AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಕನ್ನಡ’ ಫಿನಾಲೆ ಯಾವಾಗ?; ಪಂಚಾಯ್ತಿಯಲ್ಲಿ ಮಾಹಿತಿ ಕೊಟ್ಟ ಸುದೀಪ್

‘ಇನ್ನೊಂದು ತಿಂಗಳಲ್ಲಿ ಬಿಗ್ ಬಾಸ್ ಫಿನಾಲೆ’ ಎಂದು ಸುದೀಪ್ ಹೇಳಿದ್ದಾರೆ. ಅಂದರೆ ಜನವರಿ 27 ಹಾಗೂ 28ರಂದು ಫಿನಾಲೆ ಎಪಿಸೋಡ್ ನಡೆಯಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನು, ಫಿನಾಲೆ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ. ನಾಲ್ಕು ವಾರಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

‘ಬಿಗ್ ಬಾಸ್ ಕನ್ನಡ’ ಫಿನಾಲೆ ಯಾವಾಗ?; ಪಂಚಾಯ್ತಿಯಲ್ಲಿ ಮಾಹಿತಿ ಕೊಟ್ಟ ಸುದೀಪ್
ಕಿಚ್ಚ ಸುದೀಪ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 31, 2023 | 3:42 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಕಳೆದ ಸೀಸನ್​ಗಳಿಗಿಂತ ವಿಶೇಷ ಎನಿಸಿಕೊಂಡಿದೆ. ಈ ಸೀಸನ್​ ಸ್ಪರ್ಧಿಗಳು ಅಗ್ರೆಸ್ ಆಗಿ ಆಡಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅನೇಕರಿಗೆ ಇದರಿಂದ ಹಾನಿ ಉಂಟಾಗಿದೆ. ಇದರ ಜೊತೆ ಸ್ಪರ್ಧಿಗಳು ಒಂದಷ್ಟು ಮನರಂಜನೆ ಕೂಡ ನೀಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ 100 ಎಪಿಸೋಡ್​ಗೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿಯವರು ನಿರ್ಧರಿಸಿದ್ದಾರೆ. ಬಿಗ್ ಬಾಸ್ ಫಿನಾಲೆ (Bigg Boss Finale) ನಡೆಯೋದು ಯಾವಾಗ ಎಂದು ಎಲ್ಲರೂ ಯೋಚಿಸುತ್ತಿದ್ದರು. ಇದಕ್ಕೆ ಸುದೀಪ್ (Kichcha Sudeep) ಅವರು ಉತ್ತರ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿದ್ದು ಅಕ್ಟೋಬರ್ 8ರಂದು. ನಟನೆ, ಹಾಸ್ಯ, ಪತ್ರಿಕೋದ್ಯಮ ಮತ್ತಿತರ ಕ್ಷೇತ್ರದಿಂದ ಸ್ಪರ್ಧಿಗಳನ್ನು ತರಲಾಯಿತು. ಆರಂಭದಲ್ಲೇ ಗುಂಪುಗಾರಿಕೆ ಆರಂಭ ಆಯಿತು. ಆದರೆ, ಇದು ಹೆಚ್ಚು ದಿನ ನಡೆಯಲಿಲ್ಲ. ವಿನಯ್ ಅವರು ಅಗ್ರೆಸ್ ಆಗಿ ಆಡಿದ್ದರಿಂದ ಸಾಕಷ್ಟು ಜನರಿಗೆ ತೊಂದರೆ ಆಯಿತು. ಇಡೀ ಮನೆ ಹೊತ್ತಿ ಉರಿಯಿತು. ಈಗ ಎಲ್ಲವೂ ಶಾಂತವಾಗುತ್ತಿದೆ. ಇದರ ಜೊತೆ ಫಿನಾಲೆ ಸಮೀಪಿಸಿದೆ.

ಲೆಕ್ಕದಂತೆ ಹೋದರೆ ಇನ್ನು ಎರಡು ವಾರಗಳಲ್ಲಿ ‘ಬಿಗ್ ಬಾಸ್’ ಫಿನಾಲೆ ಬರಬೇಕು. ಆದರೆ, ಎರಡು ವಾರ ಹೆಚ್ಚುವರಿಯಾಗಿ ನಡೆಸಲಾಗುತ್ತಿದೆ. ಈ ಮೊದಲು ಹಲವು ಸೀಸನ್​ಗಳು 98ದಿನಗಳಿಗೆ ಪೂರ್ಣಗೊಂಡಿವೆ. ಟಿಆರ್​ಪಿ ಉತ್ತಮವಾಗಿದ್ದಾಗ ಬಿಗ್ ಬಾಸ್​ 112 ದಿನ, 117 ದಿನ ನಡೆಸಿದ್ದೂ ಇದೆ. ಈ ಬಾರಿಯೂ ಬಿಗ್ ಬಾಸ್​ ಟಿಆರ್​ಪಿ ಒಳ್ಳೆಯ ರೀತಿಯಲ್ಲಿ ಬರುತ್ತಿದೆ. ಹೀಗಾಗಿ, ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ನಡೆಯಲಿದೆ. ‘ಇನ್ನೊಂದು ತಿಂಗಳಲ್ಲಿ ಬಿಗ್ ಬಾಸ್ ಫಿನಾಲೆ’ ಎಂದು ಸುದೀಪ್ ಹೇಳಿದ್ದಾರೆ. ಅಂದರೆ ಜನವರಿ 27 ಹಾಗೂ 28ರಂದು ಫಿನಾಲೆ ಎಪಿಸೋಡ್ ನಡೆಯಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನು, ಫಿನಾಲೆ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ. ನಾಲ್ಕು ವಾರಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಬೆಡ್​ರೂಂನಲ್ಲಿ ಬ್ಲ್ಯಾಂಕೆಟ್ ಮುಚ್ಚಿಕೊಂಡು ಬಿಗ್ ಬಾಸ್​ ಸ್ಪರ್ಧಿಗಳ ಸರಸ; ವಿಡಿಯೋ ನೋಡಿ ನೆಟ್ಟಿಗರ ಛೀಮಾರಿ

ಸದ್ಯ ಬಿಗ್ ಬಾಸ್​ನಲ್ಲಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ನಮ್ರತಾ ಗೌಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕಲ್ ಅಜಯ್, ಸಿರಿ, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ ಇದ್ದಾರೆ. ಈ ವಾರ ಸಿರಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಇದರ ಜೊತೆಗೆ 24 ಗಂಟೆ ಬಿಗ್ ಬಾಸ್ ಲೈವ್ ನೋಡಬಹುದು. ಈ ವರ್ಷ ಗೆದ್ದವರಿಗೆ ಬಂಪರ್ ಪ್ರೈಜ್​ ಮನಿ ಜೊತೆ ಮತ್ತೊಂದಷ್ಟು ಉಡುಗೊರೆ ಸಿಗಲಿದೆ. 50 ಲಕ್ಷ ರೂಪಾಯಿ ಹಣ, ಒಂದು ಮಾರುತಿ ಸಂಸ್ಥೆಯ ಬ್ರೇಜಾ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್ ಕೂಡ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ