‘ಬಳೆ ಹಾಕಿಕೊಂಡು ಕುಳಿತುಕೊಳ್ಳಿ’ ಎಂದ ಕಿರಣ್ ಶಾಸ್ತ್ರಿ; ಬಿಗ್ ಬಾಸ್‌ ಮನೆಯಲ್ಲಿ ಮತ್ತೆ ಬಳೆ ವಿವಾದ

ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ 'ಬಳೆ ಹಾಕೊಂಡು ಕೂತ್ಕೊಳ್ಳಿ' ಎಂದು ಹೇಳುವ ಮೂಲಕ ಮತ್ತೆ ಹಳೆಯ ವಿವಾದವನ್ನು ಎಬ್ಬಿಸಿದ್ದಾರೆ. ಸೀಸನ್ 10ರಲ್ಲಿ ವಿನಯ್ ಗೌಡ ಇದೇ ಮಾತಿಗೆ ಸುದೀಪ್‌ರಿಂದ ಕ್ಲಾಸ್ ತೆಗೆಸಿಕೊಂಡಿದ್ದರು. ಈಗ ಕಿರಣ್ ಶಾಸ್ತ್ರಿ ಅವರ ಈ ಹೇಳಿಕೆಗೆ ಮನೆಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವೀಕೆಂಡ್ ಪಂಚಾಯಿತಿ ಕುತೂಹಲ ಮೂಡಿಸಿದೆ.

‘ಬಳೆ ಹಾಕಿಕೊಂಡು ಕುಳಿತುಕೊಳ್ಳಿ’ ಎಂದ ಕಿರಣ್ ಶಾಸ್ತ್ರಿ; ಬಿಗ್ ಬಾಸ್‌ ಮನೆಯಲ್ಲಿ ಮತ್ತೆ ಬಳೆ ವಿವಾದ
ಬಿಗ್ ಬಾಸ್
Image Credit source: Colors Kannada

Updated on: Sep 16, 2026 | 6:53 AM

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಮರುಕಳಿಸಿದ ಸೀಸನ್ 10ರ ವಿವಾದ
  • ಕಿರಣ್ ಶಾಸ್ತ್ರಿ ವಿರುದ್ಧ ಸ್ಪರ್ಧಿಗಳ ಆಕ್ರೋಶ
  • ಶಾಸ್ತ್ರಿ ಹೇಳಿಕೆಗೆ ತಿರುಗಿಬಿದ್ದ ಮನೆಮಂದಿ

ಬಿಗ್ ಬಾಸ್ ಮನೆಯಲ್ಲಿ ಜಗಳ, ವಾದ-ವಿವಾದಗಳು ಸಾಮಾನ್ಯ. ಆದರೆ ಕೆಲವು ಮಾತುಗಳು ಅಥವಾ ಹೇಳಿಕೆಗಳು ಬಿಗ್ ಬಾಸ್ ಇತಿಹಾಸದಲ್ಲೇ ದೊಡ್ಡ ವಿವಾದಕ್ಕೆ ಕಾರಣವಾಗುತ್ತವೆ. ಬಿಗ್ ಬಾಸ್ ಸೀಸನ್ 10ರಲ್ಲಿ ವಿನಯ್ ಗೌಡ ಅವರು ‘ಬಳೆ ತೊಟ್ಟುಕೊಳ್ಳಿ’ ಎಂದು ಹೇಳಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವಾರ ವೀಕೆಂಡ್‌ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ವಿನಯ್ ಗೌಡ ಅವರಿಗೆ ಕಠಿಣವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಅದೇ ರೀತಿಯ ಹೇಳಿಕೆಯನ್ನು ಕಿರಣ್ ಶಾಸ್ತ್ರಿ ನೀಡಿ ಮನೆಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ ಒಂದರ ವೇಳೆ ಗಲಾಟೆ ತೀವ್ರ ರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಕಿರಣ್ ಶಾಸ್ತ್ರಿ ಅವರು ಸಹ-ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, ‘ಬಳೆ ಹಾಕಿಕೊಂಡು ಕೂತ್ಕೊಂಡು ಬಿಡಿ ಎಲ್ಲರೂ’ ಎಂದು ಗಟ್ಟಿಯಾಗಿ ಕಿರುಚಿದ್ದಾರೆ. ಕಿರಣ್ ಅವರ ಈ ಮಾತು ಕೇಳುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲಿಂಗ ತಾರತಮ್ಯ ಅಥವಾ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ರೀತಿಯಲ್ಲಿ ಬಳಸುವ ‘ಬಳೆ ಹಾಕಿಕೊಳ್ಳಿ’ ಎಂಬ ಮಾತಿಗೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿದೆ. ಕಿರಣ್ ಶಾಸ್ತ್ರಿ ಅವರ ಈ ಮಾತು ಕೇಳಿ ಸ್ಪರ್ಧಿಗಳು ಕೋಪಗೊಂಡಿದ್ದು, ‘ಬಳೆ ಹಾಕೊಂಡರೆ ಏನು? ಬಳೆ ಹಾಕೊಂಡರೆ ಏನು ತಪ್ಪು?’ ಎಂದು ಗಗನ್ ಪ್ರಶ್ನೆ ಪ್ರಶ್ನೆ ಮಾಡಿದ್ದಾರೆ. ಇದರಿಂದಾಗಿ ಮನೆಯಲ್ಲಿ ಕೆಲ ಕಾಲ ವಾತಾವರಣ ತೀವ್ರ ಉದ್ವಿಗ್ನಗೊಂಡಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆಯೇ ತಂದಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ ಅವಿನಾಶ್

ಈ ಹಿಂದೆ ಸೀಸನ್ 10ರಲ್ಲಿ ವಿನಯ್ ಗೌಡ ಇದೇ ರೀತಿಯ ಹೇಳಿಕೆ ನೀಡಿದ್ದಾಗ, ಸುದೀಪ್ ಅವರು ‘ಬಳೆ ಎಂಬುದು ಸ್ತ್ರೀ ಶಕ್ತಿಯ ಸಂಕೇತ, ಅದನ್ನು ಕೀಳಾಗಿ ಅಥವಾ ಅಸಮರ್ಥತೆಗೆ ಸಂಕೇತವಾಗಿ ಬಳಸಬೇಡಿ’ ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದ್ದರು. ಈಗ ಕಿರಣ್ ಶಾಸ್ತ್ರಿ ಕೂಡ ಅದೇ ಹಳೆಯ ತಪ್ಪನ್ನು ಪುನರಾವರ್ತಿಸಿದ್ದು, ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಕಿರಣ್ ಶಾಸ್ತ್ರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:17 am, Tue, 15 September 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us