ಸುದೀಪ್ ಹೇಳಿದರೂ ಬದಲಾಗದ ಮನೆ ಮಂದಿ; ಮತ್ತದೇ ಹಾಡು

ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಗಳು ಹಿಂದಿನ ತಪ್ಪುಗಳ ಆಧಾರದ ಮೇಲೆ ನಾಮಿನೇಷನ್ ಮಾಡುತ್ತಿದ್ದರು. ಇದನ್ನು ಕಿಚ್ಚ ಸುದೀಪ್ ತೀವ್ರವಾಗಿ ಖಂಡಿಸಿದ್ದರು. ಆದರೆ, ಸ್ಪರ್ಧಿಗಳು ಮತ್ತದೇ ತಪ್ಪನ್ನು ಮಾಡಿದ್ದಾರೆ.

ಸುದೀಪ್ ಹೇಳಿದರೂ ಬದಲಾಗದ ಮನೆ ಮಂದಿ; ಮತ್ತದೇ ಹಾಡು
ಕಿಚ್ಚ ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Nov 27, 2024 | 7:27 AM

ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸ್ಪರ್ಧಿಗಳು ಎಡವಿದಾಗ, ತಪ್ಪು ಮಾಡಿದಾಗ ಅದನ್ನು ತಿದ್ದುವ ಪ್ರಯತ್ನ ಮಾಡುತ್ತಾರೆ. ಕಳೆದ ವಾರ ಸುದೀಪ್ ಅವರು ಬಿಗ್ ಬಾಸ್ ಮನೆ ಮಂದಿಗೆ ಒಂದು ವಿಚಾರವನ್ನು ಖಡಕ್ ಆಗಿ ಹೇಳಿದ್ದರು. ಬೇರೆಯವರ ಮಧ್ಯೆ ಏನೋ ಆಗಿದೆ ಎಂದಾಗ ಆ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಬೇಡಿ ಎಂದು ಸುದೀಪ್ ಹೇಳಿದ್ದರು. ಈ ವಾರ ಮತ್ತದೇ ಕಾರಣ ನೀಡಿ ಎಲ್ಲರೂ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ.

ಕಳೆದ ವಾರ ರಜತ್ ಅವರು ಸುರೇಶ್​ಗೆ ಕೆಟ್ಟ ಪದ ಬಳಕೆ ಮಾಡಿದರು. ಈ ವಿಚಾರವನ್ನೇ ಇಟ್ಟುಕೊಂಡು ಎಲ್ಲರೂ ಕಳಪೆ ನೀಡುವ ಕೆಲಸ ಮಾಡಿದ್ದಾರೆ. ‘ಸುರೇಶ್​ಗೆ ರಜತ್ ಆ ರೀತಿ ಹೇಳಿದ್ದು ಬೇಸರ ಮೂಡಿಸಿದೆ’ ಎಂದು ಹೇಳುವ ಮೂಲಕ ಕಳಪೆ ನೀಡಿದ್ದರು. ಈ ವಿಚಾರವನ್ನು ಸುದೀಪ್ ಅವರು ವೀಕೆಂಡ್​ನಲ್ಲಿ ಪ್ರಸ್ತಾಪ ಮಾಡಿದ್ದರು.

ಇದನ್ನೂ ಓದಿ: ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್

‘ನಿಮಗೆ ಏನಾದರೂ ತೊಂದರೆ ಆಗಿದ್ದರೆ ಹೇಳಿ. ಆ ವ್ಯಕ್ತಿಯಿಂದ ನಿಮಗೆ ಬೇಸರ ಆಗಿದ್ದರೆ ಹೇಳಿ. ಇಬ್ಬರ ಮಧ್ಯೆ ಜಗಳ ನಡೆದು, ಅದು ಗಾರ್ಡನ್ ಏರಿಯಾದಲ್ಲಿ ಪರಸ್ಪರ ಮಾತನಾಡಿಕೊಂಡು ಬಗೆಹರಿದಿರಬಹುದು. ಅದು ನಿಮಗೆ ಗೊತ್ತಿಲ್ಲದೆ ಇರಬಹುದು. ಹೀಗಿರುವಾಗ ಅದನ್ನೇ ಕಾರಣ ನೀಡೋದು ಸರಿ ಅಲ್ಲ. ಹೀಗಾಗಿ, ಈ ರೀತಿಯ ಕಾರಣ ನೀಡಿ ನಾಮಿನೇಟ್ ಮಾಡೋದು ತಪ್ಪು. ನೀವು ಜೋಕರ್​ಗಳ ರೀತಿ ಕಾಣುತ್ತೀರಿ’ ಎಂದು ಸುದೀಪ್ ಹೇಳಿದ್ದರು. ಈ ವಾರ ಮತ್ತದೇ ರಿಪೀಟ್ ಆಗಿದೆ.

ಹನುಮಂತ ಅವರು ಸುರೇಶ್ ಅವರನ್ನು ನಾಮಿನೇಟ್ ಮಾಡಿದರು. ‘ಕಳೆದ ವಾರ ಸುರೇಶ್ ಅವರು ಆಟದಿಂದ ಅರ್ಧಕ್ಕೆ ನಡೆದಿದ್ದು ನನಗೆ ಇಷ್ಟ ಆಗಿಲ್ಲ’ ಎಂದಿದ್ದಾರೆ. ಸುರೇಶ್ ಅವರು ಹನುಮಂತ ಟೀಂನಲ್ಲೇ ಇರಲಿಲ್ಲ ಅನ್ನೋದು ಮೊದಲ ವಿಚಾರ ಆದರೆ, ಆ ಬಳಿಕ ಸುರೇಶ್ ತಪ್ಪನ್ನು ತಿದ್ದುಕೊಂಡು ಕ್ಷಮೆ ಕೇಳಿದ್ದರು ಎಂಬುದು ಎರಡನೇ ವಿಚಾರ. ಆದಾಗ್ಯೂ ಹನುಮಂತ ಅವರು ಸುರೇಶ್ ಹೆಸರನ್ನು ತೆಗೆದುಕೊಂಡರು. ಮೋಕ್ಷಿತಾ, ಚೈತ್ರಾ ಕುಂದಾಪುರ ಕೂಡ ತ್ರಿವಿಕ್ರಂ ಅವರನ್ನು ನಾಮಿನೇಟ್ ಮಾಡುವಾಗ ಇದೇ ರೀತಿಯ ಕಾರಣ ತೆಗೆದುಕೊಂಡರು. ಒಟ್ಟಾರೆ, ಬಹುತೇಕರು ಇದೇ ರೀತಿಯ ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ