AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಕಿರಿಕ್: ವಿಡಿಯೋ ವೈರಲ್ ಆಗಲು ಕಾರಣ ಇಲ್ಲಿದೆ..

ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ರಂಜಿತ್ ಅವರ ಕುಟುಂಬದ ಜಗಳ ಬಹಿರಂಗ ಆಗಿದೆ. ಅಪಾರ್ಟ್​​ಮೆಂಟ್ ಫ್ಲ್ಯಾಟ್​​ ಒಡೆತನಕ್ಕೆ ಸಂಬಂಧಿಸಿದಂತೆ ರಂಜಿತ್ ಹಾಗೂ ಅವರ ಅಕ್ಕನ ನಡುವೆ ಜಗಳ ಆಗಿದೆ. ಕೆಲವು ವಿಡಿಯೋಗಳು ವೈರಲ್ ಆಗಿವೆ. ಈ ಬಗ್ಗೆ ರಂಜಿತ್ ಅವರು ಟಿವಿ9 ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಕಿರಿಕ್: ವಿಡಿಯೋ ವೈರಲ್ ಆಗಲು ಕಾರಣ ಇಲ್ಲಿದೆ..
Bigg Boss Ranjith Family Dispute
Malatesh Jaggin
| Updated By: ಮದನ್​ ಕುಮಾರ್​|

Updated on: Sep 18, 2025 | 5:06 PM

Share

ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ರಂಜಿತ್ ಅವರ ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಜಗಳ ಆಗಿದೆ. ರಂಜಿತ್ ಹಾಗೂ ಅವರ ಅಕ್ಕ ಜಗಳ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ರಂಜಿತ್ (Bigg Boss Ranjith) ಅವರು ವಿವರ ನೀಡಿದ್ದಾರೆ. ಟಿವಿ9ಗೆ ನೀಡಿದ ಪ್ರತಿಕ್ರಿಯೆ ಇಲ್ಲಿದೆ. ‘ನಾನು ಅಟ್ಯಾಕ್ ಮಾಡಿಲ್ಲ. ಅಟ್ಯಾಕ್ ಮಾಡಿದ್ದರೆ ಅವರು ಇರುತ್ತಲೇ ಇರಲಿಲ್ಲ. ಅವರು 3ನೇ ಫ್ಲೋರ್​​ನಲ್ಲಿ ಇರುವುದು. ನಮ್ಮ ಮನೆ ಮೊದಲ ಫ್ಲೋರ್​​ನಲ್ಲಿ ಇದೆ. ಅವರು ನಮ್ಮ ಮನೆ ಒಳಗೆ ಬಂದು ಗಲಾಟೆ ಮಾಡಿದರು. ವಸ್ತುಗಳನ್ನು ಬಿಸಾಕಿದರು. ಆಗ ನಮ್ಮ ಹೆಂಡತಿ ಅಡ್ಡ ನಿಂತುಕೊಂಡರು. ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ’ ಎಂದು ರಂಜಿತ್ ಹೇಳಿದ್ದಾರೆ.

‘ಪೂರ್ತಿ ವಿಡಿಯೋವನ್ನು ಅವರು ತೋರಿಸುತ್ತಿಲ್ಲ. ಯಾಕೆಂದರೆ ಮೊದಲು ಬಂದು ಗಲಾಟೆ ಮಾಡಿದ್ದೇ ಅವರು. ಇದು ಸಿವಿಲ್ ಮ್ಯಾಟರ್. ಈ ಮನೆ ತಮ್ಮದು ಎಂದು ಅವರು ನನಗೆ ಲೀಗಲ್ ನೋಟಿಸ್ ಕಳಿಸಿದ್ದರು. ನಾನು ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ಆದರೂ ಕೂಡ ಅವರು ಪೊಲೀಸ್ ಠಾಣೆಗೆ ಹೋಗಿ ಕುಳಿತುಕೊಂಡರು. ನೀವು ಕೋರ್ಟ್​​ಗೆ ಹೋಗಬೇಕು, ಗಲಾಟೆ ಮಾಡಿಕೊಳ್ಳುವಂತಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಆದರೂ ಕೂಡ ನಮ್ಮ ತಂದೆ ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹೊಡೆದಿದ್ದಾರೆ’ ಎಂದು ರಂಜಿತ್ ತಿಳಿಸಿದ್ದಾರೆ.

‘ಮತ್ತೆ ನಮ್ಮ ಅಕ್ಕ ಬಂದು ಹೊಡೆದಿದ್ದಾರೆ. ನಾನು ಸೆಲೆಬ್ರಿಟಿ ಆಗಿರುವುದರಿಂದ ವಿಡಿಯೋ ಮಾಡಿಕೊಂಡು ಈ ರೀತಿ ಬಿಂಬಿಸೋಣ ಎಂಬುದು ಅವರ ಉದ್ದೇಶ. ಸ್ನೇಹಿತರು ಮತ್ತು ಸಂಬಂಧಿಕರು ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೂ ಅವರು ಸಿದ್ಧರಿಲ್ಲ. 2017-18ರಲ್ಲಿ ನಾನು ಶನಿ ಧಾರಾವಾಹಿ ಮಾಡುವಾಗ ತೆಗೆದುಕೊಂಡ ಮನೆ ಇದು. ಕಲಾವಿದನಾದ ಕಾರಣ ನನಗೆ ಸಾಲ ಸಿಗುವುದಿಲ್ಲ ಎಂಬ ಕಾರಣಕ್ಕೆ ನಮ್ಮ ಅಕ್ಕನ ಹೆಸರಲ್ಲಿ ಮಾಡಿದ್ದೆ. ಅದೊಂದೇ ಕಾರಣಕ್ಕೆ ಅವರು ಈಗ ಬಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ಕಾರಣ ತಿಳಿಸಿದ್ದಾರೆ ರಂಜಿತ್.

‘ಕೋರ್ಟ್​​​ನಲ್ಲಿಯೇ ಇದನ್ನು ಬಗೆಹರಿಸಿಕೊಳ್ಳಬೇಕು. ಮಾಧ್ಯಮಕ್ಕೆ ಬರುವ ಅವಶ್ಯಕತೆ ಇರಲಿಲ್ಲ. ಬಲವಂತವಾಗಿ ಮನೆ ಒಳಗೆ ಬಂದು ಹೊಡೆದಿದ್ದಾರೆ. ನಾನು ಸೆಲೆಬ್ರಿಟಿ ಆಗಿರುವುದರಿಂದ ನನ್ನ ಮರ್ಯಾದೆ ತೆಗೆದರೆ ಮನೆ ಬಿಟ್ಟು ಹೋಗುತ್ತಾನೆ ಎಂಬ ಉದ್ದೇಶದಿಂದ ಹೀಗೆಲ್ಲ ಮಾಡಿದ್ದಾರೆ. ನಿಮಗೆ ಅವರು ಕೊಟ್ಟಿರುವುದು ಒಂದು ರೀತಿಯ ವಿಡಿಯೋ ಮಾತ್ರ. ಬೇರೆ ವಿಡಿಯೋಗಳು ನನ್ನ ಬಳಿಯೂ ಇವೆ. ನನ್ನ ಹೆಂಡತಿ ಕುಳಿತಿರುವಾಗ ಅವರು ಕೆಟ್ಟದಾಗಿ ವಿಡಿಯೋ ಮಾಡುತ್ತಾರೆ. ಅದೆಲ್ಲ ತಪ್ಪಲ್ಲವಾ? ನನ್ನನ್ನು ಕೆರಳಿಸಬೇಕು ಅಂತ ಹೀಗೆ ಮಾಡಿದ್ದಾರೆ’ ಎಂದು ರಂಜಿತ್ ಹೇಳಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್​ ಕನ್ನಡ ಸೀಸನ್ 12’ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ? ಇಲ್ಲಿದೆ ಪಟ್ಟಿ

‘ಮದುವೆ ಆದಮೇಲೆ ಸಮಸ್ಯೆ ಕೊಡುತ್ತಿದ್ದಾರೆ. ಇಷ್ಟು ದಿನ ಇಎಂಐ ಕಳಿಸಿದ್ದೇನೆ. ಇನ್ಮೇಲೆ ಕೂಡ ಕಳಿಸುತ್ತೇನೆ. ಆದರೂ ಲೀಗಲ್ ನೋಟಿಸ್ ಕಳಿಸಿದರು. ಅದಕ್ಕೆ ನಾನು ಸ್ವಲ್ಪ ಕಾದೆ. ಆದರೆ ನನ್ನನ್ನು ಸ್ಟೇಷನ್ ಮೆಟ್ಟಿಲು ಹತ್ತಿಸಿದ್ದಾರೆ. 1.25 ಕೋಟಿ ರೂಪಾಯಿ ಬೆಲೆಯ ಮನೆ ಇದು. ಅಷ್ಟು ಹಣ ತಮಗೆ ಬೇಕು ಎನ್ನುತ್ತಿದ್ದಾರೆ. ನಾನು ಮನೆಯನ್ನೂ ಬಿಟ್ಟು, ದುಡ್ಡನ್ನೂ ಕೊಡಬೇಕು ಎಂದರೆ ಹೇಗೆ ಸಾಧ್ಯ?’ ಎಂದಿದ್ದಾರೆ ಬಿಗ್ ಬಾಸ್ ರಂಜಿತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ