Bigg Boss Kannada: ಅಬ್ಬಬ್ಬಾ.. ಹೆಚ್ಚುತ್ತಲೇ ಇದೆ ‘ಕನ್ನಡ ಬಿಗ್ ಬಾಸ್’ ಟಿಆರ್​ಪಿ

|

Updated on: Nov 17, 2023 | 1:26 PM

ನಮ್ರತಾ ಗೌಡ ಅವರು ವಿನಯ್ ಚಮಚ ರೀತಿಯಲ್ಲಿ ವರ್ತಿಸಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ವೀಕೆಂಡ್​ನ ಎಪಿಸೋಡ್​ನ ಹೆಚ್ಚಿನ ವೀಕ್ಷಕರು ನೋಡಿದ್ದರು.

Bigg Boss Kannada: ಅಬ್ಬಬ್ಬಾ.. ಹೆಚ್ಚುತ್ತಲೇ ಇದೆ ‘ಕನ್ನಡ ಬಿಗ್ ಬಾಸ್’ ಟಿಆರ್​ಪಿ
ಸುದೀಪ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ ಹೊಸ ರೀತಿಯಲ್ಲಿ ಮೂಡಿ ಬರುತ್ತಿದೆ. ಕಳೆದ ಸೀಸನ್​ಗಳಿಗೆ ಹೋಲಿಕೆ ಮಾಡಿದರೆ ಈ ಸೀಸನ್​ನಲ್ಲಿ ಟಿಆರ್​ಪಿ (TRP) ಹೆಚ್ಚುತ್ತಲೇ ಇದೆ. ಬಿಗ್ ಬಾಸ್ ಮನೆಯಲ್ಲಿ ಬಳೆಯ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ವೀಕೆಂಡ್​ನಲ್ಲಿ ಈ ವಿಚಾರದಲ್ಲಿ ಚರ್ಚೆ ಆಗಿತ್ತು. ಆ ವಾರದ ಟಿಆರ್​ಪಿ ಈಗ ಸಿಕ್ಕಿದೆ. ಭರ್ಜರಿ ಟಿಆರ್​ಪಿ ಪಡೆದು ಶೋ ಮುನ್ನುಗ್ಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಳೆ ದೌರ್ಬಲ್ಯದ ಸಂಕೇತ ಎಂಬ ಅರ್ಥದಲ್ಲಿ ವಿನಯ್ ಮಾತನಾಡಿದ್ದರು. ಆ ವಾರ ನಮ್ರತಾ ಗೌಡ ಅವರು ವಿನಯ್ ಚಮಚ ರೀತಿಯಲ್ಲಿ ವರ್ತಿಸಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ವೀಕೆಂಡ್​ನ ಎಪಿಸೋಡ್​ನ ಹೆಚ್ಚಿನ ವೀಕ್ಷಕರು ನೋಡಿದ್ದರು. ಈ ಸೀಸನ್​ ಹೆಚ್ಚು ಟಿಆರ್​ಪಿ ಶೋಗೆ ಸಿಕ್ಕಿದೆ. 8.5 ಟಿವಿಆರ್ ಸಿಕ್ಕಿದೆ. ಭಾನುವಾರದ ಎಪಿಸೋಡ್​ಗೆ 9.6 ಟಿಆರ್​ಪಿ ಸಿಕ್ಕಿದೆ. ವಾರ ದಿನಗಳಲ್ಲಿ 7.4 ಟಿಆರ್​ಪಿ ಸಿಕ್ಕಿದೆ. ಇಷ್ಟು ಟಿಆರ್​ಪಿಯನ್ನು ನಿರೀಕ್ಷಿಸಲಾಗಿತ್ತು  ಎಂದು ಅನೇಕರು ಹೇಳಿದ್ದಾರೆ.

ಧಾರಾವಾಹಿ ಟಿಆರ್​ಪಿ

ಎಂದಿನಂತೆ ‘ಪುಟ್ಟಕ್ಕನ  ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಹಲವು ತಿಂಗಳಿಂದ ಈ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಮುಂದೆ ಸಾಗಿದೆ. ‘ಗಟ್ಟಿಮೇಳ’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಎರಡನೇ ಸ್ಥಾನ ಕಾಪಾಡಿಕೊಂಡು ಮುಂದೆ ಸಾಗುತ್ತಿದೆ. ಈ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

‘ಅಮೃತಧಾರೆ’ ಧಾರಾವಾಹಿ ಕೂಡ ಮೂರನೇ ಸ್ಥಾನದಲ್ಲಿ ಕಾಪಾಡಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಸತ್ಯ’, ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಹಿಟ್ಲರ್ ಕಲ್ಯಾಣ’, ‘ಸೀತಾ ರಾಮ’, ‘ಕೆಂಡ ಸಂಪಿಗೆ’, ‘ರಾಮಾಚಾರಿ’ ಧಾರಾವಾಹಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:02 pm, Fri, 17 November 23