ಬಿಗ್ ಬಾಸ್, ಧಾರಾವಾಹಿಗಳ ಟಿಆರ್ಪಿ ಔಟ್; ಸುದೀಪ್ ಇಲ್ಲದ ವಾರದ ರೇಟಿಂಗ್ ಹೇಗಿತ್ತು?
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರನೇ ವಾರದ ಟಿಆರ್ಪಿ ಬಿಡುಗಡೆಯಾಗಿದೆ. ಸುದೀಪ್ ಅವರ ಅನುಪಸ್ಥಿತಿಯಲ್ಲಿ ಟಿಆರ್ಪಿ ಸ್ವಲ್ಪ ಕುಸಿದಿದೆ. ವಾರದ ದಿನಗಳಲ್ಲೂ ಟಿಆರ್ಪಿ ಕಡಿಮೆಯಾಗಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗಾಗಲೇ ಆರು ವಾರಗಳನ್ನು ಪೂರ್ಣಗೊಳಿಸುವ ಹಂತಕ್ಕೆ ಬಂದಿದೆ. ಪ್ರತಿ ವಾರವೂ ಬಿಗ್ ಬಾಸ್ ಉತ್ತಮ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಕಲರ್ಸ್ ಕನ್ನಡ ವಾಹಿನಿಗೆ ಈ ಶೋನಿಂದ ಸಾಕಷ್ಟು ಲಾಭ ಆಗುತ್ತಿದೆ. ಹಾಗಾದರೆ, ಸುದೀಪ್ ಇಲ್ಲದ ವಾರದಲ್ಲಿ ಬಿಗ್ ಬಾಸ್ಗೆ ಎಷ್ಟು ಟಿಆರ್ಪಿ ಸಿಕ್ಕಿದೆ? ವಾರದ ದಿನಗಳಲ್ಲಿ ಸಿಕ್ಕ ರೇಟಿಂಗ್ ಎಷ್ಟು? ಧಾರಾವಾಹಿಗಳು ಪಡೆದ ಟಿಆರ್ಪಿ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಸುದೀಪ್ ಇದ್ದರೆ ಒಳ್ಳೆಯ ಟಿಆರ್ಪಿ ಬರುತ್ತದೆ. ಅವರು ಶೋ ನಡೆಸಿಕೊಡೋ ವಿಧಾನವೇ ಇದಕ್ಕೆ ಕಾರಣ. ತಾಯಿ ಕಳೆದುಕೊಂಡ ಕಾರಣಕ್ಕೆ ಸುದೀಪ್ ಅವರು ಶನಿವಾರ ಹಾಗೂ ಭಾನುವಾರ ಬಂದಿರಲಿಲ್ಲ. ಆ ವಾರದ ಟಿಆರ್ಪಿ ಹೊರಬಿದ್ದಿದೆ. ನಗರ ಭಾಗದಲ್ಲಿ ಈ ಶೋಗೆ 7.3 ಹಾಗೂ ಗ್ರಾಮೀಣ ಮತ್ತು ನಗರ ಭಾಗ ಸೇರಿ 7 ಟಿವಿಆರ್ ಸಿಕ್ಕಿದೆ. ಸುದೀಪ್ ಇದ್ದಾಗ ಟಿಆರ್ಪಿ 10+ ಟಿವಿಆರ್ ಸಿಗುತ್ತಿತ್ತು.
ವಾರದ ದಿನಗಳಲ್ಲಿ ‘ಬಿಗ್ ಬಾಸ್’ ಟಿಆರ್ಪಿ ನಿಧಾನವಾಗಿ ಕುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಈ ಟಿಆರ್ಪಿ ಹೆಚ್ಚಬಹುದು ಎನ್ನುವ ನಿರೀಕ್ಷೆಯಲ್ಲಿ ವಾಹಿನಿ ಇದೆ. ‘ಜಗದೀಶ್ ಹೋಗಿದ್ದಕ್ಕೆ ಬಿಗ್ ಬಾಸ್ ಟಿಆರ್ಪಿ ಕುಗ್ಗುತ್ತಿದೆ’ ಎಂದು ಕೆಲವರು ಹೇಳಿದ್ದು ಇದೆ. ಆದರೆ, ಅಂಥ ದೊಡ್ಡ ವ್ಯತ್ಯಾಸ ಏನೂ ಆಗಿಲ್ಲ. 43ನೇ ವಾರದ ಪಟ್ಟಿಯಲ್ಲಿ (ವಾರದ ದಿನಗಳಲ್ಲಿ) 7 ಟಿವಿಆರ್ ಸಿಗುತ್ತಿತ್ತು, ಈಗ ಅದು 6.4ಗೆ ಕುಸಿದಿದೆ.
ಇದನ್ನೂ ಓದಿ: ಬಿಗ್ ಬಾಸ್ ಹಾಗೂ ಧಾರಾವಾಹಿಗಳ ಟಿಆರ್ಪಿ ಔಟ್; ಇಲ್ಲಿದೆ ಸಂಪೂರ್ಣ ವಿವರ
ಧಾರಾವಾಹಿ ಸಾಲಿನಲ್ಲಿ (ನಗರ ಹಾಗೂ ಗ್ರಾಮೀಣ ಒಟ್ಟಾಗಿ ಸೇರಿ) ‘ಪುಟ್ಟಕ್ಕನ ಮಕ್ಕಳು’ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’ ಹಾಗೂ ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.