ಹನುಮಂತನಿಗೆ ಕ್ಯಾಪ್ಟನ್​ ಪಟ್ಟ ಜಸ್ಟ್ ಮಿಸ್; ನಾಯಕತ್ವ ಸಿಕ್ಕಿದ್ದು ಯಾರಿಗೆ?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಪ್ರಬಲ ಸ್ಪರ್ಧಿ ಗೆದ್ದಿದ್ದಾರೆ. ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದ ಈ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ಕಾರಣ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇದು ಅವರ 53 ದಿನಗಳ ಕನಸಿನ ನೆರವೇರಿಕೆಯಾಗಿದೆ.

ಹನುಮಂತನಿಗೆ ಕ್ಯಾಪ್ಟನ್​ ಪಟ್ಟ ಜಸ್ಟ್ ಮಿಸ್; ನಾಯಕತ್ವ ಸಿಕ್ಕಿದ್ದು ಯಾರಿಗೆ?
ಹನುಮಂತ

Updated on: Nov 23, 2024 | 6:59 AM

ಪ್ರತಿ ವಾರವೂ ಕ್ಯಾಪ್ಟನ್ಸಿ ಟಾಸ್ಕ್ ರೋಚಕತೆ ಪಡೆದುಕೊಳ್ಳುತ್ತದೆ. ಯಾರು ಮನೆಯ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಕುತೂಹಲ ಇರುತ್ತದೆ. ಈ ವಾರವೂ ಕ್ಯಾಪ್ಟನ್ಸಿ ಓಟ ಸಾಕಷ್ಟು ಕುತೂಹಲಗಳನ್ನು ಸೃಷ್ಟಿ ಮಾಡಿತ್ತು. ಈ ಬಾರಿ ಯಾರು ಕ್ಯಾಪ್ಟ್ ಆಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹನುಮಂತ ಅವರು ಬಂದ ವಾರವೇ ಕ್ಯಾಪ್ಟನ್ ಆಗಿದ್ದರು. ಅವರಿಗೆ ಕ್ಯಾಪ್ಟನ್ಸಿ ಓಟ ಕೊನೆಯ ಕ್ಷಣದಲ್ಲಿ ಮಿಸ್ ಆಗಿದೆ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು. ಶೋಭಾ ಒಂದು ತಂಡಕ್ಕೆ ನಾಯಕಿ ಆದರೆ, ಭವ್ಯಾ ಗೌಡ ಅವರು ಮತ್ತೊಂದು ತಂಡದ ಕ್ಯಾಪ್ಟನ್ ಆಗಿದ್ದರು. ಎರಡೂ ತಂಡಗಳ ಮಧ್ಯೆ ಭರ್ಜರಿ ಫೈಟ್ ನಡೆದಿತ್ತು. ಅಂತಿಮವಾಗಿ ಶೋಭಾ ಶೆಟ್ಟಿ ತಂಡದವರ  ಬಳಿ ಹೆಚ್ಚಿನ ಹಣ ಇತ್ತು. ಶೋಭಾ, ಮಂಜು, ರಜತ್, ಹನುಮಂತ, ಚೈತ್ರಾ ರೇಸ್​ನಲ್ಲಿ ಇದ್ದರು.

ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಅವರು ಉತ್ತಮವಾಗಿ ಆಡಿ ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ದೊಡ್ಮನೆಯ ನಾಯಕತ್ವ ಪಡೆದಿದ್ದಾರೆ. ಅವರು 53 ದಿನಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ. ಇದು ಮನೆ ಮಂದಿಗೆ ಖುಷಿ ಕೊಟ್ಟಿದೆ. ಇನ್ನು, ಹನುಮಂತ ಅವರಿಗೆ ಕ್ಯಾಪ್ಟನ್ಸಿ ಮಿಸ್ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಮಂಜು ಅವರು ಸಾಕಷ್ಟು ಪ್ರಯತ್ನ ಪಡುತ್ತಲೇ ಇದ್ದರು. ಆದರೆ, ಅದು ಸಾಧ್ಯ ಆಗುತ್ತಾ ಇರಲಿಲ್ಲ. ಅವರು ಸಂಚು ರೂಪಿಸುವುದರಲ್ಲಿಯೂ ಎತ್ತಿದ ಕೈ. ಆದರೆ, ಕ್ಯಾಪ್ಟನ್ ಆಗುವ ಕನಸು ಮಾತ್ರ ಈಡೇರಿಲಿಲ್ಲ. ಈಗ ಅದು ಈಡೇರಿದೆ.

ಇದನ್ನೂ ಓದಿ: ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್

ಮಂಜು ಅವರು ಈ ವಾರವೂ ಉತ್ತಮವಾಗಿ ಆಟ ಆಡಿದ್ದರು. ಸಖತ್ ಅಗ್ರೆಸ್ ಆಗಿ ನಡೆದುಕೊಂಡಿದ್ದರು. ತಂಡ ರಚನೆ ಆಗುವಾಗ ಮಂಜು ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅನೇಕರು ಭಾವಿಸುತ್ತಾರೆ. ಆ ಮಟ್ಟಕ್ಕೆ ಅವರ ಆಟ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.