AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಜತ್​ಗೆ ಸುದೀಪ್​ ಕ್ಲಾಸ್ ತೆಗೆದುಕೊಳ್ಳಲೇಬೇಕು’​: ಬಿಗ್ ಬಾಸ್ ವೀಕ್ಷಕರಿಂದ ಒತ್ತಾಯ

ಈ ಮೊದಲು ಅಶ್ಲೀಲ ಪದ ಬಳಸಿದ್ದಕ್ಕೆ ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಈಗ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್ ಕೂಡ ಅವಾಚ್ಯ ಪದಗಳನ್ನು ಬಳಸಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಬಹುತೇಕ ಸ್ಪರ್ಧಿಗಳಿಗೆ ನೋವಾಗಿದೆ. ರಜತ್​ಗೆ ಸುದೀಪ್​ ಬುದ್ಧಿ ಕಲಿಸಬೇಕು ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.

‘ರಜತ್​ಗೆ ಸುದೀಪ್​ ಕ್ಲಾಸ್ ತೆಗೆದುಕೊಳ್ಳಲೇಬೇಕು’​: ಬಿಗ್ ಬಾಸ್ ವೀಕ್ಷಕರಿಂದ ಒತ್ತಾಯ
ರಜತ್, ಕಿಚ್ಚ ಸುದೀಪ್​
ಮದನ್​ ಕುಮಾರ್​
|

Updated on: Nov 22, 2024 | 9:29 PM

Share

ಬಿಗ್​ ಬಾಸ್​ ಮನೆಗೆ ರಜತ್​ ಅವರು ವೈಲ್ಡ್​ ಕಾರ್ಡ್ ಮೂಲಕ ಕಾಲಿಟ್ಟಿದ್ದಾರೆ. ದೊಡ್ಮನೆಯಲ್ಲಿ ಅವರು 5 ದಿನ ಕಳೆದಿದ್ದಾರೆ. ಮೊದಲ ವಾರವೇ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ರಜತ್ ಬಳಸುವ ಕೆಟ್ಟ ಭಾಷೆ. ಹೌದು, ರಜತ್ ಅವರು ದೊಡ್ಮನೆಯಲ್ಲಿ ರೌಡಿ ವರ್ತನೆ ತೋರಿದ್ದಾರೆ. ಟಾಸ್ಕ್​ ಆಡುವಾಗ ಗೋಲ್ಡ್​ ಸುರೇಶ್​ ಅವರಿಗೆ ರಜತ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಗೋಲ್ಡ್​ ಸುರೇಶ್ ಅವರಿಗೆ ಮಾತ್ರವಲ್ಲದೇ ಬಿಗ್ ಬಾಸ್ ಮನೆಯ ಮಹಿಳಾ ಸದಸ್ಯರಿಗೂ ಬೇಸರ ಆಗಿದೆ. ಬಹುತೇಕ ಎಲ್ಲರಿಗೂ ರಜತ್ ಬಗ್ಗೆ ಅಸಮಾಧಾನ ಇದೆ.

ಪ್ರತಿ ವೀಕೆಂಡ್​ನಲ್ಲಿ ಸುದೀಪ್ ಅವರು ಬಿಗ್ ಬಾಸ್ ಮನೆಯ ಸದಸ್ಯರ ತಪ್ಪುಗಳನ್ನು ತಿದ್ದುತ್ತಾರೆ. ಮಿತಿ ಮೀರಿ ವರ್ತಿಸಿದವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈ ಮೊದಲಿನ ಎಪಿಸೋಡ್​ಗಳಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸುದೀಪ್​ ಗ್ರಹಚಾರ ಬಿಡಿಸಿದ್ದರು. ಈ ವಾರ ರಜತ್ ಅವರಿಗೆ ಅದೇ ರೀತಿ ಪಾಠ ಕಲಿಸಬೇಕು ಎಂದು ಬಿಗ್ ಬಾಸ್ ವೀಕ್ಷಕರು ಒತ್ತಾಯಿಸುತ್ತಿದ್ದಾರೆ.

ಈ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಯಾವ ವಿಚಾರದ ಬಗ್ಗೆ ಮಾತನಾಡಬೇಕು ಎಂದು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ‘ರಜತ್​ ಆಡಿದ ಕೆಟ್ಟ ಮಾತುಗಳನ್ನು ಸುದೀಪ್​ ಖಂಡಿಸಲೇಬೇಕು’ ಎಂದು ವೀಕ್ಷಕರು ಅಭಿಪ್ರಾಯ ತಿಳಿಸಿದ್ದಾರೆ. ಹಾಗಾಗಿ ಎಲ್ಲರೂ ವೀಕೆಂಡ್ ಸಂಚಿಕೆಗಾಗಿ ಕಾದಿದ್ದಾರೆ.

ಇದನ್ನೂ ಓದಿ: ‘ಇವತ್ ಒಂದಿನ ಮಾತಾಡ್ತಿ ಅಷ್ಟೇ’: ರಜತ್​ಗೆ ಟಕ್ಕರ್ ಕೊಟ್ಟ ಹನುಮಂತ

ಕಳಪೆ ಪಟ್ಟ ನೀಡುವಾಗ ಬಿಗ್ ಬಾಸ್ ಮನೆಯ ಸದಸ್ಯರು ರಜತ್​ಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ಆದರೆ ಅವರ ಮಾತುಗಳಿಗೆ ರಜತ್ ಕಿವಿ ಕೊಡಲಿಲ್ಲ. ತಾನು ಇರುವುದೇ ಹೀಗೆ ಎಂದು ಅವರು ಉದ್ಧಟತನ ತೋರಿದ್ದಾರೆ. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಇನ್ನು, ಬಾತ್​ ರೂಮ್​ನಲ್ಲಿ ಹೋಗಿ ಮಾತನಾಡಿಕೊಂಡವರ ಬಗ್ಗೆ ಹಾಗೂ ಸ್ಮೋಕಿಂಗ್ ಏರಿಯಾದಲ್ಲಿ ಹೋಗಿ ತಂತ್ರಗಾರಿಕೆ ಮಾಡಿದವರ ಬಗ್ಗೆಯೂ ಸುದೀಪ್ ಅವರು ವೀಕೆಂಡ್​ನಲ್ಲಿ ಮಾತನಾಡಲಿ ಎಂದು ಆಡಿಯನ್ಸ್ ನಿರೀಕ್ಷಿಸಿದ್ದಾರೆ. ಈ ನಡುವೆ, ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕವೂ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು