ಕಿಚ್ಚನ ಖಡಕ್ ಮಾತಿಗೆ ಕಿಂಚಿತ್ತೂ ಬೆಲೆ ಕೊಡದ ಯಶಸ್; ತಿದ್ದಿ, ತೀಡಿದರೂ ಮತ್ತದೇ ತಪ್ಪು

ಬಿಗ್ ಬಾಸ್ ಮನೆಗೆ ಕಿಚ್ಚ ಸುದೀಪ್ ನೀಡಿದ ಖಡಕ್ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸ್ಪರ್ಧಿ ಯಶಸ್ ಮತ್ತೆ ದೊಡ್ಡ ತಪ್ಪು ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ನಿಯಮ ಮೀರಿ ಸೋಫಾ ಮೇಲೆ ಕುಳಿತು ಮನೆಯವರ ಪಡಿತರ ಕಸಿದುಕೊಂಡಿದ್ದಾರೆ. ಸುದೀಪ್ ಅವರ ಬುದ್ಧಿಮಾತಿಗೆ ಬೆಲೆ ನೀಡದೆ ಯಶಸ್ ತೋರಿದ ಈ ಉದ್ಧಟತನಕ್ಕೆ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಿಚ್ಚನ ಖಡಕ್ ಮಾತಿಗೆ ಕಿಂಚಿತ್ತೂ ಬೆಲೆ ಕೊಡದ ಯಶಸ್; ತಿದ್ದಿ, ತೀಡಿದರೂ ಮತ್ತದೇ ತಪ್ಪು
ಯಶಸ್-ಸುದೀಪ್

Updated on: Sep 29, 2026 | 7:33 AM

ಮುಖ್ಯಾಂಶಗಳು

  • ಕಿಚ್ಚನ ಕ್ಲಾಸ್ ಮರೆತ ಯಶಸ್
  • ಖಡಕ್ ಎಚ್ಚರಿಕೆಗೂ ಸಿಗಲಿಲ್ಲವೇ ಕನಿಷ್ಠ ಬೆಲೆ?
  • ಮನೆಯವರ ಮುಂದೆ ಯಶಸ್ ಉದ್ಧಟತನದ ಸವಾಲು

ಸುದೀಪ್ ಅವರು ಪ್ರತಿ ವೀಕೆಂಡ್ ಬರುತ್ತಾರೆ. ಪಂಚಾಯ್ತಿಯಲ್ಲಿ ನಿಂತು ಎಲ್ಲರಿಗೂ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಮಾಡಿದ ತಪ್ಪನ್ನು ತಿದ್ದಿ ಹೇಳುತ್ತಾರೆ. ಕೆಲವು ಸ್ಪರ್ಧಿಗಳು ಇದ್ದನ್ನು ತಿದ್ದಿಕೊಂಡರೆ, ಕೆಲವರು ಇದೇ ತಪ್ಪನ್ನು ಮರುವಾರ ಮತ್ತೆ ಮಾಡುತ್ತಾರೆ. ಈ ಸೀಸನ್ ಸ್ಪರ್ಧಿ ಯಶಸ್ ಅವರು ಇದಕ್ಕೆ ಉತ್ತಮ ಉದಾಹರಣೆ. ಕಳೆದ ವಾರ ಸುದೀಪ್ ಹೇಳಿದ ಪಾಠವನ್ನು ಅವರು ಮರೆತು ಹೋಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಳೆದ ವಾರ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ ಒಂದು ಖಡಕ್ ಎಚ್ಚರಿಕೆ ನೀಡಿದ್ದರು. ‘ಕೆಲ ಸ್ಪರ್ಧಿಗಳನ್ನು ನೋಡಿದ್ದೇನೆ. ನೀವು ಮಾಡಿದ ತಪ್ಪಿಗೆ ಮನೆಯವರಿಗೆ ಶಿಕ್ಷೆ ಕೊಡುತ್ತಾರೆ ಎಂದು ಹೇಳಿದಾಗ ನೀವು ಮತ್ತೂ ಜಾಸ್ತಿ ಮಾಡ್ತೀರಾ. ಎಲ್ಲರಿಗೂ ಶಿಕ್ಷೆ ಸಿಗಲಿ ಎಂದು ಆಶಿಸುತ್ತೀರಾ. ಆ ರೀತಿ ಮಾಡಬೇಡಿ. ಆ ರೀತಿ ಮಾಡಿದರೆ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡುತ್ತಾರೆ. ಕಠಿಣ ಶಿಕ್ಷೆಯನ್ನು ನೀಡುತ್ತಾರೆ’ ಎಂದು ಸುದೀಪ್ ಹೇಳಿದ್ದರು. ಇದು ನೆನಪಿನಲ್ಲಿದ್ದೂ ತಪ್ಪು ನಡೆದಿದೆ.

ಈ ವಾರ ಯಶಸ್ ಹಾಗೂ ಕಿರಣ್ ಶಾಸ್ತ್ರಿಯನ್ನು ಮನೆಯಿಂದ ಹೊರಗಿಡಲಾಗಿದೆ. ಅವರನ್ನು ಗಾರ್ಡನ್​ ಏರಿಯಾದಲ್ಲಿರುವ ಫ್ಲೈಟ್​ನಲ್ಲಿ ಕೂರಿಸಲಾಗಿದೆ. ಅವರಿಗೆ ಮನೆಯ ಸೌಕರ್ಯ ಬಳಕೆ ಮಾಡಬಾರದು ಎಂಬುದು ಬಿಗ್ ಬಾಸ್ ಉದ್ದೇಶ. ಇದನ್ನು ಉದ್ದೇಶಪೂರ್ವಕವಾಗಿಯೇ ಯಶಸ್ ಮೀರಿದ್ದಾರೆ. ‘ಫ್ಲೈಟ್​ನಲ್ಲಿ ಮಾತನಾಡಿದ ಯಶಸ್ ಅವರು, ‘ಹೇಗಾದರೂ ಮಾಡಿ ಇವರಿಗೆ ತೊಂದರೆ ಆಗಬೇಕು. ಆ ರೀತಿ ಮಾಡಬೇಕು’ ಎಂದು ಯಶಸ್ ಹೇಳಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ನಿಯಮ ಉಲ್ಲಂಘಿಸಿದ ಯಶಸ್ ಪರ ನಿಂತ ಆಸಿಯಾ; ಕಿಚ್ಚನ ಚಪ್ಪಾಳೆ ಕೊಟ್ಟ ಮರುದಿನವೇ ತಪ್ಪು

ಆ ಬಳಿಕ ಉದ್ದೇಶ ಪೂರ್ವಕವಾಗಿ ಅವರು ಸೋಫಾ ಮೇಲೆ ಕುಳಿತಿದ್ದಾರೆ. ಇದರಿಂದ ಸ್ಪರ್ಧಿಗಳಿಗೆ ನೀಡಲಾದ ಮೊಟ್ಟೆಯಲ್ಲಿ ಅರ್ಧ ಮೊಟ್ಟೆ ಹೋಗಿದೆ. ಈ ಬಗ್ಗೆ ಮನೆಯವರು ಪ್ರಶ್ನೆ ಮಾಡಿದಾಗ ಯಶಸ್ ಅವರಿಂದ ಉದ್ಧಟತನದ ಉತ್ತರ ನೀಡಿದರು. ‘ನಾನು ಮತ್ತಷ್ಟು ನಿಯಮ ಬ್ರೇಕ್ ಮಾಡುತ್ತೇನೆ. ಇನ್ನಷ್ಟು ತೊಂದರೆ ಆಗುವಂತೆ ನಡೆದುಕೊಳ್ಳುತ್ತೇನೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us