ಗೆಲ್ಲಲಾಗದೆ ಅಶ್ವಿನಿ ವಿರುದ್ಧ ಸುಳ್ಳು ಆರೋಪ ಮಾಡಿದ್ರಾ ಕಾವ್ಯಾ? ಇಲ್ಲಿದೆ ಸಾಕ್ಷಿ

ಬಿಗ್ ಬಾಸ್ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ಮಧ್ಯೆ ದೊಡ್ಡ ಜಗಳ ನಡೆದಿತ್ತು. ಸೈರನ್ ಬಳಿಕವೂ ಅಶ್ವಿನಿ ಕುಳಿತೇ ಇದ್ದರು ಎಂದು ಕಾವ್ಯಾ ಆರೋಪಿಸಿದ್ದರು. ಆದರೆ, ವೈರಲ್ ವಿಡಿಯೋದಲ್ಲಿ ಅಶ್ವಿನಿ ನಿಯಮ ಪಾಲಿಸಿರುವುದು ಸ್ಪಷ್ಟವಾಗಿದೆ. ಕಾವ್ಯಾ ಆರೋಪ ಸುಳ್ಳೆಂದು ಹಲವರು ಅಭಿಪ್ರಾಯಪಟ್ಟಿದ್ದು, ಬಿಗ್ ಬಾಸ್ ಮನೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದೆ.

ಗೆಲ್ಲಲಾಗದೆ ಅಶ್ವಿನಿ ವಿರುದ್ಧ ಸುಳ್ಳು ಆರೋಪ ಮಾಡಿದ್ರಾ ಕಾವ್ಯಾ? ಇಲ್ಲಿದೆ ಸಾಕ್ಷಿ
ಅಶ್ವಿನಿ-ಕಾವ್ಯಾ

Updated on: Dec 18, 2025 | 12:05 PM

ಅಶ್ವಿನಿ ಗೌಡ ಹಾಗೂ ಕಾವ್ಯಾ ಶೈವ ಮಧ್ಯೆ ಬಿಗ್ ಬಾಸ್​​ ಅಲ್ಲಿ ಮಾತಿನ ಚಕಮಕಿ ನಡೆದಿದೆ. ಡ್ರಮ್ ಟಾಸ್ಕ್​​ನಲ್ಲಿ ಅಶ್ವಿನಿ ಹಾಗೂ ಕಾವ್ಯಾ ಪರಸ್ಪರ ವಿರುದ್ಧ ಟೀಂನಲ್ಲಿ ಇದ್ದರು. ತಮ್ಮ ಎದುರಾಳಿ ತಂಡದ ಡ್ರಮ್​​ನಿಂದ ನೀರು ಹೊರ ಬರುವಂತೆ ಮಾಡೋದು ಅಶ್ವಿನಿ ಹಾಗೂ ಕಾವ್ಯಾಗೆ ನೀಡಲಾದ ಟಾಸ್ಕ್ ಆಗಿತ್ತು. ಆದರೆ, ಕಾವ್ಯಾ ಅವರನ್ನು ಅಶ್ವಿನಿ ಸಂಪೂರ್ಣವಾಗಿ ತಡೆ ಹಿಡಿದಿದ್ದರು. ಇದರಿಂದ ಕಾವ್ಯಾಗೆ ಆಟ ಆಡಲು ಸಾಧ್ಯವಾಗಲೇ ಇಲ್ಲ. ಆ ಬಳಿಕ ಅವರು ಅಶ್ವಿನಿ ವಿರುದ್ಧ ಮಾತಿನ ಸಮರ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಸೈರನ್ ಆದ ತಕ್ಷಣ ಅಟ್ಯಾಕ್​​ಗೆ ಇಳಿಯಬೇಕು. ಮತ್ತೊಂದು ಸೈರನ್ ಆದ ತಕ್ಷಣ ಆಟವನ್ನು ನಿಲ್ಲಿಸಬೇಕು. ‘ಸೈರನ್ ಆದ ಬಳಿಕವೂ ಅಶ್ವಿನಿ ಅವರು ಮೈ ಮೇಲೆ ಭಾರ ಹಾಕಿ ಕುಳಿತೇ ಇದ್ದರು’ ಎಂಬುದು ಕಾವ್ಯಾ ಆರೋಪ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಸೈರನ್ ಆದ ತಕ್ಷಣ ಅಶ್ವಿನಿ ಅವರು ಎದ್ದಿರೋದು ಕಾಣಿಸುತ್ತದೆ. ಹೀಗಾಗಿ, ಕಾವ್ಯಾ ಹೇಳಿದ ಮಾತಿನಲ್ಲಿ ಸತ್ಯ ಇಲ್ಲ ಎಂದು ಅನೇಕರಿಗೆ ಅನಿಸಿದೆ.

ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ಫೈಟ್ ಏರ್ಪಡಲು ಈ ಮಾತೇ ಅಡಿಪಾಯ ಆಗಿತ್ತು. ಆ ಬಳಿಕ ಇಬ್ಬರ ಮಾತು ಎಲ್ಲೆಲ್ಲಿಗೋ ಹೋಯಿತು. ಅಮ್ಮನ ವಿಷಯವೆಲ್ಲ ಚರ್ಚೆಗೆ ಬಂದವು. ‘ನಿಮ್ಮ ಅಮ್ಮನಿಗೆ ಹೋಗಿ ಹೇಳ್ಕೋ’ ಎಂದು ಅಶ್ವಿನಿ ಅವರು ಕಾವ್ಯಾಗೆ ಹೇಳಿದರು. ‘ನನ್ನ ಅಮ್ಮನ 10ರಷ್ಟು ನೀವಿಲ್ಲ’ ಎಂದು ಕೌಂಟರ್ ಕೊಟ್ಟರು ಕಾವ್ಯಾ.

ಈ ಜಗಳದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾರು ಮುಂದಕ್ಕೆ ಹೋಗದಂತೆ ತಡೆಯೋದು ಅಶ್ವಿನಿಗೆ ನೀಡಿದ ಟಾಸ್ಕ್ ಆಗಿತ್ತು. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಿರುವಾಗ ಕಾವ್ಯಾ ಆ ಬಗ್ಗೆ ಆರೋಪ ಮಾಡೋದು ಏನಿದೆ ಎಂಬುದು ಅನೇಕರ ಪ್ರಶ್ನೆ. ‘ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ’ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ: ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಈ ವಿಷಯ ವೀಕೆಂಡ್​​ನಲ್ಲಿ ಚರ್ಚೆಗೆ ಬರಬಹುದು. ಸುದೀಪ್ ಅವರು ಯಾವುದು ಸರಿ, ಯಾವುದು ತಪ್ಪು ಎಂದು ಚರ್ಚಿಸಿ ಒಂದು ತೀರ್ಮಾನ ನೀಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.