ಭಾರಿ ನಿರೀಕ್ಷೆ ಮೂಡಿಸಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಆರಂಭ ಆಗಿದೆ. ವಿವಿಧ ಮನಸ್ಥಿತಿಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಆಪ್ತವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ನಮ್ರತಾ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋಗೆ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಕಲರ್ಸ್ ಕನ್ನಡ’ ವಾಹಿನಿ ಮತ್ತು ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.
ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ನಮ್ರತಾ ಗೌಡ ಅವರು ಬಿಗ್ ಬಾಸ್ ವೇದಿಕೆಗೆ ಎಂಟ್ರಿ ನೀಡಿದ್ದಾರೆ. 100 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡು ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಇದು 10ನೇ ಸೀಸನ್ ಆಗಿರುವುದರಿಂದ ಎಲ್ಲವೂ ಭರ್ಜರಿಯಾಗಿ ಇರಲಿದೆ. ಕೆಲವು ನಿಯಮಗಳು ಹೊಸದಾಗಿ ಸೇರ್ಪಡೆ ಆಗಿವೆ.
‘ನಾನು ನರ್ವಸ್ ಆಗಿದ್ದೇನೆ. ಒಂದು ವಾರ ಮಾತ್ರ ತಂದೆ-ತಾಯಿಯನ್ನು ಬಿಟ್ಟು ಇದ್ದಿದ್ದು. ಇಲ್ಲಿ 100 ದಿನ ಇರುತ್ತೇವೆ ಎಂಬ ಭರವಸೆಯಿಂದ ಬಂದಿದ್ದೇನೆ. ಜೀವನದ ಬಗ್ಗೆ ಕಲಿಯಲು ಬಂದಿದ್ದೇನೆ. ಬಾಲ್ಯವನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ. ಅದನ್ನು ನಾನು ಇಲ್ಲಿ ನೋಡಬೇಕು’ ಎಂದು ನಮ್ರತಾ ಹೇಳಿದ್ದಾರೆ. ಅವರು ಈ ಶೋನಲ್ಲಿ ಸ್ಪರ್ಧಿಸಲು ಅರ್ಹರು ಹೌದೋ ಅಲ್ಲವೋ ಎಂದು ಓಟಿಂಗ್ ಮೂಲಕ ನಿರ್ಧರಿಸಲಾಯಿತು. 86 ಪರ್ಸೆಂಟ್ ಓಟ್ ಪಡೆಯುವ ಮೂಲಕ ಅವರು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆದರು.
‘ಕೃಷ್ಣ ರುಕ್ಮಿಣಿ’ ಧಾರಾವಾಯಿ ಮೂಲಕ ನಮ್ರತಾ ಗೌಡ ಅವರು ಕಿರಿತೆರೆಯಲ್ಲಿ ಜರ್ನಿ ಆರಂಭಿಸಿದರು. ನಂತರ ‘ಪುಟ್ಟಗೌರಿ’ ಮದುವೆ ಧಾರಾವಾಹಿಯಲ್ಲಿ ಹಿಮಾ ಎಂಬ ಪಾತ್ರವನ್ನು ಮಾಡಿ ಅವರು ಫೇಮಸ್ ಆದರು. ‘ನಾಗಿಣಿ 2’ ಧಾರಾವಾಹಿಯಲ್ಲಿ ಅವರು ಮಾಡಿದ ಶಿವಾನಿ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತು. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ. ಈಗ ಬಿಗ್ ಬಾಸ್ ವೇದಿಕೆಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಮ್ರತಾ ಗೌಡ ಅವರು ಬಿಕಿನಿ ಫೋಟೋ ಹಾಕಿ ಸುದ್ದಿ ಆಗಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Sun, 8 October 23