ಒಂಭತ್ತು ವರ್ಷಗಳ ಬಿಗ್ ಬಾಸ್ ಜರ್ನಿ ಹೇಗಿತ್ತು? ವಿಶೇಷ ವಿಡಿಯೋ ಹಂಚಿಕೊಂಡ ಕಲರ್ಸ್

| Updated By: ರಾಜೇಶ್ ದುಗ್ಗುಮನೆ

Updated on: Oct 06, 2023 | 11:46 AM

ವಿದೇಶದಲ್ಲಿದ್ದ ‘ಬಿಗ್ ಬ್ರದರ್​’ ಕಾನ್ಸೆಪ್ಟ್​ನ ಭಾರತಕ್ಕೆ ‘ಬಿಗ್ ಬಾಸ್’ ಆಗಿ ಪರಿಚಯಿಸಲಾಯಿತು. ಮೊದಲು ಈ ಶೋ ಶುರುವಾಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡಕ್ಕೆ ಬಿಗ್ ಬಾಸ್ ಎಂಟ್ರಿ ಕೊಟ್ಟಿತು. ಮೊದಲ ಸಿನೀಸನ್​ನಿಂದ ಈಗ ಪ್ರಸಾರ ಕಾಣಲಿರುವ 10ನೇ ಸೀಸನ್​ವರೆಗೆ ಸುದೀಪ್​ ಅವರದ್ದೇ ಸಾರಥ್ಯ. ಅನಾರೋಗ್ಯ

ಒಂಭತ್ತು ವರ್ಷಗಳ ಬಿಗ್ ಬಾಸ್ ಜರ್ನಿ ಹೇಗಿತ್ತು? ವಿಶೇಷ ವಿಡಿಯೋ ಹಂಚಿಕೊಂಡ ಕಲರ್ಸ್
ಬಿಗ್ ಬಾಸ್
Follow us on

ಯಾವುದೇ ಸ್ಪರ್ಧಿ ಬಿಗ್ ಬಾಸ್ (Bigg Boss) ಮನೆಯಿಂದ ಹೊರಗೆ ಹೋಗುವಾಗ ಜರ್ನಿಯ ವಿಡಿಯೋ ತೋರಿಸಲಾಗುತ್ತದೆ. ಮೊದಲು ಎಲಿಮಿನೇಟ್ ಆಗುವ ಸ್ಪರ್ಧಿಯಿಂದ ಹಿಡಿದು ವಿಜೇತರವರೆಗೂ ಇದನ್ನು ಮಿಸ್ ಮಾಡುವುದಿಲ್ಲ. ಅನೇಕರು ಇದನ್ನು ನೋಡಲೆಂದೇ ಕಾದಿರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಕಳೆದ ಖುಷಿಯ, ದುಃಖದ ಹಾಗೂ ಸಿಟ್ಟಿನ ಕ್ಷಣಗಳನ್ನು ಜೋಡಿಸಿ ಈ ವಿಡಿಯೋ ಮಾಡಲಾಗುತ್ತದೆ. ಸ್ಪರ್ಧಿಗಳಿಗೆ ಹೊಂದುವ ಸಾಂಗ್​ನ ಹಾಕಲಾಗುತ್ತದೆ. ಇದನ್ನು ನೋಡಿದವರು ಒಮ್ಮೆ ಭಾವುಕರಾಗುತ್ತಾರೆ.  ಈಗ ‘ಬಿಗ್ ಬಾಸ್ ಕನ್ನಡ’ 10ನೇ ಸೀಸನ್​ಗೆ ಕಾಲಿಟ್ಟಿದೆ. ಬಿಗ್ ಬಾಸ್ ಜರ್ನಿ ಹೇಗಿತ್ತು ಎಂಬುದನ್ನು ತೋರಿಸಲಾಗಿದೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.

ವಿದೇಶದಲ್ಲಿದ್ದ ‘ಬಿಗ್ ಬ್ರದರ್​’ ಕಾನ್ಸೆಪ್ಟ್​ನ ಭಾರತಕ್ಕೆ ‘ಬಿಗ್ ಬಾಸ್’ ಆಗಿ ಪರಿಚಯಿಸಲಾಯಿತು. ಮೊದಲು ಈ ಶೋ ಶುರುವಾಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡಕ್ಕೆ ಬಿಗ್ ಬಾಸ್ ಎಂಟ್ರಿ ಕೊಟ್ಟಿತು. ಮೊದಲ ಸಿನೀಸನ್​ನಿಂದ ಈಗ ಪ್ರಸಾರ ಕಾಣಲಿರುವ 10ನೇ ಸೀಸನ್​ವರೆಗೆ ಸುದೀಪ್​ ಅವರದ್ದೇ ಸಾರಥ್ಯ. ಅನಾರೋಗ್ಯ ಕಾರಣದಿಂದ ಒಂದೆರಡು ಎಪಿಸೋಡ್​ನ ಬಿಟ್ಟಿದ್ದು ಹೊರತುಪಡಿಸಿದರೆ ಅವರು ನಿರೂಪಣೆಯನ್ನು ಮಿಸ್ ಮಾಡಿಕೊಳ್ಳಲೇ ಇಲ್ಲ. ಸಿನಿಮಾ ಕೆಲಸಗಳ ಮಧ್ಯೆಯೂ ಅವರು ಬಿಗ್ ಬಾಸ್ ನಿರೂಪಣೆಗೂ ಸಮಯ ನೀಡುತ್ತಾರೆ.

ಬಿಗ್ ಬಾಸ್ ಮೊದಲ ಸೀಸನ್ ಪ್ರಸಾರ ಕಂಡಿದ್ದು 2013ರ ಮಾರ್ಚ್ 24ರಂದು. ಇಟಿವಿ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಂಡಿತು. ಅರುಣ್ ಸಾಗರ್, ವಿಜಯ್ ರಾಘವೇಂದ್ರ ಸೇರಿದಂತೆ ಅನೇಕರು ಸ್ಪರ್ಧಿಸಿದ್ದರು. ಎರಡನೇ ಸೀಸನ್ ಏಷ್ಯಾನೆಟ್ ಸುವರ್ಣದಲ್ಲಿ ಪ್ರಸಾರ ಕಂಡಿತು. ಎರಡನೇ ಸೀಸನ್ ಲಾಂಚ್ ಆಗಿದ್ದು 2014ರಲ್ಲಿ. ಇವೆರಡೂ ಸೀಸನ್​ಗಳು ನಡೆದಿದ್ದು ಪುಣೆಯ ಲೋನಾವಾಲಾದಲ್ಲಿ. ಮೂರು ಹಾಗೂ ನಾಲ್ಕನೇ ಸೀಸನ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿತು. ಐದನೇ ಸೀಸನ್ ಕಲರ್ಸ್ ಸೂಪರ್​ನಲ್ಲಿ ವೀಕ್ಷಣೆಗೆ ಲಭ್ಯವಿತ್ತು.

2018ರಲ್ಲಿ ಆರನೇ ಸೀಸನ್ ಪ್ರಸಾರ ಕಂಡಿತು. ಈ ಸೀಸನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಳಿಕ ವೂಟ್​ನಲ್ಲೂ ವೀಕ್ಷಣೆಗೆ ಲಭ್ಯವಿತ್ತು. ಏಳು, ಎಂಟು ಹಾಗೂ ಒಂಭತ್ತನೇ ಸೀಸನ್​ಗಳು ಕಲರ್ಸ್ ಕನ್ನಡದಲ್ಲೇ ಪ್ರಸಾರ ಕಂಡವು. ಕಳೆದ ವರ್ಷ ಬಿಗ್ ಬಾಸ್ ಒಟಿಟಿ ಸೀಸನ್ ಪ್ರಸಾರ ಕಂಡಿತ್ತು. 2021ರಲ್ಲಿ ಮಿನಿ ಸೀಸನ್ ಕೂಡ ಇತ್ತು. ಮಿನಿ ಸೀಸನ್​ ಒಂದು ವಾರಗಳ ಕಾಲ ನಡೆದಿತ್ತು. ಕೇವಲ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ: ‘ನನ್ನ ಕರಿಯರ್ ಪ್ಲಾನ್ ಬೇರೆಯೇ ಇದೆ’; ಬಿಗ್ ಬಾಸ್ ಎಂಟ್ರಿ ಬಗ್ಗೆ ರಂಜನಿ ರಾಘವನ್ ಸ್ಪಷ್ಟನೆ

ಮೊದಲ ಸೀಸನ್​ನಿಂದ ಒಂಭತ್ತನೇ ಸೀಸನ್​ವರೆಗೂ ಬಿಗ್ ಬಾಸ್ ಜರ್ನಿ ಹೇಗಿತ್ತು ಎಂಬುದನ್ನು ತೋರಿಸುವಂಥ ವಿಡಿಯೋನ ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುದೀಪ್ ಖಡಕ್ ನಿರೂಪಣೆ, ಹಾಸ್ಯ, ಸ್ಪರ್ಧಿಗಳ ವಿನ್ನಿಂಗ್ ಮೂಮೆಂಟ್, ಮನೆಯಲ್ಲಿ ನಡೆದ ಖುಷಿ ಹಾಗೂ ದುಃಖದ ವಿಚಾರಗಳನ್ನು ಇದರಲ್ಲಿ ತೋರಿಸಲಾಗಿದೆ. ಈ ವಿಡಿಯೋ ಅನೇಕರಿಗೆ ಇಷ್ಟವಾಗಿದೆ. ‘ನೆನಪುಗಳೊಂದಿಗೆ ಬಿಗ್ ಬಾಸ್ ಕನ್ನಡದ ಹತ್ತು ವರ್ಷಗಳ ಜರ್ನಿ’ ಎಂದು ಈ ಪೋಸ್ಟ್​​ಗೆ ಕ್ಯಾಪ್ಶನ್ ನೀಡಲಾಗಿದೆ.

ಬಿಗ್ ಬಾಸ್ ಹೊಸ ಸೀಸನ್ ಬಗ್ಗೆ ನಿರೀಕ್ಷೆ

ಈ ಬಾರಿಯ ‘ಬಿಗ್ ಬಾಸ್’ ಹೊಸ ಸೀಸನ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದಕ್ಕೆ ಕಾರಣ ಹಲವು. ಈಗಾಗಲೇ ತಿಳಿಸಿರುವಂತೆ, ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿರುವ ಶ್ವಾನ ದೊಡ್ಮನೆಗೆ ಎಂಟ್ರಿ ಕೊಡಲಿದೆ. ಈ ಮನೆಯಲ್ಲಿ ಶ್ವಾನ ಯಾವ ರೀತಿಯಲ್ಲಿ ಸ್ಪರ್ಧಿಸುತ್ತದೆ ಎನ್ನುವ ಕುತೂಹಲ ಮೂಡಿದೆ. ಇದರ ಜೊತೆಗೆ ಬಿಗ್ ಬಾಸ್​ಗಾಗಿ ಹೊಸ ಮನೆ ನಿರ್ಮಾಣಗೊಂಡಿದೆ. ಈ ಮನೆಯಲ್ಲಿ ಸ್ಪರ್ಧಿಗಳು 100 ದಿನ ಸಮಯ ಕಳೆಯಲಿದ್ದಾರೆ. ಭಾನುವಾರ (ಅಕ್ಟೋಬರ್ 8) ಸಂಜೆ 6 ಗಂಟೆಗೆ ಬಿಗ್ ಬಾಸ್ ಲಾಂಚ್ ಆಗಲಿದೆ. ಆ ಬಳಿಕ ಸ್ಪರ್ಧಿಗಳನ್ನು ಮನೆಯ ಒಳಗೆ ಕಳುಹಿಸಲಾಗುತ್ತದೆ. ಪ್ರತಿ ದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ