ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಆರಂಭದಿಂದ ನೋಡುತ್ತಿದ್ದ ಪ್ರೇಕ್ಷಕರು ‘ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?’ ಎನ್ನುವಂಥಹಾ ಸ್ಥಿತಿ ಬುಧವಾರ ಎಪಿಸೋಡ್ ನೋಡುವಾಗ ನಿರ್ಮಾಣವಾಗಿತ್ತು. ಅಂಥಹದ್ದೇನಾಯ್ತು?

ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?
Follow us
ಮಂಜುನಾಥ ಸಿ.
|

Updated on: Jan 10, 2024 | 11:34 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಸ್ಪರ್ಧಿಗಳ ನಡುವೆ ಸಂಬಂಧಗಳಿಗೆ ಪರಸ್ಪರರ ಬಗೆಗಿನ ಅಭಿಪ್ರಾಯಗಳಿಗೆ ಆಯಸ್ಸು ಬಹಳ ಕಡಿಮೆ. ಒಬ್ಬರನ್ನೊಬ್ಬರು ಗುದ್ದಿ ಕೆಡವುಷ್ಟು ಕೋಪ, ಸಿಟ್ಟು ಹೊಂದಿರುವವರು ಸಹ ಇನ್ನೊಂದು ಟಾಸ್ಕ್​ನಲ್ಲಿ ಒಬ್ಬರ ಕೈ ಇನ್ನೊಬ್ಬರು ಹಿಡಿದು ಒಟ್ಟಿಗೆ ಆಡಬೇಕಾಗುತ್ತದೆ. ಆದರೆ ಈ ಬಿಗ್​ಬಾಸ್​ ಸೀಸನ್​ನಲ್ಲಿ ಈ ದ್ವೇಷ-ಪ್ರೀತಿಯ ಆಟ ತುಸು ಗಾಢವಾಗಿಯೇ ಇತ್ತು. ಆರಂಭದಿಂದಲೂ ವಿನಯ್ ಹಾಗೂ ಸಂಗೀತಾ, ವಿನಯ್ ಹಾಗೂ ಡ್ರೋನ್ ನಡುವೆ ಜಗಳ, ವೈಷಮ್ಯ ನಡೆಯುತ್ತಲೇ ಇತ್ತು. ಆದರೆ ಫಿನಾಲೆ ಹಂತಕ್ಕೆ ಬಂದಾಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ಯಾವುದು ಏನೇ ಆದರೂ ವಿನಯ್ ಹಾಗೂ ಸಂಗೀತಾ ಪರಸ್ಪರ ಗೆಳೆಯರಾಗುವುದಿಲ್ಲ, ವಿನಯ್ ಹಾಗೂ ಡ್ರೋನ್ ಪ್ರತಾಪ್ ಸಹ ಗೆಳೆಯರಾಗುವುದಿಲ್ಲ. ಒಬ್ಬರನ್ನು ನೋಡಿ ಒಬ್ಬರು ನಗುವುದಿಲ್ಲ ಎಂದೇ ಪ್ರೇಕ್ಷಕರು ಊಹಿಸಿದ್ದರು. ಹಾಗೆ ಊಹಿಸಲು ಪ್ರೇರೇಪಿಸುವ ಹಲವು ಇಂಟೆನ್ಸ್ ಆದ ಘಟನೆಗಳು, ಜಗಳಗಳು ಇವರ ನಡುವೆ ನಡೆದಿದ್ದವು. ಆದರೆ ಈಗ ಎಲ್ಲ ಬದಲಾಗಿದೆ.

ಈ ವಾರದ ಟಾಸ್ಕ್ ಆರಂಭವಾದಾಗಲೂ ಸಹ ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ಜೋರಾದ ಜಗಳವಾಗಿತ್ತು. ಕಳೆದ ಕೆಲ ವಾರದಿಂದ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಕೋಪವನ್ನು ಈ ವಾರದ ಮೊದಲಲ್ಲೇ ಡ್ರೋನ್ ಪ್ರತಾಪ್ ಮೇಲೆ ಹರಿಬಿಟ್ಟಿದ್ದರು ವಿನಯ್. ಡ್ರೋನ್ ಪ್ರತಾಪ್​ಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದರು. ಪ್ರತಾಪ್ ಸಹ ವಿನಯ್ ವಿರುದ್ಧ ಸತತ ಆರೋಪಗಳನ್ನು ಮಾಡಿದ್ದರು. ಇಬ್ಬರಿಗೂ ಸಹ ಇದು ಹೊಸತಲ್ಲ. ಆದರೆ ತಮ್ಮ ಅಗ್ರೆಶನ್​ನಿಂದ ತಮಗೆ ಹಿನ್ನೆಡೆ ಆಗುತ್ತಿದೆ ಎಂಬುದನ್ನು ಅರಿತಿರುವ ವಿನಯ್, ಪ್ರತಾಪ್​ಗೆ ಕ್ಷಮೆ ಕೇಳಿದರು. ಮಾತ್ರವಲ್ಲ, ಪ್ರತಾಪ್ ಜೊತೆ ಗೆಳೆತನ ಬೆಳೆಸಿ, ಇಷ್ಟು ದಿನಗಳಲ್ಲಿ ಎಂದಿಗೂ ಇಲ್ಲದ ಆತ್ಮೀಯತೆಯನ್ನು ತೋರುತ್ತಿದ್ದಾರೆ. ಪ್ರತಾಪ್ ಸಹ ಇದಕ್ಕೆ ಸ್ಪಂದಿಸುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ನಿಂದ ಹೊರಬಂದ ಮೈಖಲ್​ ಹಾಕಿಕೊಂಡಿದ್ದಾರೆ ಹೊಸ ಯೋಜನೆಗಳು

ಬುಧವಾರದ ಎಪಿಸೋಡ್​ನಲ್ಲಿ ವಿನಯ್ ಹಾಗೂ ಪ್ರತಾಪ್ ಪರಸ್ಪರ ಅಕ್ಕ-ಪಕ್ಕ ಮಲಗಿಕೊಂಡು ಜೋರಾಗಿ ನಗುತ್ತಾ ಮಾತನಾಡುತ್ತಿದ್ದರು. ಮನೆಯ ಸದಸ್ಯರ ಬಗ್ಗೆ ವಿನಯ್ ಏನೇನೋ ಜೋಕ್​ಗಳನ್ನು ಹೇಳಿ ಪ್ರತಾಪ್ ಅನ್ನು ಬಹುವಾಗಿ ನಗಿಸಿದರು. ಡ್ರೋನ್ ಪ್ರತಾಪ್ ನಾಯಕತ್ವದ ಟಾಸ್ಕ್ ಬಂದಾಗಲೂ ಸಹ, ವಿನಯ್, ಪ್ರತಾಪ್ ಅನ್ನು ಆತ್ಮೀಯ ಗೆಳೆಯನಂತೆ ತಬ್ಬಿಕೊಂಡು ತಮಗೆ ಅವಕಾಶ ಕೊಡುವಂತೆ ಕೇಳಿಕೊಂಡರು. ಆ ಬಳಿಕ ಟಾಸ್ಕ್​ ಅನ್ನು ಯಾರು ಗೆಲ್ಲುತ್ತಾರೆ ಎಂದು ಊಹಿಸುವಂತೆ ಬಿಗ್​ಬಾಸ್ ಕೇಳಿದಾಗಲೂ ಸಹ ಪ್ರತಾಪ್ ಹೆಸರನ್ನೇ ಅವರು ತೆಗೆದುಕೊಂಡರು.

ಇನ್ನು ವಿನಯ್ ಹಾಗೂ ಸಂಗೀತಾ ಪರಸ್ಪರ ಗೆಳೆಯರಾಗಿ ಕೆಲ ವಾರಗಳೇ ಆಗಿವೆ. ಕಾರ್ತಿಕ್ ಜೊತೆ ಸ್ನೇಹ ಮುರಿದುಕೊಂಡಿರುವ ಸಂಗೀತಾ, ವಿನಯ್ ಜೊತೆ ತುಸು ಆತ್ಮೀಯರಾಗಿದ್ದಾರೆ. ಕಳೆದ ವೀಕೆಂಡ್​ನಲ್ಲಿ ಮತ್ತೆ ಇಬ್ಬರೂ ತಮ್ಮ ಹಳೆಯ ವರಸೆ ತೋರಿಸಿದ್ದರಾದರೂ. ಈ ವಾರ ಇಬ್ಬರೂ ಮತ್ತೆ ಗೆಳೆಯರಾದಂತಿದ್ದಾರೆ. ಇಬ್ಬರೂ ಸಹ ನಗುತ್ತಾ, ಪರಸ್ಪರ ಆತ್ಮೀಯ ಗೆಳೆಯರಂತೆ ಮಾತನಾಡುತ್ತಾ ಇದ್ದಿದ್ದು ಕಂಡು ಬಂತು. ಇದನ್ನೆಲ್ಲ ನೋಡಿದ ಪ್ರೇಕ್ಷಕರು ‘ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?’ ಎನ್ನುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ