ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರತಿಕ್ರಿಯೆ ಬೇರೆ ಬೇರೆ ರೀತಿ ನಡೆಯುತ್ತದೆ. ಈ ವಾರ ‘ಟಿಕೆಟ್ ಟು ಫಿನಾಲೆ’ ಮತ್ತು ‘ಟಿಕೆಟ್ ಹೋಮ್’ ಎಂದು ವಿಂಗಡಿಸಿ ಟಾರ್ಗೆಟ್ ನೀಡಲಾಗಿದೆ. ಫಿನಾಲೆ ಟಿಕೆಟ್ ಪಡೆಯಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಅದರ ನಡುವೆ 5 ಸುತ್ತಿನ ಆಟದಲ್ಲಿ ಹಿನ್ನಡೆ ಕಂಡ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ಅವರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಗೌತಮಿ ಜಾದವ್, ಉಗ್ರಂ ಮಂಜು, ಹನುಮಂತ ಹಾಗೂ ರಜತ್ ಅವರು ಸದ್ಯಕ್ಕೆ ಸೇಫ್ ಆಗಿದ್ದಾರೆ.
ನೋಡನೋಡುತ್ತಿದ್ದಂತೆಯೇ ಬಿಗ್ ಬಾಸ್ ಆಟದಲ್ಲಿ 100 ದಿನಗಳು ಕಳೆದಿವೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಿನ್ನೆ-ಮೊನ್ನೆ ಆದಂತೆ ಇದೆ. ಹಲವು ಬಗೆಯ ಟಾಸ್ಕ್, ನೂರಾರು ಕಿರಿಕ್, ವಾದ-ಪ್ರತಿವಾದ, ಹಲವಾರು ಡ್ರಾಮಾಗಳು ನಡೆದಿವೆ. ಭಾರಿ ಸೌಂಡು ಮಾಡುತ್ತಿದ್ದ ಸ್ಪರ್ಧಿಗಳೆಲ್ಲ ಎಲಿಮಿನೇಟ್ ಆದರು. ಟಾಸ್ಕ್ ಆಡುತ್ತಾ, ತಮ್ಮದೇ ತಂತ್ರಗಾರಿಕೆ ಮಾಡುತ್ತಾ 9 ಜನರು ಈಗ ಉಳಿದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕೊನೇ ಬಿಗ್ ಬಾಸ್ ಸೀಸನ್ ಇದು. ಆದ್ದರಿಂದ ವೀಕ್ಷಕರಿಗೆ ಇದು ತುಂಬ ವಿಶೇಷವಾದ ಸೀಸನ್. ಕಳೆದ ಸೀಸನ್ಗಿಂತಲೂ ಹೆಚ್ಚಿನ ಟಿಆರ್ಪಿ ಪಡೆದುಕೊಳ್ಳುವಲ್ಲಿ ಈ ಸೀಸನ್ ಯಶಸ್ವಿ ಆಗಿದೆ. ಕಳೆದ ವಾರ ಫ್ಯಾಮಿಲಿ ಸಂಚಿಕೆಗಳು ಪ್ರಸಾರ ಆದವು. ಎಲ್ಲರೂ ನಗುವಿನ ಅಲೆಯಲ್ಲಿ ತೇಲಿದ್ದರು. ಆದರೆ ಈ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದರಿಂದ ಎಲ್ಲರ ಆಟದಲ್ಲಿ ಅಗ್ರೆಷನ್ ಜಾಸ್ತಿ ಆಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಹನುಮಂತ, ರಜತ್ ಅವರು ತುಂಬ ಸ್ಟ್ರಾಂಗ್ ಸ್ಪರ್ಧಿಗಳ ಎನಿಸಿಕೊಂಡಿದ್ದಾರೆ. ತ್ರಿವಿಕ್ರಮ್ ಅವರು ಕೇವಲ ಭವ್ಯಾ ಗೌಡ ಜೊತೆ ಹೆಚ್ಚು ಕಾಲ ಕಳೆದಿದ್ದರಿಂದ ಅವರ ಆಟಕ್ಕೆ ಹಿನ್ನಡೆ ಆಗಿದೆ. ಮಂಜು ಮತ್ತು ಗೌತಮಿ ನಡುವಿನ ಸ್ನೇಹ ಕೂಡ ಆಟಕ್ಕೆ ಅಡ್ಡಿ ಆಗಿದೆ. ಇನ್ನು ಕೇವಲ ಮೂರು ವಾರ ಮಾತ್ರ ಬಿಗ್ ಬಾಸ್ ಆಟ ಉಳಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.