ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದು ಯಾರ್ಯಾರು? ಸೇಫ್ ಆದ್ರಾ ವರ್ತೂರು?

|

Updated on: Nov 15, 2023 | 11:45 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಕಳೆದ ವಾರದ ಎಲಿಮಿನೇಷನ್ ರದ್ದಾಯ್ತು. ಇದೀಗ ಈ ವಾರ ಯಾರು ಹೊರಗೆ ಹೋಗಬೇಕು ಎಂಬುದಕ್ಕೆ ನಾಮಿನೇಷನ್ ಆರಂಭವಾಗಿದೆ. ಈ ವಾರ ವರ್ತೂರು ಸಂತೋಷ್ ಸೇಫ್ ಆದ್ರಾ ಅಥವಾ ನಾಮಿನೇಟ್ ಆದ್ರಾ?

ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದು ಯಾರ್ಯಾರು? ಸೇಫ್ ಆದ್ರಾ ವರ್ತೂರು?
Follow us on

ಬಿಗ್​ಬಾಸ್ ಕನ್ನಡ ಸೀಸನ್ 10 ನಲ್ಲಿ (Bigg Boss Kannada season 10) ಎರಡು ಬಾರಿ ಎಲಿಮಿನೇಷನ್ ರದ್ದಾಗಿದೆ. ಒಮ್ಮೆ ಭಾಗ್ಯಶ್ರೀ ಅವರು ನಾಮಿನೇಟ್ ಆಗಿ ಎಲಿಮಿನೇಟ್ ಸಹ ಆಗಿಬಿಟ್ಟಿದ್ದರು ಆದರೆ ಹಬ್ಬದ ಆಫರ್ ಎಂದು ಅವರು ಉಳಿದುಕೊಂಡರು. ಅದರ ಮುಂದಿನ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆದರು. ಅದಾದ ಬಳಿಕ ಕಳೆದ ವಾರ ನಡೆದ ಎಲಿಮಿನೇಷನ್​ನಲ್ಲಿ ಸೇಫ್ ಆಗಿದ್ದರೂ ವರ್ತೂರು ಸಂತೋಷ್ ತಾವೇ ಮನೆಯಿಂದ ಹೊರಗೆ ಹೋಗಬೇಕೆಂದು ಹಠ ಹಿಡಿದು ಸುದೀಪ್ ಅವರು ಎಲಿಮಿನೇಷನ್ ಅನ್ನೇ ರದ್ದು ಮಾಡಿದರು. ಈಗ ಮತ್ತೊಂದು ವಾರಕ್ಕೆ ಹೊರಗೆ ಹೋಗಲು ನಾಮಿನೇಷನ್ ನಡೆದಿದೆ.

ಬಿಗ್​ಬಾಸ್ ಮನೆಯಲ್ಲಿ ಕೆಲವರು ಫೈನಲ್ ಮೇಲೆ ಕಣ್ಣಿಟ್ಟು ಆಟವಾಡುತ್ತಿದ್ದಾರೆ. ಇನ್ನು ಕೆಲವರು ಇನ್ನೊಂದು ವಾರ ಬಚಾವ್ ಆದರೆ ಸಾಕು ಎಂದು ಆಟವಾಡುತ್ತಿದ್ದಾರೆ. ಕಳೆದ ವಾರದ ಎಲಿಮಿನೇಷನ್ ರದ್ದಾದ ಬಳಿಕ ಈ ವಾರ ಮತ್ತೆ ನಾಮಿನೇಷನ್ ನಡೆದಿದೆ. ಈ ವಾರ ನಾಮಿನೇಷನ್​ ಮಾಡಲು ಸಹ ಟಾಸ್ಕ್ ಒಂದನ್ನು ಬಿಗ್​ಬಾಸ್ ನೀಡಿದರು.

ಮನೆಯ ಸದಸ್ಯರನ್ನು ಮೂರು ತಂಡಗಳಾಗಿ ವಿಂಗಡಿಸಿ ಲೂಡೋ ಆಟ ಆಡಿಸಿದರು. ಆಟದಲ್ಲಿ ಹಲವು ಟ್ವಿಸ್ಟ್​ಗಳಿದ್ದವು. ಕೆಲವರನ್ನು ಸೇವ್ ಮಾಡುವ, ನಾಮಿನೇಟ್ ಮಾಡುವ ಅಧಿಕಾರ ಕೆಲವರಿಗೆ ಸಿಕ್ಕಿತು. ಕೆಲವರು, ಕೆಲವರನ್ನು ಸೇಫ್ ಮಾಡಿದರು. ಅಂತಿಮವಾಗಿ ಸೇಫ್ ಮಾಡುವ ಅಧಿಕಾರ ಸಂಗೀತಾಗೆ ಧಕ್ಕಿತು. ಸಂಗೀತಾ ವರ್ತೂರು ಸಂತೋಷ್ ಅವರನ್ನು ಸೇಫ್ ಮಾಡಿದರು. ಅದಕ್ಕೆ ಮುನ್ನ ಇನ್ನೂ ಕೆಲವರು ಸೇಫ್ ಆಗಿದ್ದರು. ಅಂತಿಮವಾಗಿ ಈ ವಾರ ವಿನಯ್ ಗೌಡ, ತುಕಾಲಿ ಸಂತು, ಈಶಾನಿ, ನೀತು, ಕಾರ್ತಿಕ್, ತನಿಷಾ, ನಮ್ರತಾ ಅವರುಗಳು ನಾಮಿನೇಟ್ ಆದರು. ಅದರ ಜೊತೆಗೆ ಕ್ಯಾಪ್ಟನ್ ಮೈಖಲ್​ ಅವರು ಈ ಮೊದಲೇ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಇದನ್ನೂ ಓದಿ:‘ವರ್ತೂರು ಸಂತೋಷ್ ಬಿಗ್​ಬಾಸ್ ಸಂಭಾವನೆ ಸೇರುವುದು ಅನಾಥಾಶ್ರಮಕ್ಕೆ’

ಈ ನಾಮಿನೇಟ್ ಟಾಸ್ಕ್ ಮನೆಯಲ್ಲಿ ತುಸು ಬಿಸಿ-ಬಿಸಿ ಚರ್ಚೆಗೂ ಕಾರಣವಾಯ್ತು. ತಮ್ಮದೇ ಗೆಳೆಯರಾದ ಕಾರ್ತಿಕ್ ಹಾಗೂ ತನಿಷಾ ಅವಕಾಶ ಸಿಕ್ಕಾಗ ತಮ್ಮನ್ನು ಸೇಫ್ ಮಾಡಲಿಲ್ಲ ಎಂಬ ಬಗ್ಗೆ ಬಹಳ ಬೇಸರ ಮಾಡಿಕೊಂಡಿದ್ದರು. ಆ ವಿಷಯವನ್ನು ಎದುರಾಳಿ ತಂಡದ ನಮ್ರತಾ ಬಳಿ ಹೇಳಿಕೊಂಡರು. ಆ ಬಳಿಕ ನಾಮಿನೇಷನ್ ವಿಷಯಕ್ಕೆ ಸಿರಿ ಹಾಗೂ ನೀತು ನಡುವೆಯೂ ಜಗಳವಾಯ್ತು. ನೀತು, ತಾನು ತುಕಾಲಿಯನ್ನು ಸೇಫ್ ಮಾಡಲು ಬಯಸಿದ್ದೆ ಆದರೆ ಸಿರಿ ಅವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದರು. ಇದರಿಂದಾಗಿ ಸಿರಿ ಹಾಗೂ ತನಿಷಾ ನಡುವೆ ವಾಗ್ವಾದ ನಡೆಯಿತು.

ಅಂತಿಮವಾಗಿ ಈ ವಾರ ವಿನಯ್ ಗೌಡ, ತುಕಾಲಿ ಸಂತು, ಈಶಾನಿ, ನೀತು, ಕಾರ್ತಿಕ್, ತನಿಷಾ, ನಮ್ರತಾ ಹಾಗೂ ಭಾಗ್ಯಶ್ರೀ ನಾಮಿನೇಟ್ ಆಗಿದ್ದಾರೆ. ಈ ಹಿಂದೆ ಎಲಿಮಿನೇಷನ್​ನಿಂದ ಬಚಾವ್ ಆಗಿದ್ದ ಭಾಗ್ಯಶ್ರೀ, ನೀತು ಹಾಗೂ ಇಶಾನಿ ಈ ಬಾರಿಯೂ ನಾಮಿನೇಷನ್​ನಲ್ಲಿದ್ದು ಈ ಮೂವರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗುವ ಸಾಧ್ಯತೆ ಇದೆ. ಬಿಗ್​ಬಾಸ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ