ಭಾನುವಾರದ ಎಪಿಸೋಡಿನಲ್ಲಿ ಕಾದಿದೆ ಶಾಕ್: ಎಂಟ್ರಿ ಕೊಡಲಿದ್ದಾರೆ ಮೂವರು ಸ್ಪರ್ಧಿಗಳು

ಮೂರನೇ ವಾರದ ಮಧ್ಯದಲ್ಲಿಯೇ ಗಟ್ಟಿ ಸ್ಪರ್ಧಿ ತಾಂಡವ್ ರಾಮ್ ಅವರನ್ನು ಮನೆಯಿಂದ ಹೊರಗೆ ಕಳಿಸಲಾಯ್ತು. ಇದು ಮನೆ ಮಂದಿಯ ಜೊತೆಗೆ ಪ್ರೇಕ್ಷಕರಿಗೂ ಸಹ ಸಖತ್ ಶಾಕ್ ಕೊಟ್ಟಿತ್ತು. ಶನಿವಾರದ ಎಪಿಸೋಡ್​​ನಲ್ಲಿ ಸಾಮಾನ್ಯವಾಗಿ ಎಲಿಮಿನೇಷನ್ ಇರುತ್ತಲೇ ಇರಲಿಲ್ಲ. ಆದರೆ ಸುದೀಪ್ ಅವರು ಇಬ್ಬರು ಸ್ಪರ್ಧಿಗಳನ್ನು ಶನಿವಾರದ ಎಪಿಸೋಡ್​​ನಲ್ಲಿಯೇ ಹೊರಕ್ಕೆ ಕರೆತಂದರು. ಅವರೇ ಅವಿನಾಶ್ ಮತ್ತು ವೈಷ್ಣವಿ.

ಭಾನುವಾರದ ಎಪಿಸೋಡಿನಲ್ಲಿ ಕಾದಿದೆ ಶಾಕ್: ಎಂಟ್ರಿ ಕೊಡಲಿದ್ದಾರೆ ಮೂವರು ಸ್ಪರ್ಧಿಗಳು
Wild Card Entry

Updated on: Sep 26, 2026 | 10:49 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ಭಾನುವಾರದ ಎಪಿಸೋಡ್
  • ಭಾನುವಾರದ ಎಪಿಸೋಡ್ ನಲ್ಲಿ ಇರಲಿದೆ ಸಖತ್ ಶಾಕ್
  • ಎಂಟ್ರಿ ಆಗಲಿದ್ದಾರೆ ಮೂವರು ಹೊಸ ಸ್ಪರ್ಧಿಗಳು

ಬಿಗ್​​ಬಾಸ್ ಸೀಸನ್ 13 ಶುರುವಾಗಿ ಮೂರು ವಾರಗಳಾಗಿವೆ. ಮೂರನೇ ವಾರವಂತೂ ಪ್ರೇಕ್ಷಕರಿಗೆ ಹಲವು ಶಾಕ್​​ಗಳು ದೊರೆತಿವೆ. ಮೂರನೇ ವಾರದ ಮಧ್ಯದಲ್ಲಿಯೇ ಗಟ್ಟಿ ಸ್ಪರ್ಧಿ ತಾಂಡವ್ ರಾಮ್ ಅವರನ್ನು ಮನೆಯಿಂದ ಹೊರಗೆ ಕಳಿಸಲಾಯ್ತು. ಇದು ಮನೆ ಮಂದಿಯ ಜೊತೆಗೆ ಪ್ರೇಕ್ಷಕರಿಗೂ ಸಹ ಸಖತ್ ಶಾಕ್ ಕೊಟ್ಟಿತ್ತು. ಶನಿವಾರದ ಎಪಿಸೋಡ್​​ನಲ್ಲಿ ಸಾಮಾನ್ಯವಾಗಿ ಎಲಿಮಿನೇಷನ್ ಇರುತ್ತಲೇ ಇರಲಿಲ್ಲ. ಆದರೆ ಸುದೀಪ್ ಅವರು ಇಬ್ಬರು ಸ್ಪರ್ಧಿಗಳನ್ನು ಶನಿವಾರದ ಎಪಿಸೋಡ್​​ನಲ್ಲಿಯೇ ಹೊರಕ್ಕೆ ಕರೆತಂದರು. ಅವರೇ ಅವಿನಾಶ್ ಮತ್ತು ವೈಷ್ಣವಿ.

ಅಲ್ಲಿಗೆ ಈ ವಾರ ಮೂವರು ಎಲಿಮಿನೇಟ್ ಆದರು ಎಂದುಕೊಳ್ಳುತ್ತಿರುವಾಗಲೇ ತಾಂಡವ್ ರಾಮ್ ಅವರನ್ನು ಮರಳಿ ಬಿಗ್​​ಬಾಸ್ ಮನೆಗೆ ಹೋಗುವಂತೆ ಸುದೀಪ್ ಸೂಚಿಸಿದರು. ತಾಂಡವ್ ರಾಮ್ ಅವರಿಗೆ ಮತಗಳು ಚೆನ್ನಾಗಿಯೇ ಬಂದಿದ್ದು ಅವರು ಸೇಫ್ ಆಗಿದ್ದಾರೆ ಎಂದು ಸುದೀಪ್ ಅವರು ಪ್ರೇಕ್ಷಕರ ಮುಂದೆ ಘೋಷಿಸಿ ಮತ್ತೊಂದು ಶಾಕ್ ನೀಡಿದರು. ಇದೆಲ್ಲದರ ಜೊತೆಗೆ ಸುದೀಪ್ ಕೊಟ್ಟ ಮತ್ತೊಂದು ಶಾಕ್ ಎಂದರೆ ಭಾನುವಾರದ ಎಪಿಸೋಡಿನಲ್ಲಿ ಮನೆಗೆ ಇನ್ನೂ ಮೂರು ಮಂದಿ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಅಣ್ಣಾವ್ರ ಡೈಲಾಗ್: ವಿಡಿಯೋ ನೋಡಿ

ಹೌದು, ಶನಿವಾರದ ಎಪಿಸೋಡಿನ ಕೊನೆಯಲ್ಲಿ ಮಾತನಾಡಿದ ಸುದೀಪ್ ಅವರು, ಬಿಗ್​​ಬಾಸ್ ಮನೆಗೆ ಮೂವರು ಹೊಸ ಸದಸ್ಯರು ಸೇರಿಕೊಳ್ಳಲಿದ್ದಾರೆ. ವಿಮಾನದ ಭಾಷೆಯಲ್ಲಿ ‘ನ್ಯೂ ಅರೈವಲ್ಸ್’ ಬಿಗ್​​ಬಾಸ್ ಭಾಷೆಯಲ್ಲಿ ‘ವೈಲ್ಡ್ ಕಾರ್ಡ್ ಎಂಟ್ರಿ’. ಈ ಬಾರಿ ಮೂವರು ಸ್ಪರ್ಧಿಗಳು ಒಟ್ಟಿಗೆ ಬಿಗ್​​ಬಾಸ್ ಮನೆಗೆ ಬರಲಿದ್ದಾರೆ ಎಂದರು ಸುದೀಪ್. ಇನ್ನು ತಾಂಡವ್ ಸಹ ನೇರವಾಗಿ ಬಿಗ್​​ಬಾಸ್ ಮನೆಗೆ ಹೋಗುತ್ತಿಲ್ಲ ಬದಲಿಗೆ ಅವರನ್ನು ಬಿಗ್​​ಬಾಸ್​​ ಕಾಯಿಸಿ ಆಶ್ಚರ್ಯಕರ ರೀತಿಯಲ್ಲಿ ಮನೆಯ ಒಳಗೆ ಕಳಿಸಲಿದ್ದಾರೆ. ಅಲ್ಲಿಗೆ ಬಿಗ್​​ಬಾಸ್ ಮನೆ ಮಂದಿಗೆ ಭಾನುವಾರವೂ ಸಹ ಹಲವು ಶಾಕ್​​ಗಳು ಕಾದಿವೆ.

ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮೂರು ಮಂದಿ ಬಿಗ್​​ಬಾಸ್ ಮನೆ ಪ್ರವೇಶಿಸಲಿದ್ದಾರೆ. ವೈಲ್ಡ್ ಕಾರ್ಡ್​​ ಮೂಲಕವೇ ಎಂಟ್ರಿ ಕೊಟ್ಟಿದ್ದ ಹನುಮ ಬಿಗ್​​ಬಾಸ್ ಗೆದ್ದಿದ್ದರು. ಅವರ ಹೊರತಾಗಿ ವೈಲ್ಡ್ ಕಾರ್ಡ್ ಮೂಲಕ ಬಂದ ಇನ್ಯಾರೂ ಸಹ ಗೆದ್ದಿರಲಿಲ್ಲ. ಆದರೆ ವೈಲ್ಡ್ ಕಾರ್ಡ್ ಮೂಲಕ ಬಂದವರು ಸಾಮಾನ್ಯವಾಗಿ ಹೆಚ್ಚು ವಾರ ಇರುತ್ತಾರೆ. ಅವರು ಆಟ ನೋಡಿಕೊಂಡು ಬಂದಿರುವ ಕಾರಣ ಮನೆಗೆ ಹೊಂದಿಕೊಂಡು ಆಡುತ್ತಾರೆ. ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಯಾರು ಬರಲಿದ್ದಾರೆ ಎಂಬುದು ನಾಳಿನ (ಭಾನುವಾರ)ದ ಎಪಿಸೋಡಿನಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us