ಸೆ.29ರಿಂದ ‘ಬಿಗ್​ ಬಾಸ್​ ಕನ್ನಡ 11’ ಶುರು: ಸುದೀಪ್ ಆ್ಯಂಕರ್​; ಇದು ಹೊಸ ಅಧ್ಯಾಯ

|

Updated on: Sep 15, 2024 | 7:42 PM

10 ಸೀಸನ್​ಗಳ ಯಶಸ್ಸಿನ ಬಳಿಕ 11ನೇ ಸೀಸನ್​ ಆರಂಭ ಆಗುತ್ತಿದೆ ‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ಹೊಸ ಸೀಸನ್​ಗೂ ಕಿಚ್ಚ ಸುದೀಪ್​ ಅವರೇ ಸಾರಥ್ಯ ವಹಿಸಿಕೊಂಡಿದ್ದಾರೆ. ಅವರನ್ನು ಬಿಟ್ಟು ಬೇರೆ ನಟರನ್ನು ನಿರೂಪಕರ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ಅಭಿಮಾನಿಗಳ ಮಾತು ನಿಜವಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

ಸೆ.29ರಿಂದ ‘ಬಿಗ್​ ಬಾಸ್​ ಕನ್ನಡ 11’ ಶುರು: ಸುದೀಪ್ ಆ್ಯಂಕರ್​; ಇದು ಹೊಸ ಅಧ್ಯಾಯ
ಬಿಗ್​ ಬಾಸ್​ ಕನ್ನಡ ಸೀಸನ್ 11, ಕಿಚ್ಚ ಸುದೀಪ್​
Follow us on

ಬಿಗ್ ಬಾಸ್​ ಕನ್ನಡ ಹೊಸ ಸೀಸನ್ ಯಾವಾಗ ಶುರು ಆಗಲಿದೆ ಎಂದು ಕಾದಿದ್ದ ವೀಕ್ಷಕರಿಗೆಲ್ಲ ಇಂದು (ಸೆಪ್ಟೆಂಬರ್ 15) ದೊಡ್ಡ ಸುದ್ದಿ ಸಿಕ್ಕಿದೆ. ಅಲ್ಲದೇ ಈ ಸೀಸನ್​ನಲ್ಲಿ ಆ್ಯಂಕರ್​ ಬದಲಾಗುತ್ತಾರಾ ಎಂಬ ಅನುಮಾನಕ್ಕೂ ತೆರೆ ಬಿದ್ದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮ ಸೆಪ್ಟೆಂಬರ್ 29ರಿಂದ ಆರಂಭ ಆಗಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್​ ಅವರೇ ಆ್ಯಂಕರ್​ ಆಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಅಪ್​ಡೇಟ್​ ನೀಡಲು ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಿಚ್ಚ ಸುದೀಪ್​ ಅವರು ಅಬ್ಬರಿಸಿದ್ದಾರೆ.

ಇಷ್ಟು ವರ್ಷಗಳ ಕಾಲ ಸುದೀಪ್​ ಅವರು ಯಶಸ್ವಿಯಾಗಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅವರಿಂದಾಗಿ ಎಲ್ಲ 10 ಸೀಸನ್​ಗಳಿಗೆ ಸ್ಟಾರ್ ಮೆರುಗು ಸಿಕ್ಕಿತು. ಈಗ ಸಡನ್​ ಆಗಿ ಬೇರೆ ಆ್ಯಂಕರ್​ ಬರುತ್ತಾರೆ ಎಂದರೆ ಅಭಿಮಾನಿಗಳು ಅದನ್ನು ಸ್ವೀಕರಿಸುವುದು ಕಷ್ಟ. ಹಾಗಿದ್ದರೂ ಕೂಡ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಸುದೀಪ್​ ಬದಲು ಬೇರೆಯವರು ಈ ಬಾರಿ ನಿರೂಪಣೆ ಮಾಡಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಅದು ನಿಜವಾಗಿಲ್ಲ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ನಾನು ಟಾಯ್ಲೆಟ್ ಕ್ಲೀನ್​ ಮಾಡಬೇಕಾ? ಸ್ಟಾರ್​ ನಟನ ಪತ್ನಿಯ ತಿರುಗೇಟು

‘ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್​ ಫಿನಾಲೆಯ ಸಂಚಿಕೆಯ ನಡುವೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಹೊಸ ಪ್ರೋಮೋ ಬಿತ್ತರ ಆಗಿದೆ. ಇದರಲ್ಲಿ ಸುದೀಪ್​ ಅವರು ಖಡಕ್​ ಆಗಿ ಡೈಲಾಗ್​ ಹೊಡೆದಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಈ ಪ್ರೋಮೋ ನೋಡಿ ಸುದೀಪ್​ ಅಭಿಮಾನಿಗಳಿಗೆ ಖುಷಿ ಆಗಿದೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಈಗಾಗಲೇ ಅನೇಕ ವ್ಯಕ್ತಿಗಳ ಹೆಸರು ಕೇಳಿಬರುತ್ತಿದೆ. ಈ ಬಾರಿ ಯಾರೆಲ್ಲ ಬಿಗ್​ ಬಾಸ್​ ಮನೆಯೊಳಗೆ ಕಾಲಿಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಸಿನಿಮಾ ಸೆಲೆಬ್ರಿಟಿಗಳು, ಕಿರುತೆರೆಯಲ್ಲಿ ಖ್ಯಾತಿ ಗಳಿಸಿದವರು, ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದವರು, ಪತ್ರಿಕೋದ್ಯಮದ ಖ್ಯಾತನಾಮರು.. ಹೀಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳು ಬರಲಿದ್ದಾರೆ. ‘ಕಲರ್ಸ್​ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ ಮೂಲಕ ಈ ಶೋ ಪ್ರಸಾರ ಆಗಲಿದೆ. ಸೆ.29ರ ಭಾನುವಾರ ಗ್ರ್ಯಾಂಡ್ ಓಪನಿಂಗ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.