ಬಿಗ್ ಬಾಸ್ನಲ್ಲಿ ಕಪ್ ಎತ್ತಿದ್ದು ಇವರೇ? ಮೊದಲೇ ಶುರುವಾಗಿದೆ ಸಂಭ್ರಮ
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫೈನಲ್‌ನಲ್ಲಿ ಹನುಮಂತ ಗೆದ್ದಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ. ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸ್ಪರ್ಧಿಸಿ ಅನೇಕರ ಮನ ಗೆದ್ದಿದ್ದಾರೆ. ಅವರ ಆಟ ಮತ್ತು ಚಾಣಾಕ್ಷತನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಅದಕ್ಕೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಜೋರಾಗಿವೆ. ಈ ಬಾರಿ ಯಾರು ಕಪ್ ಗೆದ್ದರು ಎನ್ನುವ ವಿಚಾರ ಮೊದಲೇ ಲೀಕ್ ಆಯಿತೇ ಎನ್ನುವ ಪ್ರಶ್ನೆಯೂ ಮೂಡುವಂತೆ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಯಲ್ಲಿ ಆರು ಮಂದಿ ಇದ್ದರು. ಭವ್ಯಾ ಅವರು ಮೊದಲೇ ಎಲಿಮಿನೇಟ್ ಆದರು. ಭಾನುವಾರದ (ಜನವರಿ 26) ಎಪಿಸೋಡ್ಗೆ ಐವರು ಉಳಿದುಕೊಂಡಿದ್ದರು. ಈ ಪೈಕಿ ಮೊದಲು ಮಂಜು, ನಂತರ ಮೋಕ್ಷಿತಾ ಔಟ್ ಆದರು. ನಂತರ ಟಾಪ್ ಮೂವರ ಪೈಕಿ ರಜತ್ ಅವರು ದೊಡ್ಮನೆಯಿಂದ ಔಟ್ ಆದರು ಎನ್ನಲಾಗಿದೆ.
ಕೊನೆಗೆ ಉಳಿದುಕೊಂಡಿದ್ದು ತ್ರಿವಿಕ್ರಂ ಹಾಗೂ ಹನುಮಂತ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ ಹನುಮಂತ ಅವರೇ ಕಪ್ ಗೆದ್ದರು ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೀಗೊಂದು ಚರ್ಚೆ ಆಗಿದೆ. ಅವರಿಗೆ ಮೊದಲೇ ಎಲ್ಲರೂ ಶುಭ ಕೋರುತ್ತಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ; ಮೊದಲೇ ಸೋರಿಕೆ ಆಯ್ತು ಮಾಹಿತಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗಮನ ಸೆಳೆದರು. ಅವರ ಆಟ ಎಲ್ಲರಿಗೂ ಇಷ್ಟ ಆಯಿತು. ಚಾಣಾಕ್ಷತನದಿಂದ ಅವರು ಆಟ ಆಡಿ ಭೇಷ್ ಎನಿಸಿಕೊಂಡರು. ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾಗಿದ್ದರು. ಈಗ ಕಪ್ ಗೆದ್ದವರು ಕೂಡ ಅವರೇ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.