ಬಿಗ್ಬಾಸ್ (BiggBoss) ಕನ್ನಡ ಸೀಸನ್ 10ರಲ್ಲಿ ವಾರವೆಲ್ಲ ಶಾಲೆಯ ವಾತಾವರಣವನ್ನು ಮರುಸೃಷ್ಠಿಸಲಾಗಿತ್ತು. ಮನೆಯ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿ, ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕರಾದವರು ಗಂಭೀರವಾಗಿದ್ದು ವಿದ್ಯಾರ್ಥಿಗಳು ಮಾಡುವ ತಲೆಹರಟೆಗಳನ್ನು ಸಹಿಸಿಕೊಂಡು ಅವರಿಗೆ ನೀಡಲಾಗಿದ್ದ ವಿಷಯವನ್ನು ಬೋಧಿಸಬೇಕಿತ್ತು, ವಿದ್ಯಾರ್ಥಿಗಳಾಗಿದ್ದವರು ತರಲೆ ಮಾಡುತ್ತಾ, ಕ್ರಿಯಾಶೀಲವಾಗಿ ವರ್ತಿಸಬೇಕಿತ್ತು. ಈ ಟಾಸ್ಕ್ನಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ಭಾಗಿಯಾಗಿದ್ದರು, ಆದರೆ ಕೆಲವರು ಮಾತ್ರವೇ ಚೆನ್ನಾಗಿ ಪ್ರದರ್ಶನ ನೀಡಿದರು.
ಶನಿವಾರದಂದು ವಾರದ ಪಂಚಾಯಿತಿಗೆ ಆಗಮಿಸಿದ್ದ ನಟ ಕಿಚ್ಚ ಸುದೀಪ್, ಮನೆಯ ಸದಸ್ಯರು ಈ ಟಾಸ್ಕ್ ಅನ್ನು ಆಡಿದ ರೀತಿಯನ್ನು ಟೀಕಿಸಿದರು. ರಾಕ್ಷಸರು-ಗಂಧರ್ವರು ಟಾಸ್ಕ್ ಅನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಜಗಳವಾಡಿದ್ದ, ಕಿತ್ತಾಡಿದ್ದ ನೀವುಗಳು, ಇದೊಂದು ಕ್ರಿಯಾಶೀಲವಾದ ಟಾಸ್ಕ್ ಅನ್ನು ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ಕೇಳಿದರು. ಬಹಳ ನಿರ್ಲಕ್ಷ್ಯದಿಂದ ಈ ಟಾಸ್ಕ್ ಅನ್ನು ಆಡಿದಿರಿ, ಮನೆಯ ಎಷ್ಟೋ ಸದಸ್ಯರಿಗೆ ಟಾಸ್ಕ್ ಸರಿಯಾಗಿ ಅರ್ಥವೂ ಆಗಲಿಲ್ಲ ಎಂದು ಜರಿದರು. ಅಲ್ಲದೆ, ಇಂಥಹಾ ಒಂದು ಬಹಳ ಒಳ್ಳೆಯ ಅವಕಾಶವನ್ನು ನೀವು ಮಿಸ್ ಮಾಡಿಕೊಂಡಿರಿ ಎಂದರು ಸಹ.
ಅಂತಿಮವಾಗಿ ಬೋರ್ಡ್ ಒಂದನ್ನು ಇಟ್ಟು, ಬಿಗ್ಬಾಸ್ ಮನೆಯಲ್ಲಿ ಯಾರು ಪಾಸ್, ಯಾರು ಫೇಲ್ ಹಾಗೂ ಯಾರು ಜಸ್ಟ್ ಪಾಸ್ ಎಂದು ಮನೆಯ ಸದಸ್ಯರು ನಿರ್ಣಯಿಸುವಂತೆ ಹೇಳಿದರು. ಮನೆಯ ಸದಸ್ಯರೆಲ್ಲ ಬೋರ್ಡ್ ಬಳಿ ಬಂದು ಪಾಸ್, ಫೇಲ್ ಹಾಗೂ ಜಸ್ಟ್ ಪಾಸ್ ಕಾಲಂಗಳಲ್ಲಿ ಚಿತ್ರಗಳನ್ನು ಅಂಟಿಸಿದರು. ಅದರ ಪ್ರಕಾರ, ಮನೆಯಲ್ಲಿ ಪಾಸ್ ಆಗಿರುವುದು ತುಕಾಲಿ ಸಂತು, ಜಸ್ಟ್ ಪಾಸ್ ಹಂತದಲ್ಲಿರುವುದು ಡ್ರೋನ್ ಪ್ರತಾಪ್, ಫೇಲ್ ಆಗಿರುವುದು ಅವಿ ಮತ್ತು ಪವಿ.
ಇದನ್ನೂ ಓದಿ:ಬಿಗ್ಬಾಸ್ ಸೀಸನ್ 10ರ ಟಾಪ್ 5 ಯಾರು? ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ
ಫಲಿತಾಂಶದ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಇದೇ ರೀತಿಯ ಚಟುವಟಿಕೆಯೊಂದನ್ನು ಕೆಲವು ವಾರಗಳ ಹಿಂದೆ ಮಾಡಿದ್ದಾಗ ಅದರಲ್ಲಿ ತುಕಾಲಿಯ ಹೆಸರೇ ಬಂದಿರಲಿಲ್ಲ ಆದರೆ ಈಗ ಅವರು ಟಾಪ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಟಾಪ್ನಲ್ಲಿದ್ದವರು ಜಸ್ಟ್ ಪಾಸ್ ಆಗಲೂ ಕಷ್ಟಪಟ್ಟಿದ್ದಾರೆ. ಕಾರ್ತಿಕ್ ಹಾಗೂ ವಿನಯ್ ಪೂರ್ಣ ಪಾಸ್-ಪೂರ್ಣ ಫೇಲ್ ಅನ್ನಿಸಿಕೊಂಡಿಲ್ಲ. ನಮ್ರತಾ ಹೆಸರು ಪಾಸ್, ಫೇಲ್, ಜಸ್ಟ್ ಪಾಸ್ ಮೂರರಲ್ಲೂ ಇಲ್ಲ ಹಾಗಾಗಿ ಅವರೇ ಈ ಬಗ್ಗೆ ಹೆಚ್ಚಾಗಿ ಯೋಚಿಸಬೇಕಿದೆ ಎಂದರು.
ಈ ವಾರ ನಾಮಿನೇಟ್ ಆದವರಲ್ಲಿ ವಿನಯ್ ಅನ್ನು ಹೊರತುಪಡಿಸಿ ಇನ್ಯಾರನ್ನೂ ಸಹ ಸುದೀಪ್ ಸೇವ್ ಮಾಡಲಿಲ್ಲ. ಸಂಗೀತಾ, ಡ್ರೋನ್ ಪ್ರತಾಪ್, ಅವಿ, ಪವಿ, ಮೈಕಲ್, ಕಾರ್ತಿಕ್ ಅವರುಗಳಲ್ಲಿ ಯಾರು ಹೊರಗೆ ಹೋಗಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ