
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಬಹುಷಃ ಹಿಂದಿನ ಯಾವ ಸೀಸನ್ನಿನಲ್ಲೂ ಮಾಡದಷ್ಟು ನಿಯಮಗಳನ್ನು ಮುರಿಯಲಾಗುತ್ತಿದೆ. ಮೊದಲಿನ ಸೀಸನ್ನುಗಳಲ್ಲಿಯೂ ಸಹ ನಿಯಮಗಳನ್ನು ಮುರಿಯಲಾಗಿತ್ತು ಆದರೆ ಅದು ಉದ್ದೇಶ ಪೂರ್ವಕ ಆಗಿರಲಿಲ್ಲ. ಆದರೆ ಈ ಸೀಸನ್ನಿನಲ್ಲಿ ಬಿಗ್ಬಾಸ್ ನಿಯಮಗಳನ್ನು ಉದ್ದೇಶ ಪೂರ್ವಕವಾಗಿ ಯಾವುದೇ ಭಯ ಇಲ್ಲದೆ ಮುರಿಯಲಾಗುತ್ತಿದೆ. ಬಿಗ್ಬಾಸ್ ಮಾತಿಗೂ ಸಹ ಕ್ಯಾರೇ ಎನ್ನುವುದಿಲ್ಲ ಕೆಲವರು. ಕೆಲವರಂತೂ ಬೇಕು-ಬೇಕೆಂದೇ ನಿಯಮ ಮುರಿದು ಮನೆ ಮಂದಿಗೆ ಶಿಕ್ಷೆ ಕೊಡಿಸಿದ್ದೂ ಸಹ ಇದೆ. ಕಳೆದ ಮೂರು ವಾರದಿಂದ ಇದನ್ನೆಲ್ಲ ನೋಡಿ ಸಾಕಾಗಿದ್ದ ಸುದೀಪ್ ಅವರು ಈ ಬಾರಿ ಮನೆಯ ಸದಸ್ಯರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ನಿಯಮ ಮುರಿಯುವುದರಲ್ಲಿ ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಮುಂದೆ. ಪದೇ ಪದೇ ನಿಯಮ ಮುರಿಯುತ್ತಾರೆ. ಕ್ಯಾಪ್ಟನ್ ಹೇಳುವುದು ಕೇಳುವುದಿಲ್ಲ. ಕ್ಯಾಪ್ಟನ್ ಆದೇಶ ಪಾಲಿಸುವುದಿಲ್ಲ. ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ ಮತ್ತು ಅದರ ಬಗ್ಗೆ ಕೇರ್ ಸಹ ಮಾಡುವುದಿಲ್ಲ. ಬಿಗ್ಬಾಸ್ ಆದೇಶಕ್ಕೂ ಸಹ ಬೆಲೆ ಕೊಡದೇ ವರ್ತಿಸುತ್ತಾರೆ. ಇದನ್ನು ಗಮನಿಸಿದ್ದ ಸುದೀಪ್ ಅವರು ಈ ವಾರ ನಿಯಮ ಮುರಿಯುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಈ ವಾರ ಒಟಿಟಿಗೆ ಬರುತ್ತಿವೆ ಹಲವು ಹಿಟ್ ಸಿನಿಮಾ, ನಿಮ್ಮ ಆಯ್ಕೆ ಯಾವುದು?
ಈ ಬಾರಿ ಬಾತ್ರೂಂ ಕ್ಲೀನಿಂಗ್ ಡ್ಯೂಟಿಯಲ್ಲಿದ್ದ ಲಿಖಿತ್ ಮತ್ತು ಯಶಸ್ ಅವರು ಬಾತ್ರೂಂ ಕ್ಲೀನ್ ಮಾಡಿರಲಿಲ್ಲ. ಕ್ಯಾಪ್ಟನ್ ಸಂಗೀತಾ ಪದೇ ಪದೇ ಹೇಳಿದರೂ ಸಹ ಕೆಲಸ ಮಾಡದೆ ಉದ್ದಟತನ ಮೆರೆದಿದ್ದರು. ಹಾಗಾಗಿ ಸುದೀಪ್ ಅವರು ಲಿಖಿತ್ ಹಾಗೂ ಯಶಸ್ ಇಬ್ಬರನ್ನೂ ಸಹ ಜೈಲಿನಲ್ಲಿರಿಸಿ, ಅಲ್ಲೇ ಅವರಿಗೆ ಬುದ್ಧಿ ಹೇಳಿದರು.
ಇದು ‘ನಮ್ಮ ಮನೆ, ಇಲ್ಲಿ ನೀವು ಅತಿಥಿಗಳು ಮಾತ್ರ’ ಅದನ್ನು ಹೇಗಿಟ್ಟುಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ನೀವು ಸ್ವಚ್ಛ ಮಾಡಿಲ್ಲವೆಂದರೆ ನಾನೇ ಬಂದು ಸ್ವಚ್ಛ ಮಾಡುತ್ತೇನೆ. ನಮ್ಮ ಮನೆಯನ್ನು ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದರು. ಅಲ್ಲದೆ ಪದೇ ಪದೇ ನಿಯಮ ಮುರಿಯುವ, ನಿಯಮದ ಬಗ್ಗೆ ಗೌರವ ಇಲ್ಲದೇ ವರ್ತಿಸುವವರನ್ನು ನಾನು ಇಲ್ಲಿಂದಲೇ ನೇರವಾಗಿ ನಾಮಿನೇಟ್ ಮಾಡುತ್ತೇನೆ’ ಎಂದು ಎಚ್ಚರಿಕೆ ಕೊಟ್ಟರು ಕಿಚ್ಚ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ