‘ಕನ್ನಡದ ನವಾಜುದ್ದೀನ್ ಸಿದ್ಧಿಕಿ’; ಬಿಗ್ ಬಾಸ್ ಫಿನಾಲೆ ಸಮೀಪಿಸಿದಾಗ ಮಂಜುನ ಹೊಗಳಿದ ತ್ರಿವಿಕ್ರಂ

|

Updated on: Jan 23, 2025 | 6:57 AM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಂಜು ಮತ್ತು ತ್ರಿವಿಕ್ರಂರ ನಡುವಿನ ಸ್ಪರ್ಧಾತ್ಮಕ ಸಂಬಂಧ ಫೈನಲ್ ವಾರದಲ್ಲಿ ಸ್ನೇಹವಾಗಿ ಬದಲಾಗಿದೆ. ತ್ರಿವಿಕ್ರಂ ಅವರು ಮಂಜು ಅವರನ್ನು ‘ಕನ್ನಡದ ನವಾಜುದ್ದೀನ್ ಸಿದ್ದಿಕಿ’ ಎಂದು ಕರೆದು ಪತ್ರದಲ್ಲಿ ಪ್ರಶಂಸಿಸಿದ್ದಾರೆ. ಆರೋಗ್ಯ ಮತ್ತು ಮದ್ಯಪಾನದ ಬಗ್ಗೆಯೂ ಉತ್ತಮ ಸಲಹೆಗಳನ್ನು ನೀಡಿದ್ದಾರೆ.

‘ಕನ್ನಡದ ನವಾಜುದ್ದೀನ್ ಸಿದ್ಧಿಕಿ’; ಬಿಗ್ ಬಾಸ್ ಫಿನಾಲೆ ಸಮೀಪಿಸಿದಾಗ ಮಂಜುನ ಹೊಗಳಿದ ತ್ರಿವಿಕ್ರಂ
ಮಂಜು-ತ್ರಿವಿಕ್ರಂ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಂ ಮಧ್ಯೆ ಯಾವುದೂ ಸರಿ ಇರಲಿಲ್ಲ. ಇವರ ಮಧ್ಯೆ ಆಗಾಗ ಕಿರಿಕ್​​ಗಳು ಆಗಿದ್ದು ಇದೆ. ಇವರಿಬ್ಬರೂ ಒಳ್ಳೆಯ ಕಾಂಪಿಟೇಟರ್​ಗಳು. ಇಬ್ಬರೂ ಫಿನಾಲೆ ವಾರ ತಲುಪಿದ್ದಾರೆ. ಆದರೆ, ಫಿನಾಲೆ ಸಮೀಪಿಸುದ್ದಿಂತೆ ಇವರ ಮಧ್ಯೆ ಹೊಂದಾಣಿಕೆ ಆಗಿದೆ. ಒಬ್ಬರ ಬಗ್ಗೆ ಒಬ್ಬರು ಒಳ್ಳೆಯ ಮಾತುಗಳನ್ನು ಹೇಳಿಕೊಳ್ಳುತ್ತಾ ಇದ್ದಾರೆ. ಈಗ ಬಿಗ್ ಬಾಸ್ ಕೊಟ್ಟ ಚಟುವಟಿಕೆ ಒಂದರಲ್ಲಿ ತ್ರಿವಿಕ್ರಂ ಅವರು ಮಂಜು ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಬಿಗ್ ಬಾಸ್ ಗಾರ್ಡನ್ ಏರಿಯಾದಲ್ಲಿ ರೆಸಾರ್ಟ್ ಮಾದರಿಯ ಸೆಟ್ ಹಾಕಿದ್ದರು. ಅಲ್ಲಿ ತಿನ್ನೋಕೆ ಊಟ, ಫೈಯರ್ ಕ್ಯಾಂಪ್ ಇತ್ತು. ಸ್ಪರ್ಧಿಗಳು ಮೊದಲೇ ಬರೆದಿಟ್ಟ ಲೆಟರ್​ಗಳನ್ನು ಓದಿ ಹೇಳಬೇಕಿತ್ತು. ಮೊದಲು ತೆರಳಿದ ಮಂಜು ಅವರು ತಮ್ಮ ಬಗ್ಗೆ ಬರೆದು ಸಾಲುಗಳನ್ನು ಓದಿದರು. ‘ಮಂಜು ಅವರ ಫ್ಯಾನ್ ಬಾಯ್’ ಎಂದು ತ್ರಿವಿಕ್ರಂ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಅದನ್ನೇ ಪತ್ರದ ಮೊದಲ ಸಾಲಿನಲ್ಲಿ ಬರೆದಿದ್ದರು.

‘ಮಂಜಣ್ಣ ನಿನ್ನ ಫ್ಯಾನ್ ಬಾಯ್ ನಾನು. ನಿನ್ನ ಕಂಡಾಗಲೆಲ್ಲ ನನಗೆ ಕಾಡೋದು ಒಂದೇ ಪ್ರಶ್ನೆ, ಹೇಗೆ ಇಷ್ಟು ಎನರ್ಜಿಟಿಕ್ ಆಗಿ ಇರ್ರೀಯಾ ಅಂತಾ. ನಿನ್ನ ಎನರ್ಜಿ ಮ್ಯಾಚ್ ಮಾಡೋಕೆ ನಾನು ಕೂಡ ಕೆಲವೊಮ್ಮೆ ಕಷ್ಟಪಟ್ಟಿದ್ದು ಇದೆ. ಕಲಾ ಸರಸ್ವತಿ ನಿನ್ನ ಭಕ್ತಿಗೆ ಒಲಿದಿದ್ದಾಳೆ. ತುಂಬಾ ಎತ್ತರಕ್ಕೆ ಬೆಳೆಯಬೇಕು. ನಾನು ಅದನ್ನು ನೋಡಬೇಕು. ಸದಾ ನಗುತ್ತಾ ಇರು, ನಗಸ್ತಾ ಇರು. ಕೋಪ ಬಿಡಬೇಡ, ಅದುವೇ ನಿನ್ನ ಕಿರೀಟ’ ಎಂದಿದ್ದಾರೆ ತ್ರಿವಿಕ್ರಂ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ ಭವ್ಯಾ ಗೌಡ ತಂದೆ; ಮನದೊಳಗೆ ಇದೆ ನೋವಿನ ಕಥೆ

ಮಂಜು ಅವರು ಬಿಗ್ ಬಾಸ್ ಮನೆಯಿಂದ ಹೊರಗಿದ್ದಾಗ ಸಾಕಷ್ಟು ಕುಡಿಯುತ್ತಿದ್ದರಂತೆ ಆದರೆ, ಕಳೆದ ನಾಲ್ಕು ತಿಂಗಳಿಂದ ಅವರು ಮದ್ಯ ಸೇವನೆ ಮಾಡಿಲ್ಲ. ಕುಡಿತದ ವಿಚಾರದಲ್ಲೂ ತ್ರಿವಿಕ್ರಂ ಅವರು ಮಂಜುಗೆ ಕಿವಿಮಾತು ಹೇಳಿದ್ದಾರೆ. ‘ಜಾಸ್ತಿ ಕುಡಿಯಬೇಡ, ಫಿಟ್ನೆಸ್ ಹಾಳುಮಾಡಿಕೊಳ್ಳಬೇಡ, ತುಂಬಾ ಚೆನ್ನಾಗಿ ಕಾಣ್ತಾ ಇದೀಯಾ. ಕನ್ನಡದ ನವಾಜುದ್ದೀನ್ ಸಿದ್ಧಿಕಿ ನೀನು. ಆಗ್ಬೇಕು ನೀನು’ ಎಂದು ಪತ್ರ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.