‘ನನಗೆ ಪ್ರತಾಪ್​ ತುಂಬ ಇಷ್ಟ’: ಕನ್ಫೆಷನ್​​ ರೂಮ್​ನಲ್ಲಿ ಕಣ್ಣೀರು ಹಾಕಿಕೊಂಡು ಹೇಳಿದ ಸಂಗೀತಾ

ಬಿಗ್​ ಬಾಸ್​ ಶೋನಲ್ಲಿ ಡ್ರೋನ್​ ಪ್ರತಾಪ್ ಅವರು ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಶೃಂಗೇರಿ ಅವರಿಗೆ ಇಷ್ಟ ಆಗಿದೆ. ಅದನ್ನು ಅವರು ಮನಸಾರೆ ಹೊಗಳಿದ್ದಾರೆ. ‘ನನಗೆ ಪ್ರತಾಪ್​ ತುಂಬ ಇಷ್ಟ’ ಎಂದು ಅವರು ಕನ್ಫೆಷನ್​ ರೂಮ್​ನಲ್ಲಿ ಹೇಳಿದ್ದಾರೆ. ದಿನದಿಂದ ದಿನಕ್ಕೆ ಅವರಿಬ್ಬರ ನಡುವೆ ಬಾಂಧವ್ಯ ಗಟ್ಟಿ ಆಗುತ್ತಿದೆ.

‘ನನಗೆ ಪ್ರತಾಪ್​ ತುಂಬ ಇಷ್ಟ’: ಕನ್ಫೆಷನ್​​ ರೂಮ್​ನಲ್ಲಿ ಕಣ್ಣೀರು ಹಾಕಿಕೊಂಡು ಹೇಳಿದ ಸಂಗೀತಾ
ಡ್ರೋನ್​ ಪ್ರತಾಪ್​, ಸಂಗೀತಾ ಶೃಂಗೇರಿ
Edited By:

Updated on: Dec 12, 2023 | 6:31 AM

ಬಿಗ್​ ಬಾಸ್​ ಮನೆಯಲ್ಲಿ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಅಪರಿಚಿತರಾಗಿ ಬಿಗ್​ ಬಾಸ್​ (Bigg Boss Kannada) ಮನೆ ಸೇರಿದ್ದವರು ಕೆಲವೇ ದಿನಗಳಲ್ಲಿ ಆಪ್ತರಾಗಿಬಿಡುತ್ತಾರೆ. ಅದಕ್ಕೆ ಈಗಾಗಲೇ ಅನೇಕ ನಿದರ್ಶನಗಳು ಸಿಕ್ಕಿವೆ. ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರಲ್ಲೂ ಅದು ಮುಂದುವರಿದಿದೆ. ವಿಶೇಷ ಏನೆಂದರೆ ಸಂಗೀತಾ ಶೃಂಗೇರಿ (Sangeetha Sringeri) ಮತ್ತು ಡ್ರೋನ್​ ಪ್ರತಾಪ್​ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಮೊದಲಿನಿಂದಲೂ ಸಂಗೀತಾ ಶೃಂಗೇರಿ ಅವರನ್ನು ಡ್ರೋನ್​ ಪ್ರತಾಪ್​  (Drone Prathap) ಅವರು ಅಕ್ಕ ಎಂದು ಕರೆಯುತ್ತಾ ಬಂದಿದ್ದಾರೆ. ಅದು ಸಂಗೀತಾಗೆ ನಿಜ ಎನಿಸಿದೆ. ಅದನ್ನು ಅವರು ಕನ್ಫೆಷನ್​ ರೂಮ್​ನಲ್ಲಿ ಹೇಳಿಕೊಂಡಿದ್ದಾರೆ.

ಡ್ರೋನ್​ ಪ್ರತಾಪ್ ಅವರು ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಶೃಂಗೇರಿ ಅವರಿಗೆ ಇಷ್ಟ ಆಗಿದೆ. ಅದನ್ನು ಅವರು ಮನಸಾರೆ ಹೊಗಳಿದ್ದಾರೆ. ‘ನನಗೆ ಪ್ರತಾಪ್​ ತುಂಬ ಇಷ್ಟ’ ಎಂದು ಅವರು ಕನ್ಫೆಷನ್​ ರೂಮ್​ನಲ್ಲಿ ಹೇಳಿದ್ದಾರೆ. ದಿನದಿಂದ ದಿನಕ್ಕೆ ಅವರಿಬ್ಬರ ನಡುವೆ ಬಾಂಧವ್ಯ ಗಟ್ಟಿ ಆಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಟಾಸ್ಕ್​ ಮತ್ತು ನಾಮಿನೇಷನ್​ ಬಂದಾಗ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಕೌತುಕದ ವಿಚಾರ.

ಇದನ್ನೂ ಓದಿ: ‘ಕಣ್ಣು ತೆಗೆದುಬಿಡಿ..’: ವೈದ್ಯರಿಗೆ ಸಂಗೀತಾ ಶೃಂಗೇರಿ ಹೀಗೆ ಹೇಳಿದ್ದು ಯಾಕೆ?

ಒಂದಷ್ಟು ದಿನಗಳು ಕಳೆದ ನಂತರ ಸ್ಪರ್ಧಿಗಳ ಕುಟುಂಬದಿಂದ ಯಾರಾದರೊಬ್ಬರನ್ನು ಬಿಗ್​ ಬಾಸ್​ ಮನೆಯ ಒಳಗೆ ಕರೆಸಲಾಗುತ್ತದೆ. ತಮ್ಮ ಮನೆಯಿಂದ ಯಾರೂ ಬರುವುದು ಬೇಡ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಆದರೆ ಡ್ರೋನ್​ ಪ್ರತಾಪ್​ ಅವರ ಮನೆಯಿಂದ ಯಾರಾದರೂ ಬಂದರೆ ತಮಗೆ ಖುಷಿ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತಾಪ್​ ಅವರನ್ನು ಪ್ರೀತಿಯಿಂದ ಪ್ರತು ಎಂದು ಸಂಗೀತಾ ಕರೆದಿದ್ದಾರೆ.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ

ಡ್ರೋನ್​ ಪ್ರತಾಪ್​ ಅವರು ಬಿಗ್​ ಬಾಸ್​ ಮನೆಗೆ ಬರುವುದಕ್ಕೂ ಮುನ್ನ ನೆಗೆಟಿವ್​ ರೀತಿಯಲ್ಲಿ ಸುದ್ದಿ ಆಗಿದ್ದರು. ಆದರೆ ದೊಡ್ಮನೆ ಒಳಗೆ ಬಂದ ನಂತರ ಅವರ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯ ಬಂದಾಗಿದೆ. ವೀಕ್ಷಕರಿಂದ ಹೆಚ್ಚು ವೋಟ್​ ಪಡೆಯುವಲ್ಲಿ ಡ್ರೋನ್​ ಪ್ರತಾಪ್​ ಯಶಸ್ವಿ ಆಗಿದ್ದಾರೆ. ಅವರು ಕೂಡ ಫಿನಾಲೆಗೆ ತಲುಪಬೇಕು, ಟ್ರೋಫಿ ಗೆಲ್ಲಬೇಕು ಎಂದು ಅನೇಕರು ಆಶಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:47 pm, Mon, 11 December 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us