ಸೌಂದರ್ಯಾ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜು; ಕಣ್ಣೀರ ಧಾರೆ

ಬಿಗ್ ಬಾಸ್ ಮನೆಯಲ್ಲಿ ಮಂಜು ಹಾಗೂ ಸೌಂದರ್ಯಾ ನಡುವೆ ತೀವ್ರ ವಾಕ್ಸಮರ ನಡೆದಿದೆ. ನಾಮಿನೇಷನ್ ವೇಳೆ ಸೌಂದರ್ಯಾ ಅವರ ವೈಯಕ್ತಿಕ ನಡೆ ಹಾಗೂ ಕ್ಯಾರೆಕ್ಟರ್ ಕುರಿತು ಮಂಜು ಆಡಿದ ಕೀಳು ಮಾತುಗಳು ಬಿಗ್ ಬಾಸ್ ಮನೆಯ ವಾತಾವರಣವನ್ನು ಕಾವೇರಿಸಿದ್ದು, ಸೌಂದರ್ಯಾ ಕಣ್ಣೀರಿಟ್ಟಿದ್ದಾರೆ. ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಈ ವಿಷಯವನ್ನು ಚರ್ಚಿಸುವ ಸಾಧ್ಯತೆಯಿದೆ.

ಸೌಂದರ್ಯಾ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜು; ಕಣ್ಣೀರ ಧಾರೆ
ಸೌಂದರ್ಯಾ-ಮಂಜು
Image Credit source: Colors Kannada

Updated on: Sep 17, 2026 | 7:00 AM

ಮುಖ್ಯಾಂಶಗಳು

  • ಹಳೆಯ ವಿಚಾರ ಎತ್ತಿ ಸೌಂದರ್ಯಾ ಕ್ಯಾರೆಕ್ಟರ್ ಅಸಾಸಿನೇಷನ್
  • ತೀವ್ರ ಚರ್ಚೆಗೆ ಕಾರಣವಾಯ್ತು ಮಂಜು ನೀಡಿದ ಹೇಳಿಕೆ
  • ವೀಕೆಂಡ್ ಎಪಿಸೋಡ್‌ನಲ್ಲಿ ಮಂಜುಗೆ ಕ್ಲಾಸ್

ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ತಮ್ಮ ಉದ್ದುದ್ದದ ಭಾಷಣ, ಮಾತು ಹಾಗೂ ಅರಚಾಟಗಳ ಮೂಲಕ ಅವರು ಎಲ್ಲರಿಗೂ ಪರಿಚಯ ಆಗಿದ್ದಾರೆ. ಅವರು ಈ ಬಾರಿ ಒಂದು ತಪ್ಪು ಮಾಡಿದ್ದಾರೆ. ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ಮೂಲಕ ತಪ್ಪು ಎಸಗಿದ್ದಾರೆ. ಆ ಬಳಿಕ ಸೌಂದರ್ಯಾ ಅವರು ಕಣ್ಣೀರು ಹಾಕಿದ್ದಾರೆ.

ನಾಮಿನೇಷನ್ ಪ್ರಕ್ರಿಯೆ ವೇಳೆ ಮಂಜು ಅವರು ಸೌಂದರ್ಯಾ ಹೆಸರನ್ನು ಮೊದಲು ತೆಗೆದುಕೊಂಡರು. ಸೌಂದರ್ಯಾ ಹೊಡೆದ ವಿಷಯ ಇಟ್ಟುಕೊಂಡು ಅವರನ್ನು ಮಂಜು ನಾಮಿನೇಟ್ ಮಾಡಿದರು. ಈ ವಿಷಯ ಸೌಂದರ್ಯಾಗೆ ಬೇಸರ ತರಿಸಿತು. ‘ಹೊಡೆದಿದ್ದು ಉದ್ದೇಶ ಪೂರ್ವಕವಲ್ಲ, ಆಟದ ಭರದಲ್ಲಿ ಆಗಿದ್ದು. ಕ್ಷಮೆ ಇರಲಿ’ ಎಂದು ಸೌಂದರ್ಯಾ ಕೇಳಿ ಕೊಂಡಾಗ ಮಂಜು ಓಕೆ ಎಂದಿದ್ದರು. ಈಗ ಮತ್ತೆ ಅದೇ ವಿಷಯ ಎತ್ತಿ ನಾಮಿನೇಟ್ ಮಾಡಿದ್ದು ಅವರಿಗೆ ಸರಿ ಎನಿಸಲಿಲ್ಲ.

ಈ ಬಗ್ಗೆ ಮಂಜುಗೆ ಸೌಂದರ್ಯಾ ಪ್ರಶ್ನೆ ಮಾಡಿದರು. ಆ ಬಳಿಕ ಮಂಜು ಅವರು ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದರು. ‘ಸೌಂದರ್ಯಾ ಅವರ ರೀತಿ 18+ ಮಾತನಾಡೋಕೆ ಇಲ್ಲಿಗೆ ಬಂದಿಲ್ಲ.ನಿಮ್ಮಂತಹ ಕೀಳು ಮನಸ್ಥಿತಿ ಅವರನ್ನು ನನಗೆ ನೋಡೋಕೆ ಇಷ್ಟ ಇಲ್ಲ’ ಎಂಬಿತ್ಯಾದಿ ವಿಷಯ ಮಾತನಾಡಿ ಸೌಂದರ್ಯಾ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಹೇಳಿದರು.

ಆ ಸಮಯದಲ್ಲಿ ಸೌಂದರ್ಯಾ ಏನೂ ಹೇಳಿಲ್ಲ. ಆ ಬಳಿಕ ಅವರಿಗೆ ಈ ವಿಷಯ ಅರ್ಥವಾಗಿದೆ. ಅವರು ಈ ಮಾತನ್ನು ನೆನೆದು ಪದೇ ಪದೇ ಕಣ್ಣೀರು ಹಾಕಿದ್ದಾರೆ. ಇನ್ನು, ಈ ವಿಷಯವಾಗಿ ಎಲ್ಲರೂ ಮಾತನಾಡಲು ಬಂದರೂ ಮಂಜು ಅವರು ಮಾತ್ರ ದೂರವೇ ಓಡಿದ್ದಾರೆ. ‘ನನಗೆ ಈ ವಿಷಯದ ಬಗ್ಗೆ ಚರ್ಚೆ ಮಾಡೋಕೆ ಇಷ್ಟ ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಸಹಸ್ಪರ್ಧಿಗೆ ಹೊಡೆದ ಪ್ರಕರಣ; ಬಿಗ್ ಬಾಸ್ ಬಿಟ್ಟರೂ ಸೌಂದರ್ಯಾಗೆ ತಪ್ಪಿಲ್ಲ ಸಂಕಷ್ಟ 

ಯಾವುದಾದರೂ ಮಹಿಳಾ ಸ್ಪರ್ಧಿ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರು ಎಂದರೆ ಸುದೀಪ್ ಅದನ್ನು ಸಹಿಸೋದಿಲ್ಲ. ಹೀಗಾಗಿ, ವೀಕೆಂಡ್ ಎಪಿಸೋಡ್​ನಲ್ಲಿ ಈ ವಿಷಯ ಚರ್ಚೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us