
ಬಿಗ್ ಬಾಸ್ ಮನೆಯಲ್ಲಿ ನಡೆಯೋ ಉತ್ತಮ ಹಾಗೂ ಕಳಪೆ ವಿಚಾರವನ್ನು ಯಾರೂ ಓಪನ್ ಆಗಿ ಮಾತನಾಡುವಂತೆ ಇಲ್ಲೆ. ಬೇರೆಯವರ ಮೇಲೆ ಪ್ರಭಾವ ಬೀರುವಂತೆ ಇಲ್ಲ. ಅದು ಬಿಗ್ ಬಾಸ್ (Bigg Boss) ನಿಯಮದ ಪ್ರಕಾರ ತಪ್ಪು. ಈ ವಿಚಾರದಲ್ಲಿ ವೈಯಕ್ತಿಕ ನಿರ್ಧಾರ ತಿಳಿಸೋ ಅವಕಾಶ ಮಾತ್ರ ಇರುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಓಪನ್ ಆಗಿ ಚರ್ಚೆ ಆಗಿದೆ. ಅಶ್ವಿನಿ ಹಾಗೂ ರಿಷಾ ಗೌಡ ಎಲ್ಲರ ಎದುರು ಕಳಪೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿಗೆ ಅದನ್ನು ನೀಡಬೇಕು ಎಂದು ಚರ್ಚಿಸಲಾಗಿದೆ.
‘ಬಿಗ್ ಬಾಸ್’ನಲ್ಲಿ ಈ ಮೊದಲು ಕಳಪೆ ಹಾಗೂ ಉತ್ತಮದ ವಿಚಾರದಲ್ಲಿ ಚರ್ಚೆ ಆಗಿ ಸುದೀಪ್ ಬಳಿಯಿಂದ ಬೈಸಿಕೊಂಡ ಉದಾಹರಣೆ ಸಾಕಷ್ಟಿದೆ. ಈ ವಾರವೂ ಅದು ಮುಂದುವರಿದಿದೆ. ಗಿಲ್ಲಿ ನಟ ಅವರು ಈ ಬಾರಿ ತಮ್ಮದೇ ತಂಡಕ್ಕೆ ಸಿಗೋ ಅವಕಾಶವನ್ನು ಕಸಿದುಕೊಂಡರು ಎಂಬುದು ಬ್ಲೂ ಟೀಂ ತಂಡದ ಆರೋಪ. ಈ ಕಾರಣದಿಂದ ಎಲ್ಲರೂ ಗಿಲ್ಲಿನ ಅನೇಕರು ದ್ವೇಷ ಮಾಡಿದರು.
ಈ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿಗೆ ಕಳಪೆ ನೀಡಲು ಅನೇಕರು ರೆಡಿ ಆಗಿದ್ದಾರೆ. ಇದರಲ್ಲಿ ಅಶ್ವಿನಿ ಗೌಡ ಹಾಗೂ ರಿಷಾ ಮುಂದಿದ್ದಾರೆ. ಗುಂಪಿನಲ್ಲಿ ಮಾತನಾಡುವಾಗ ಅಶ್ವಿನಿ ಅವರು, ‘ಗಿಲ್ಲಿ ನಿನಗೆ ಈ ವಾರ ಎಲ್ಲರೂ ಕಳಪೆ ನೀಡಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಅಕ್ಕ-ಪಕ್ಕ ಇದ್ದವರ ಮೇಲೆ ಪ್ರಭಾವ ಬೀರಿದ್ದಾರೆ. ರಿಷಾ ಗೌಡ ಕೂಡ ಮಾತನಾಡುವಾಗ ‘ಗಿಲ್ಲಿಗೆ ಕಳಪೆ ಕೊಡಬೇಕು’ ಎಂದು ಹೇಳಿದ್ದಾರೆ. ಅವರು ಕೂಡ ಅನೇಕರ ಮೇಲೆ ಪ್ರಭಾವ ಬೀರಿದ್ದಾರೆ.
ಇದನ್ನೂ ಓದಿ: ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
ಸದ್ಯ ಆಗಿರುವ ಚರ್ಚೆಯ ಪ್ರಕಾರ ಗಿಲ್ಲಿಗೆ ಮನೆಯ ಬಹುತೇಕರು ಕಳಪೆ ಕೊಡೋ ಸಾಧ್ಯತೆ ಇದೆ. ಈ ವಾರದ ಕಳಪೆ ಗಿಲ್ಲಿಗೆ ಸಿಗೋ ಸಾಧ್ಯತೆ ಇದೆ. ವೀಕೆಂಡ್‌ನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುವ ಸಾಧ್ಯತೆ ಇದೆ. ಸುದೀಪ್ ಅವರು ಈ ಬಗ್ಗೆ ಅನೇಕರಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.