ಬಿಗ್ ಬಾಸ್​ಗೂ ಗೌರವ ಕೊಡದ ಕಾಮನ್ ಮ್ಯಾನ್ ಸ್ಪರ್ಧಿಗಳು; ಶುರುವಾಯ್ತು ಚರ್ಚೆ

ಬಿಗ್ ಬಾಸ್ ಕನ್ನಡ ಸೀಸನ್ 13ರ ಕಾಮನ್ ಮ್ಯಾನ್ ಸ್ಪರ್ಧಿಗಳ ನಡೆಗೆ ಭಾರೀ ಅಸಮಾಧಾನ ವ್ಯಕ್ತವಾಗಿದೆ. ನಿರಂತರ ಜಗಳ ಹಾಗೂ ಬಿಗ್ ಬಾಸ್ ನಿಯಮಗಳನ್ನು ಗಾಳಿಗೆ ತೂರಿ ನಡೆದುಕೊಳ್ಳುತ್ತಿರುವ ಶೈಲಿ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷೆಯ ನಡುವೆಯೂ ಬೆಡ್‌ಶೀಟ್ ಹೊದ್ದು ಮಲಗಿದ ಲಿಖಿತ್ ಹಾಗೂ ಕಿರಣ್ ಶಾಸ್ತ್ರಿಗೆ ಕಠಿಣ ಶಿಕ್ಷೆ ಕಾಯುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಬಿಗ್ ಬಾಸ್​ಗೂ ಗೌರವ ಕೊಡದ ಕಾಮನ್ ಮ್ಯಾನ್ ಸ್ಪರ್ಧಿಗಳು; ಶುರುವಾಯ್ತು ಚರ್ಚೆ
ಬಿಗ್ ಬಾಸ್ ಕನ್ನಡ
Image Credit source: Colors Kannada

Updated on: Sep 19, 2026 | 7:01 AM

ಮುಖ್ಯಾಂಶಗಳು

  • ಕಾಮನ್ ಮ್ಯಾನ್ ಸ್ಪರ್ಧಿಗಳ ನಡವಳಿಕೆಗೆ ಹೆಚ್ಚಿದ ಆಕ್ರೋಶ
  • ಆದೇಶ ಮೀರಿ ಧನುಷ್ ಬೆಡ್‌ ಮೇಲೆ ಮಲಗಿದ ಸ್ಪರ್ಧಿಗಳು
  • ಕಠಿಣ ಕ್ರಮ ಕೈಗೊಳ್ತಾರಾ ಬಿಗ್ ಬಾಸ್?

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಾಮನ್​ ಮ್ಯಾನ್​​ಗಳ ಮೇಲೆ ಬಹುತೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಬಾಯಿ ಎತ್ತಿದರೆ ಇರಿಟೇಷನ್ ಮಾಡೋದು, ಜಗಳ ಆಡೋದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳು ಕೂಡ ಅಸಮಧಾನ ಹೊರಹಾಕುತ್ತಿದ್ದಾರೆ. ಈ ನಡುವೆ ಕಾಮನ್ ಮ್ಯಾನ್​​ಗಳು ಬಿಗ್ ಬಾಸ್​​ಗೂ ಗೌರವ ನೀಡುತ್ತಿಲ್ಲ. ಈ ಬಗ್ಗೆ ಚರ್ಚೆ ಶುರುವಾಗಿದೆ.

ಬಿಗ್ ಬಾಸ್​ ಅಲ್ಲಿ ಕಾಮನ್ ಮ್ಯಾನ್​ಗಳಾದ ಮಂಜು, ಧನುಷ್, ಲಿಖಿತ್ ಹಾಗೂ ಕಿರಣ್ ಶಾಸ್ತ್ರಿ ಕಾಮನ್ ಮ್ಯಾನ್​ಗಳ ಸಾಲಿನಲ್ಲಿ ಬಿಗ್ ಬಾಸ್​ಗೆ ಬಂದಿದ್ದಾರೆ. ಇವರೆಲ್ಲರೂ ಅಗ್ನಿಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಕಾಮನ್​ ಮ್ಯಾನ್​​ಗಳನ್ನು ಕರೆದುಕೊಂಡು ಬಂದ ಕಾರಣಕ್ಕೆ ಬಹುತೇಕರು ಬೇಸರಗೊಂಡಿದ್ದಾರೆ. ಈಗ ಅವರು ನಡೆದುಕೊಳ್ಳುತ್ತಿರುವ ರೀತಿ ಕೂಡ ಚರ್ಚೆ ಆಗುತ್ತಿದೆ.

ಇಲ್ಲಿ ಮುಖ್ಯವಾಗಿ ಆಗಿರೋ ಸಮಸ್ಯೆ ಎಂದರೆ ಅವರಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲದಿರುವುದು. ಹೌದು, ಕಾಮನ್​ ಮ್ಯಾನ್​ಗಳಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ತಿಳಿದಿಲ್ಲ. ಬಿಗ್ ಬಾಸ್ ಆದೇಶಕ್ಕೂ ಯಾರೂ ಗೌರವ ನೀಡುತ್ತಿಲ್ಲ. ಲೈಟ್ ಆಫ್ ಆಗೋ ಮೊದಲು ನಿದ್ದೆ ಮಾಡಬಾರದು ಎಂಬುದು ಬಿಗ್ ಬಾಸ್ ನಿಯಮ. ಆದರೆ, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ನಿಯಮ ಬ್ರೇಕ್ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡಿದ್ದಾರೆ. ಇವರಿಬ್ಬರಿಗೆ ರಾತ್ರಿ ಮಲಗಲು ಬೆಡ್ ಇಲ್ಲ, ಬೆಡ್​ಶೀಟ್ ಇಲ್ಲ, ತಲೆದಿಂಬೂ ಇಲ್ಲ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಇನ್ನೂ ಶುರುವಾಗಿಲ್ಲ ಈ ಸ್ಪರ್ಧಿಗಳ ಆಟ; ಹೀಗೆ ಆದ್ರೆ ಕಷ್ಟ ಇದೆ

ಇದನ್ನು ಕಿರಣ್ ಹಾಗೂ ಲಿಖಿತ್ ಮೊದಲ ದಿನ ಮಾತ್ರ ಪಾಲಿಸಿದರು. ಆ ಬಳಿಕ ಬಿಗ್ ಬಾಸ್ ಆದೇಶಕ್ಕೂ ಬೆಲೆ ಕೊಡದೆ ಧನುಷ್ ಅವರ ಬೆಡ್​ಮೇಲೆ ಬೆಡ್​ಶೀಟ್ ಹೊದ್ದು ಮಲಗಿದ್ದಾರೆ. ಇದಕ್ಕೆ ಕಠಿಣ ಶಿಕ್ಷೆ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ವೀಕೆಂಡ್​​ನಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us