ಬಿಗ್ ಬಾಸ್​ಗೆ ನಿರ್ಮಾಣ ಆಗಿದೆ ಬೇರೆಯದೇ ಮನೆ; ಹೇಗಿದೆ ಈ ಬಾರಿಯ ಸೆಟ್?

Bigg Boss Kannada Season 11 New House: ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28 ರಂದು ಆರಂಭವಾಗಲಿದೆ. ಈ ಬಾರಿಯ ಮನೆ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿದೆ. ಕಿಚ್ಚ ಸುದೀಪ್ ಅವರು ಹೊಸ ಮನೆ ದೊಡ್ಡದಾಗಿದೆ ಎಂದು ಹೇಳಿದ್ದಾರೆ. ಈ ಬಾರಿಯ ಸೀಸನ್ ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಗ್ ಬಾಸ್​ಗೆ ನಿರ್ಮಾಣ ಆಗಿದೆ ಬೇರೆಯದೇ ಮನೆ; ಹೇಗಿದೆ ಈ ಬಾರಿಯ ಸೆಟ್?
ಬಿಗ್ ಬಾಸ್

Updated on: Sep 06, 2025 | 6:56 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ವಾರಗಳು ಮಾತ್ರ. ಆಗಲೇ ದೊಡ್ಮನೆ ಪ್ರವೇಶಿಸುವ ಸ್ಪರ್ಧಿಗಳು ಯಾರೆಲ್ಲ ಇರಬಹುದು ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಅಷ್ಟೇ ಅಲ್ಲ, ಕೆಲವರು ಹೆಸರು ಲೀಕ್ ಆಗಿದೆ. ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ (Bigg Boss) ಮನೆ ಹೇಗೆ ಇರಲಿದೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಮಾಡಿದ ಟ್ವೀಟ್​ನಲ್ಲಿ ಉತ್ತರ ಸಿಕ್ಕಿದೆ.

ಈ ಮೊದಲು ಬಿಗ್ ಬಾಸ್ ಮನೆ ಇನೋವೇಟಿವ್ ಫಿಲ್ಮ್​ ಸಿಟಿಯಲ್ಲಿ ಇತ್ತು. ಆ ಬಳಿಕ ಈ ಮನೆಯನ್ನು ಬೇರೆ ಕಡೆಗಳಲ್ಲಿ ಶಿಫ್ಟ್ ಮಾಡಲಾಯಿತು. ಬೆಂಗಳೂರು ಹೊರವಲಯದಲ್ಲಿ ಪ್ರತ್ಯೇಕ ಜಾಗ ಪಡೆದು ಅಲ್ಲಿ ದೊಡ್ಡದಾದ ಮನೆ ನಿರ್ಮಾಣ ಮಾಡಲಾಯಿತು. ಆದರೆ, ಕಳೆದ ಬಾರಿ ಕೆಲವರು ಈ ಮನೆಯ ವಿಚಾರಕ್ಕೆ ಅಪಸ್ವರ ತೆಗೆದಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲು ಕೂಡ ಹತ್ತಿತ್ತು.

ಇದನ್ನೂ ಓದಿ
ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್​ಪಿ ರೇಟಿಂಗ್; ಕುಸಿಯಿತು ಸ್ಥಾನ
‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಸುದೀಪ್ ಟ್ವೀಟ್

ಆದರೆ, ಈ ಬಾರಿ ಆ ರೀತಿ ಆಗಲೇಬಾರದು ಎಂದು ನಿರ್ಧರಿಸಿದಂತಿದೆ. ಈ ಕಾರಣದಿಂದಲೇ ಇನೋವೇಟಿವ್ ಫಿಲ್ಮ್​ ಸಿಟಿಯಲ್ಲೇ ಮತ್ತೆ ಮನೆ ನಿರ್ಮಾಣ ಆಗಿದೆ. ಇದಕ್ಕೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಈ ಬಾರಿಯ ಮನೆ ದೊಡ್ಡದಾಗಿ ಹಾಗೂ ಭಿನ್ನ ರೀತಿಯಲ್ಲಿ ಇರಲಿದೆಯಂತೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಹಿಂಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಫೈನಲ್ ಆದ ಮೂವರು ಸ್ಪರ್ಧಿಗಳು ಇವರೇ ನೋಡಿ 

‘ಪ್ರೋಮೋ ವಿಷಯದಲ್ಲಿ ಬಿಗ್ ಬಾಸ್ ತಂಡ ನಿಜಕ್ಕೂ ತನ್ನ ಸೃಜನಶೀಲತೆಯನ್ನು ತೋರಿಸಿದೆ. ಬಿಡುಗಡೆಯಾಗಲಿರುವ ಎರಡನೇ ಪ್ರೋಮೋ ಇನ್ನೂ ಉತ್ತಮವಾಗಿದೆ. ಈ ಬಾರಿ ದೊಡ್ಡ ಮತ್ತು ಉತ್ತಮ ವೇದಿಕೆ, ಮತ್ತು ಹೆಚ್ಚು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಬಿಗ್ ಬಾಸ್ ಮನೆ. ಈ ಸೀಸನ್​ನಲ್ಲಿ ಬಹಳ ವಿಷಯಗಳಿವೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ 12 ಆರಂಭ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us