಡಿದೆ. ನಮ್ಮಿಂದಾಗಿ ಸುದೀಪ್​ಗೆ ತಾಯಿ ಜೊತೆ ಮಾತನಾಡೋಕೆ ಸಾಧ್ಯವಾಗಿಲ್ಲವಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಎಲ್ಲರೂ ಕ್ಯಾಮೆರಾ ಎದುರು ಹೋಗಿ ಕಣ್ಣೀರು ಹಾಕಿದ್ದಾರೆ. ಕೆಲವರಿಗೆ ತಮ್ಮ ಮನೆಯವರಿಗೆ ಏನಾಯಿತೋ ಏನೋ ಎನ್ನುವ ಆತಂಕ ಹೆಚ್ಚಾಗಿದೆ.

ಕಿಚ್ಚ ಸುದೀಪ್ ಅವರು ಶನಿವಾರದ ಎಪಿಸೋಡ್ ನಡೆಸಿಕೊಡುವಾಗಲೇ ತಾಯಿಗೆ ಗಂಭೀರವಾಗಿದೆ ಎನ್ನುವ ವಿಚಾರ ಗೊತ್ತಾಗಿತ್ತು. ಈ ವಿಚಾರ ಗೊತ್ತಿದ್ದೂ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಆ ವಾರ ಜಗದೀಶ್ ಹಾಗೂ ರಂಜಿತ್ ಅರ್ಧಕ್ಕೆ ಹೊರ ನಡೆದಿದ್ದರು. ಜಗದೀಶ್ ಅವಾಚ್ಯ ಶಬ್ದ ಬಳಕೆ ಮಾಡಿ ಎಲಿಮಿನೇಟ್ ಆದರೆ, ರಂಜಿತ್ ಅವರು ಜಗದೀಶ್​ನ ತಳ್ಳಿ ಮನೆಯಿಂದ ಹೊರ ನಡೆದಿದ್ದರು.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us