
ಬಿಗ್ಬಾಸ್ ಮನೆಯಲ್ಲಿ ಈ ವಾರ ಹಲವು ಶಾಕಿಂಗ್ ಘಟನೆಗಳು ನಡೆದಿವೆ. ಮೊದಲಿಗೆ ಮಂಜ ಮತ್ತು ಶಾಸ್ತ್ರಿ ಬದಲಾಗುವ ಪ್ರಯತ್ನ ಮಾಡಿದ್ದಾರೆ. ಇದರ ಜೊತೆಗೆ ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಗಟ್ಟಿ ಸ್ಪರ್ಧಿ ಆಗಿದ್ದ ತಾಂಡವ್ ರಾಮ್ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಅದೂ, ಅವರಿಗೆ ಬಂದಿದ್ದ ಓಟನ್ನು ಮತ್ತೊಬ್ಬರ ತೆಗೆದುಕೊಂಡಿದ್ದಕ್ಕೆ ಅವರು ಹೊರಗೆ ಹೋಗಿದ್ದಾರೆ. ಇದರ ಜೊತೆಗೆ ಶನಿವಾರದ ಎಪಿಸೋಡಿನಲ್ಲೂ ಸಹ ಒಟ್ಟಿಗೆ ಇಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು.
ಈ ವಾರ ಸಂಗೀತಾ ಬಿಟ್ಟು ಇಡೀ ಮನೆಯವರೇ ನಾಮಿನೇಟ್ ಆಗಿತ್ತು. ತಾಂಡವ್ ವಾರದ ಮಧ್ಯ ಭಾಗದಲ್ಲಿ ಎವಿಕ್ಟ್ ಆದರು. ಶನಿವಾರ ಆಶ್ಚರ್ಯಕರ ರೀತಿಯಲ್ಲಿ ಸುದೀಪ್ ಅವರು ಇಬ್ಬರನ್ನು ಎವಿಕ್ಟ್ ಮಾಡಿದರು. ಈ ಎವಿಕ್ಷನ್ ಮತಗಳ ಆಧಾರದಲ್ಲಿ ನಡೆಯಿತು. ನಾಮಿನೇಟ್ ಆದ ಸ್ಪರ್ಧಿಗಳ ಮುಂದೆ ತೆಂಗಿನ ಕಾಯಿ ಇಡಲಾಯ್ತು. ಆ ತೆಂಗಿನ ಕಾಯಿ ಒಳಗೆ ಕಣ್ಣಿನ ಆಕಾರ ದೊರೆತವರು ಸೇವ್ ಎನ್ನಲಾಯ್ತು. ಮಂಜ, ಲಿಖಿತ್, ಯಶಸ್ ಅವರುಗಳು ಸೇವ್ ಆದರು. ಆದರೆ ಅವಿನಾಶ್ ಅವರು ಹೊಡೆದ ತೆಂಗಿನ ಕಾಯಿಯಲ್ಲಿ ಏನೂ ಇರಲಿಲ್ಲ. ಆ ಮೂಲಕ ಅವರು ಎವಿಕ್ಟ್ ಆದಂತಾಯ್ತು.
ಬಳಿಕ ಉಳಿದ ಕೆಲವರನ್ನು ಸುದೀಪ್ ಅವರು ಸೇವ್ ಆಗಿದ್ದನ್ನು ಘೋಷಿಸಿದರು. ಅಂತಿಮವಾಗಿ ಆಸಿಯಾ, ಧನುಶ್ ಮತ್ತು ವೈಷ್ಣವಿ ಅವರುಗಳು ಉಳಿದುಕೊಂಡರು. ಟಾಸ್ಕ್ ರೂಮಿನಲ್ಲಿ ಮೂವರನ್ನೂ ಸೇರಿಸಿ, ಅವರಿಗೆ ವಿಶೇಷ ದ್ರಾವಣ ನೀಡಲಾಯ್ತು. ಆ ದ್ರಾವಣನವನ್ನು ಹುತ್ತದ ಮಾದರಿಯಲ್ಲಿ ರಚನೆಯಲ್ಲಿ ಹಾಕಬೇಕಿತ್ತು. ಅದರಂತೆ ಮೊದಲು ಆಸಿಯಾ ಹಾಕಿದರು. ಹೊತ್ತರ ಆಕೃತಿಯಿಂದ ನೊರೆ ಬರಲಿಲ್ಲ ಅದರರ್ಥ ಅವರು ಸೇಫ್ ಆದರು. ಉಳಿದ ಧನುಶ್ ಮತ್ತು ವೈಷ್ಣವಿ ಅವರುಗಳು ಒಟ್ಟಿಗೆ ದ್ರಾವಣ ಹಾಕಿದರು. ವೈಷ್ಣವಿ ಹಾಕಿದ ದ್ರಾವಣದಿಂದ ನೊರೆ ಬಂತು. ಅಲ್ಲಿಗೆ ಅವರು ಎವಿಕ್ಟ್ ಆದರು ಎಂದಾಯ್ತು.
ಅಲ್ಲಿಗೆ ಈ ವಾರ ಒಟ್ಟು ಮೂವರು ಬಿಗ್ಬಾಸ್ ಮನೆಯಿಂದ ಎವಿಕ್ಟ್ ಆದಂತಾಯ್ತು. ಅದರಲ್ಲೂ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದ ತಾಂಡವ್ ರಾಮ್ ಮತ್ತು ಅವಿನಾಶ್ ಅವರು ಮನೆಯಿಂದ ಹೊರಗೆ ಹೋಗಿದ್ದ ಆಶ್ಚರ್ಯ. ಸಾಮಾನ್ಯವಾಗಿ ಭಾನುವಾರ ನಡೆಸುವ ಎವಿಕ್ಷನ್ ಅನ್ನು ಸುದೀಪ್ ಅವರು ಶನಿವಾರವೇ ನಡೆಸಿದ್ದು ಮತ್ತೊಂದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ