ಬಿಗ್ ಬಾಸ್​​ನಲ್ಲಿ ಲೆಸ್ಬಿಯನ್ ಕಪಲ್; ರಿಂಗ್ ಬದಲಿಸಿ ಕಿಸ್ ಮಾಡಿದ ಜೋಡಿ

ಮಲಯಾಳಂ ಬಿಗ್ ಬಾಸ್‌ನಲ್ಲಿ ಲೆಸ್ಬಿಯನ್ ಜೋಡಿ ಅಧಿಲಾ ಮತ್ತು ನೂರಾ ಭಾಗವಹಿಸಿದ್ದಾರೆ. ಕೆಲವು ಸ್ಪರ್ಧಿಗಳು ಅವರನ್ನು ವಿರೋಧಿಸಿದರೆ, ನಿರೂಪಕ ಮೋಹನ್‌ಲಾಲ್ ಅವರು ದಂಪತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಸಂಬಂಧದ ಬಗ್ಗೆ ಸಾಮಾಜಿಕ ಚರ್ಚೆಗಳು ನಡೆದಿದ್ದು, ಈ ಜೋಡಿ ತಮ್ಮ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಗ್ ಬಾಸ್​​ನಲ್ಲಿ ಲೆಸ್ಬಿಯನ್ ಕಪಲ್; ರಿಂಗ್ ಬದಲಿಸಿ ಕಿಸ್ ಮಾಡಿದ ಜೋಡಿ
ಅಧಿಲಾ-ನೂರಾ

Updated on: Sep 19, 2025 | 12:46 PM

‘ಬಿಗ್ ಬಾಸ್’ನಲ್ಲಿ (Bigg Boss) ಹಲವು ರೀತಿಯ ಸ್ಪರ್ಧಿಗಳು ಬಂದು ಹೋಗಿದ್ದಾರೆ. ವಿವಾಹ ಆದವರು, ಪ್ರೇಮಿಗಳು ಕೂಡ ದೊಡ್ಮನೆಗೆ ಬಂದ ಉದಾಹರಣೆ ಇದೆ. ಮಲಯಾಳಂನಲ್ಲಿ ಲೆಸ್ಬಿಯನ್ ಕಪಲ್ ಗಮನ ಸೆಳೆಯುತ್ತಿದ್ದಾರೆ. ಈ ಜೋಡಿ ಬಿಗ್ ಬಾಸ್ ಮನೆಯಲ್ಲೇ ರಿಂಗ್ ಬದಲಿಸಿಕೊಂಡು, ಫ್ರೆಂಚ್ ಕಿಸ್ ಮಾಡಿದ್ದಾರೆ. ಸದ್ಯ ಈ ಜೋಡಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ಅಧಿಲಾ ಹಾಗೂ ನೂರಾ ದೊಡ್ಮನೆಗೆ ಬಂದಿದ್ದಾರೆ. ಇವರು ಲೆಸ್ಬಿಯನ್ ಕಪಲ್. ಅಂದರೆ, ಇವರಿಗೆ ಪುರಷರನ್ನು ಕಂಡರೆ ಆಕರ್ಷಣೆ ಉಂಟಾಗೋದಿಲ್ಲ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರನ್ನು ಕರೆತಂದ ಬಗ್ಗೆ ಕೆಲವರು ಅಪಸ್ವರ ಕೂಡ ತೆಗೆದಿದ್ದಾರೆ. ಆದರೆ, ಇದಕ್ಕೆ ಶೋ ನಡೆಸುವವರಿಂದಲೇ ಸಂಪೂರ್ಣ ಬೆಂಬಲ ಇದೆ.

ಇದನ್ನೂ ಓದಿ
ಬಯಸಿ ಬಂದ ಪ್ರೀತಿಯನ್ನು ಕಾಲಿನಿಂದ ಒದ್ದ ಭೂಮಿಕಾ; ಗೌತಮ್ ಮತ್ತೆ ಏಕಾಂಗಿ
ಸೌಂದರ್ಯಾ ಜೊತೆ ವಿಮಾನದಲ್ಲಿ ಕನ್ನಡದ ಈ ನಟಿಯೂ ಇರಬೇಕಿತ್ತು
‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಬೇಸರ
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಇತ್ತೀಚೆಗೆ ಅಧಿಲಾ ಜನ್ಮದಿನ ಆಗಿತ್ತು. ಈ ವೇಳೆ ಅವರ ಬರ್ತ್​ಡೇಗೆ ಕೇಕ್ ನೀಡುವಂತೆ ನೂರಾ ಕೇಳಿಕೊಂಡರು. ಇದಕ್ಕೆ ಬಿಗ್ ಬಾಸ್ ಸಮ್ಮತಿಸಿದ್ದು, ಕೇಕ್ ಕಳುಹಿಸಿದ್ದಾರೆ. ಈ ಮೊದಲು ಬಿಗ್ ಬಾಸ್ ಮನೆಯಲ್ಲೇ ಅಧಿಲಾ ಹಾಗೂ ನೂರಾ ರಿಂಗ್ ಬದಲಿಸಿಕೊಂಡು, ಪರಸ್ಪರ ಕಿಸ್ ಮಾಡಿದ್ದರು.

ಇತ್ತೀಚೆಗೆ ಮಲಯಾಳಂ ಬಿಗ್ ಬಾಸ್​ ಮನೆಯಲ್ಲಿ ಇವರ ವಿರುದ್ಧ ತಾರತಮ್ಯ ನಡೆದಿತ್ತು. ಅಕ್ಬರ್ ಹಾಗೂ ಲಕ್ಷ್ಮೀ ಅಧಿಲಾ ಹಾಗೂ ನೂರಾ ಅವರ ಬಗ್ಗೆ ಅಸಮಧಾನ ಹೊರಹಾಕಿದ್ದರು. ಇಂಥವರು ನಮ್ಮ ಸಮಾಜದಲ್ಲಿ ಇರಬಾರದು ಎಂದು ಹೇಳಿದ್ದರು. ಇಂಥವರನ್ನು ನಾನು ಮನೆಗೆ ಊಟಕ್ಕೂ ಕರೆಯೋದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್​ ಕನ್ನಡ ಸೀಸನ್ 12’ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ? ಇಲ್ಲಿದೆ ಪಟ್ಟಿ

ಆ್ಯಂಕರ್ ಮೋಹನ್​ಲಾಲ್ ಅವರು ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಅವರು ಲಕ್ಮೀ ಹಾಗೂ ಅಕ್ಬರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ‘ಅವರು ನಿಮ್ಮ ಖರ್ಚಿನಲ್ಲಿ ಬದುಕುತ್ತಿಲ್ಲ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಘನತೆಯಿಂದ ಬದುಕುತ್ತಿದ್ದಾರೆ.ಸಮಾಜ ಅವರನ್ನು ಒಪ್ಪಿಕೊಂಡಿದೆ. ನಾವು ಅವರನ್ನು ಒಪ್ಪಿಕೊಂಡಿದ್ದೇವೆ. ನಿಮಗೆ ಇದರಲ್ಲಿ ಸಮಸ್ಯೆ ಇದ್ದಿದ್ದರೆ, ನೀವು ಈ ಕಾರ್ಯಕ್ರಮಕ್ಕೆ ಬರಬಾರದಿತ್ತು. ಯಾರೂ ನಿಮ್ಮನ್ನು ಬಲವಂತಪಡಿಸಿರಲಿಲ್ಲ’ ಎಂದಿದ್ದರು ಮೋಹನ್​ಲಾಲ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.