ಬಿಗ್ ಬಾಸ್ ಮನೆಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ರೇಸ್ ಕಾರ್ ಎಂಟ್ರಿ: ಖುಷಿಪಟ್ಟ ಸ್ಪರ್ಧಿಗಳು

ಕಿಚ್ಚ ಸುದೀಪ್ ಮಾಲೀಕತ್ವದ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡದ ವುಲ್ಫ್ ಜಿಬಿ08 ರೇಸ್ ಕಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದೆ. ಕಾರನ್ನು ನೋಡಿ ಖುಷಿಪಟ್ಟ ಸ್ಪರ್ಧಿಗಳು, ದೆಹಲಿ ಹಾಗೂ ಮುಂಬೈನಲ್ಲಿ ನಡೆಯಲಿರುವ ಮುಂಬರುವ ರೇಸ್‌ಗಳಿಗೆ ಸುದೀಪ್ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ ಮನೆಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ರೇಸ್ ಕಾರ್ ಎಂಟ್ರಿ: ಖುಷಿಪಟ್ಟ ಸ್ಪರ್ಧಿಗಳು
ಬಿಗ್ ಬಾಸ್
Edited By:

Updated on: Nov 21, 2026 | 9:42 PM

ಕಿಚ್ಚ ಸುದೀಪ್ ಅವರ ಒಡೆತನದ ಮೋಟಾರ್ ಸ್ಪೋರ್ಟ್ಸ್ ತಂಡವಾದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಅಧಿಕೃತ ರೇಸ್ ಕಾರು ಈಗ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಗಮನ ಸೆಳೆದಿದೆ. ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಬಳಸಲಾಗುವ ‘ವುಲ್ಫ್ ಜಿಬಿ08 ಥಂಡರ್’ ಮಾದರಿಯ ಈ ಸಿಂಗಲ್-ಸೀಟರ್ ರೇಸ್ ಕಾರನ್ನು ಕಂಡು ದೊಡ್ಮನೆಯ ಸ್ಪರ್ಧಿಗಳು ಫುಲ್ ಖುಷಿಯಾಗಿದ್ದಾರೆ.

ಕಾರಿನ ವಿನ್ಯಾಸ ಮತ್ತು ವೇಗದ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡ ಮನೆ ಮಂದಿ, ಅದರ ಸುತ್ತಲೂ ನಿಂತು ಸಂಭ್ರಮಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳು ಒಟ್ಟಾಗಿ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡಕ್ಕೆ ‘ಆಲ್ ದಿ ಬೆಸ್ಟ್’ ಹೇಳಿ ಶುಭ ಹಾರೈಸಿದ್ದಾರೆ.

Loading...

ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಮಾಲೀಕತ್ವದ ಈ ತಂಡವನ್ನು ಜುಲೈ 2025ರಲ್ಲಿ ಅದ್ಧೂರಿಯಾಗಿ ಅನಾವರಣಗೊಳಿಸಲಾಗಿತ್ತು. ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಅಡಿಯಲ್ಲಿ ಬರುವ ತಂಡವು ಮುಂದಿನ ವಾರಾಂತ್ಯದಲ್ಲಿ (ನವೆಂಬರ್ 28-29) ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ರೇಸ್‌ನಲ್ಲಿ ಭಾಗವಹಿಸಲಿದೆ.

ದೆಹಲಿ ರೇಸ್ ಮುಗಿದ ಬಳಿಕ, ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈನಲ್ಲಿ ನಡೆಯಲಿರುವ ರೋಚಕ ಸ್ಟ್ರೀಟ್ ಸರ್ಕ್ಯೂಟ್ ನೈಟ್ ರೇಸ್ ಸ್ಪರ್ಧೆಯಲ್ಲಿ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡ ಕಣಕ್ಕಿಳಿಯಲಿದೆ. ಇಲ್ಲಿ ಅವಾರ್ಡ್​ ಗೆಲ್ಲುವ ಸಾಧ್ಯತೆ ತಂಡಕ್ಕೆ ಇದೆ. ಬಿಗ್ ಬಾಸ್ ವೇದಿಕೆಯ ಮೂಲಕ ತಮ್ಮ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ವಿಶೇಷ ಪ್ರಚಾರ ನೀಡಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:  ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?

ಸುದೀಪ್ ಅವರು ನಟನೆಯ ಜೊತೆಗೆ ಹಲವು ಕ್ರೀಡೆಯಲ್ಲಿ ಆಸಕ್ತಿ ಹಹೊಂದಿದ್ದಾರೆ. ಅದರಲ್ಲಿ ಕ್ರಿಕೆಟ್, ರೇಸಿಂಗ್ ಕೂಡ ಒಂದು. ಅವರು ಕ್ರಿಕೆಟ್​ ಅಲ್ಲೂ ಆ್ಯಕ್ಟೀವ್ ಆಗಿದ್ದು ಸೆಲೆಬ್ರಿಟಿ ಲೀಗ್ ಆಡುತ್ತಾರೆ. ಇದರ ಜೊತೆಗೆ ಅವರು ರೇಸಿಂಗ್ ಅಲ್ಲೂ ಆ್ಯಕ್ಟೀವ್ ಆಗಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us