‘ಯವ್ವೋ, ನಾನು ಫಿನಾಲೆ ತಲುಪಿದೀನಿ ಬೇ.. ಈ ಸಲ ಕಪ್ ನಮ್ದೇ’; ಕೂಗಿ ಹೇಳಿದ ಹನುಮಂತ

| Updated By: ರಾಜೇಶ್ ದುಗ್ಗುಮನೆ

Updated on: Jan 21, 2025 | 7:00 AM

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರು ಫೈನಲ್ ವಾರ ತಲುಪಿದ್ದಾರೆ. ತಾಯಿಗೆ ಭಾವುಕ ಸಂದೇಶ ನೀಡಿದ ಅವರು, ‘ಈ ಸಲ ಕಪ್ ನಮ್ಮದೇ’ ಎಂದು ಘೋಷಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫೈನಲ್ ವಾರದಲ್ಲಿ ಯಾವುದೇ ಟಾಸ್ಕ್ ಇಲ್ಲದಿರುವುದರಿಂದ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ.

‘ಯವ್ವೋ, ನಾನು ಫಿನಾಲೆ ತಲುಪಿದೀನಿ ಬೇ.. ಈ ಸಲ ಕಪ್ ನಮ್ದೇ’; ಕೂಗಿ ಹೇಳಿದ ಹನುಮಂತ
ಹನುಮಂತ
Follow us on

‘ಬಿಗ್ ಬಾಸ್’ ಮನೆಯನ್ನು ನೋಡಿದಾಗ ಸಾಕಷ್ಟು ಭಿನ್ನವಾಗಿ ಕಾಣೋದು ಹನುಮಂತ ಅವರು. ದೊಡ್ಡ ಅಭಿಮಾನಿಗಳನ್ನು ಪಡೆದ ಅವರು ಈಗ ಫಿನಾಲೆ ವಾರ ತಲುಪಿದ್ದಾರೆ. ಟಾಪ್ 6ರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಈಗ ಅವರು ತಾಯಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಫಿನಾಲೆ ವಾರ ತಲುಪಿದ ಖುಷಿಯನ್ನು ಕೂಗಿ ಹೇಳಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ವಿಶೇಷ ಎಂದರೆ ಅವರು ‘ಈ ಸಲ ಕಪ್ ನಮ್ಮದೇ’ ಎಂದಿದ್ದಾರೆ. ಈ ಮೂಲಕ ಅವರು ದೊಡ್ಡ ಸೂಚನೆ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಇದು ಫಿನಾಲೆ ವಾರ. ಈ ವಾರ ಯಾವುದೇ ಟಾಸ್ಕ್​ಗಳನ್ನು ಬಿಗ್ ಬಾಸ್ ನೀಡುವುದಿಲ್ಲ. ಹೀಗಾಗಿ, ನಾನಾ ರೀತಿಯ ಚಟುವಟಿಕೆಗಳನ್ನು ಬಿಗ್ ಬಾಸ್ ನೀಡುತ್ತಾ ಇದ್ದಾರೆ. ಅದೇ ರೀತಿ ಫಿನಾಲೆ ವಾರದ ಮೊದಲ ದಿನವೇ ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಈ ಚಟುವಟಿಕೆ ಪ್ರಕಾರ ಫಿನಾಲೆಗೆ ಬಂದಿದ್ದೀನಿ ಎಂಬುದನ್ನು ಕೂಗಿ ಹೇಳಬೇಕಿತ್ತು. ಈ ಬಗ್ಗೆ ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ ಎಲ್ಲರೂ ಕೂಗಿ ಹೇಳೋಕೆ ಆರಂಭಿಸಿದರು.

ಬಿಗ್ ಬಾಸ್​ಗೆ ಬರೋದು ನಮ್ಮ ಕನಸಾಗಿತ್ತು ಎಂದು ಎಲ್ಲರೂ ಹೇಳಿಕೊಂಡರು. ಹನುಮಂತ ಮಾತ್ರ ಇದನ್ನು ಭಿನ್ನವಾಗಿ ಹೇಳಿದರು. ‘ಯವ್ವೋ ನಾನು ಫಿನಾಲೆ ತಲುಪಿದೀನಿ ಬೇ.. ಈ ಸಲ ಕಪ್ ನಮ್ದೇ’ ಎಂದು ಕೂಗಿ ಹೇಳಿದ್ದಾರೆ. ಅವರ ಮಾತನ್ನು ಕೇಳಿ ಎಲ್ಲರೂ ನಕ್ಕಿದ್ದಾರೆ. ಹನುಮಂತ ಅವರು ಕೂಡ ಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಪ್ ಗೆದ್ದರೆ ಅವರಿಗೆ ಆರ್ಥಿಕವಾಗಿಯೂ ಸಾಕಷ್ಟು ಸಹಕಾರಿ ಆಗಲಿದೆ.

ಇದನ್ನೂ ಓದಿ: ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು

ಇಷ್ಟು ದಿನ ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲು ವೋಟ್ ಮಾಡಲಾಗುತ್ತಿತ್ತು. ಆದರೆ, ಈಗ ಸ್ಪರ್ಧಿಗಳನ್ನು ಗೆಲ್ಲಿಸೋದಕ್ಕೆ ವೋಟ್ ಮಾಡಬೇಕಿದೆ. ಜಿಯೋ ಸಿನಿಮಾ ಆ್ಯಪ್​​ನಲ್ಲಿ ವೋಟಿಂಗ್ ಮಾಡಬಹುದು. ಸದ್ಯ ಮೋಕ್ಷಿತಾ, ಹನುಮಂತ, ತ್ರಿವಿಕ್ರಂ, ಭವ್ಯಾ, ರಜತ್ ಹಾಗೂ ಮಂಜು ಫಿನಾಲೆ ವಾರದಲ್ಲಿ ಇದ್ದಾರೆ. ಈ ಪೈಕಿ ಒಬ್ಬರು ಕಪ್ ಗೆಲ್ಲಲಿದ್ದಾರೆ. ಭಾನುವಾರ (ಜನವರಿ 26) ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.