Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಬಿಗ್​ ಬಾಸ್​ನಲ್ಲಿ ಈ ವಿಚಾರಗಳು ಬೇಡವೇ ಬೇಡ ಎನ್ನುತ್ತಿದ್ದಾರೆ ಫ್ಯಾನ್ಸ್..

ಬಿಗ್ ಬಾಸ್ ಮನೆಗೆ ಯಾರ್ಯಾರು ಬರ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವೀಕ್ಷಕರಿಗೆ ಕುತೂಹಲ ಇದೆ. ಈ ಮಧ್ಯೆ ಕೆಲವು ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಇರದೇ ಇರಲಿ ಎಂಬುದು ಬಿಗ್ ಬಾಸ್ ಅಭಿಮಾನಿಗಳ ಕೋರಿಕೆ. ಅದು ಯಾವುದು? ಆ ಬಗ್ಗೆ ಇಲ್ಲಿದೆ ವಿವರ.

ಈ ವರ್ಷ ಬಿಗ್​ ಬಾಸ್​ನಲ್ಲಿ ಈ ವಿಚಾರಗಳು ಬೇಡವೇ ಬೇಡ ಎನ್ನುತ್ತಿದ್ದಾರೆ ಫ್ಯಾನ್ಸ್..
ಬಿಗ್ ಬಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 07, 2023 | 8:18 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ನಾಳೆ (ಅಕ್ಟೋಬರ್ 8) ಅದ್ದೂರಿಯಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಎಂದಿನ ಜೋಶ್​ನಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಮನೆಗೆ ಯಾರ್ಯಾರು ಬರ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವೀಕ್ಷಕರಿಗೆ ಕುತೂಹಲ ಇದೆ. ಈ ಮಧ್ಯೆ ಕೆಲವು ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಇರದೇ ಇರಲಿ ಎಂಬುದು ಬಿಗ್ ಬಾಸ್ ಅಭಿಮಾನಿಗಳ ಕೋರಿಕೆ. ಅದು ಯಾವುದು? ಆ ಬಗ್ಗೆ ಇಲ್ಲಿದೆ ವಿವರ.

ಫೇಮಸ್ ಆಗೋಕೆ ಲವ್ ಕಹಾನಿ

ಲವ್​ ನಾಟಕವಾಡಿದರೆ ಬಿಗ್ ಬಾಸ್ ಮನೆಯಲ್ಲಿ ಫೇಮಸ್ ಆಗಬಹುದು ಎಂಬುದು ಕೆಲವರ ಲೆಕ್ಕಾಚಾರ. ಈ ಕಾರಣದಿಂದಲೇ ಕೆಲವರು ಲವ್ ನಾಟಕವಾಡುತ್ತಾರೆ. ಮನೆಯಿಂದ ಹೊರ ಬಂದ ಬಳಿಕ ಆ ಬಗ್ಗೆ ಸುದ್ದಿಯೇ ಇರುವುದಿಲ್ಲ. ಹಲವು ಸೀಸನ್​ಗಳಲ್ಲಿ ಇದು ನಡೆದಿದೆ. ಬಿಗ್ ಬಾಸ್ ಮನೆ ಒಳಗೆ ಈ ಬಾರಿ ಲವ್ ನಾಟಕ ಬೇಡ ಎಂಬುದು ಬಹುತೇಕರ ಕೋರಿಕೆ.

ಬಾಡಿ ಶೇಮಿಂಗ್ ಬೇಡ

ಬಿಗ್ ಬಾಸ್ ಮನೆಯಲ್ಲಿ ದಪ್ಪಗಿದ್ದವರು, ತೆಳ್ಳಗಿದ್ದವರು, ಕಪ್ಪಿದ್ದವರು, ಬೆಳ್ಳಗಿದ್ದವರು ಹೀಗೆ ಎಲ್ಲಾ ರೀತಿಯವರು ಬರುತ್ತಾರೆ. ಬಣ್ಣ, ಜಾತಿ, ದೇಹದ ಗಾತ್ರದ ವಿಚಾರ ಇಟ್ಟುಕೊಂಡು ಕೆಲವೊಮ್ಮೆ ಬಾಡಿ ಶೇಮಿಂಗ್ ಮಾಡಲಾಗಿದೆ. ಈ ರೀತಿ ಮಾಡೋದು ತಪ್ಪು. ಈ ಬಾರಿ ಆ ರೀತಿ ಆಗದಿರಲಿ ಎಂಬುದು ಅನೇಕರ ಕೋರಿಕೆ.

ವ್ಯಕ್ತಿತ್ವಕ್ಕೆ ದಕ್ಕೆ

ಹಲವು ರೀತಿಯ ವ್ಯಕ್ತಿತ್ವದವರು ಬಿಗ್ ಬಾಸ್ ಮನೆಗೆ ಬರುತ್ತಾರೆ. ಕೆಲವರು ವಿವಾದ ಮಾಡಿಕೊಂಡು ಬಂದವರೂ ಇದ್ದಿರಬಹುದು. ಈ ವಿಚಾರ ಇಟ್ಟುಕೊಂಡು ಅಶ್ಲೀಲ ಕಮೆಂಟ್​ಗಳನ್ನು ಮಾಡಲಾಗುತ್ತದೆ. ಆ ರೀತಿ ಆಗದಿರಲಿ ಎನ್ನುತ್ತಿದ್ದಾರೆ ಅನೇಕರು.

ಸುದೀಪ್ ಬಗ್ಗೆ ಅನುಮಾನವೇ ಬೇಡ

ಸುದೀಪ್ ಅವರು ಖಡಕ್ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಅವರು ಎಂದಿಗೂ ಸ್ವಜನಪಕ್ಷಪಾತ ಮಾಡಿಲ್ಲ. ಈ ವರ್ಷವೂ ಅದು ಮುಂದುವರಿಯಲಿ ಎಂಬುದು ಅನೇಕರ ಕೋರಿಕೆ. ಸುದೀಪ್ ಬದಲಾಗುವುದಿಲ್ಲ ಎಂಬುದು ಅನೇಕರ ನಂಬಿಕೆ. ಅವರ ನಿರೂಪಣೆಗಾಗಿ ಸಾಕಷ್ಟು ಮಂದಿ ಕಾದಿದ್ದಾರೆ.

ಫಿಸಿಕಲ್ ಫೈಟ್ ಬೇಡ

‘ಬಿಗ್ ಬಾಸ್’ನಲ್ಲಿ ಮಾತಿನ ಚಕಮಕಿ ಸಾಮಾನ್ಯ. ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೈಕೈ ಮಿಲಾಯಿಸಿಕೊಂಡ ಉದಾಹರಣೆ ಇದೆ. ಆ ಕ್ಷಣವೇ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಈ ವರ್ಷ ಆ ರೀತಿ ಆಗದಿರಲಿ ಎಂಬುದು ಅಭಿಮಾನಿಗಳ ಕೋರಿಕೆ.

ಅಶ್ಲೀಲ ಭಾಷೆ

ಜಗಳಗಳು ನಡೆಯುವಾಗ ಅಶ್ಲೀಲ ಪದ ಬಳಕೆ ಹೇರಳವಾಗಿ ಆಗುತ್ತದೆ. ಇದಕ್ಕೆ ವಾಹಿನಿಯವರು ಮ್ಯೂಟ್ ಹಾಕುತ್ತಾರೆ. ಆದಾಗ್ಯೂ ಈ ರೀತಿಯ ಪದ ಬಳಕೆ ಆಗದಿರಲಿ ಎಂಬುದು ಅನೇಕರ ಕೋರಿಕೆ.

ಮಿತಿ ಮೀರದಿರಲಿ ಸಲುಗೆ

ಪುರುಷ ಸ್ಪರ್ಧಿ ಹಾಗೂ ಮಹಿಳಾ ಸ್ಪರ್ಧಿ ಮಧ್ಯೆ ಸಲುಗೆ ಹೆಚ್ಚಿದರೆ ಅದು ನೋಡುಗರಿಗೆ ಬೇರೆಯದೇ ರೀತಿ ಕಾಣಬಹುದು. ಫ್ಯಾಮಿಲಿ ಆಡಿಯನ್ಸ್​ಗೆ ಕೆಲವು ಘಟನೆಗಳು ಮುಜುಗರ ತರಬಹುದು. ಆ ರೀತಿ ಆಗದಿರಲಿ ಅನ್ನೋದು ಕೆಲವರ ಕೋರಿಕೆ.

ಇದನ್ನೂ ಓದಿ: ಒಂಭತ್ತು ವರ್ಷಗಳ ಬಿಗ್ ಬಾಸ್ ಜರ್ನಿ ಹೇಗಿತ್ತು? ವಿಶೇಷ ವಿಡಿಯೋ ಹಂಚಿಕೊಂಡ ಕಲರ್ಸ್

ಬಿಗ್ ಬಾಸ್ ಬಗ್ಗೆ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಭಾನುವಾರ ಸಂಜೆ ಆರು ಗಂಟೆಗೆ ಆರಂಭ ಆಗಲಿದೆ. ಈಗಾಗಲೇ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದ ಶ್ವಾನ ದೊಡ್ಡ ಮನೆಗೆ ಹೋಗತ್ತದೆ ಅನ್ನೋದನ್ನು ಖಚಿತಪಡಿಸಲಾಗಿದೆ. ಇದನ್ನು ಹೊರತುಪಡಿಸಿ ಮತ್ಯಾರ್ಯಾರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ