AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಶ್ ಜೊತೆ ಕಿರಿಕ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ರಂಜಿತ್

ನಟ ರಂಜಿತ್ ಅವರು ಮತ್ತು ಅವರ ಅಕ್ಕ ನಡುವೆ ವಿವಾದ ಉಂಟಾಗಿದೆ. ಫ್ಲಾಟ್‌ನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಗಂಭೀರವಲ್ಲದ ಪ್ರಕರಣ ದಾಖಲಾಗಿದೆ. ಕೋರ್ಟ್ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ .

ಜಗದೀಶ್ ಜೊತೆ ಕಿರಿಕ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ರಂಜಿತ್
ರಂಜಿತ್
ರಾಜೇಶ್ ದುಗ್ಗುಮನೆ
|

Updated on:Sep 18, 2025 | 1:40 PM

Share

ನಟ ರಂಜಿತ್ (Ranjith) ಅವರು ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಅವರು ಹಲ್ಲೆ ಮಾಡಿದ ಆರೋಪ ಹೊತ್ತು ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂತು. ಇತ್ತೀಚೆಗೆ ಅದ್ದೂರಿಯಾಗಿ ರಂಜಿತ್ ವಿವಾಹ ನೆರವೇರಿತು. ಹೀಗಿರುವಾಗಲೇ ರಂಜಿತ್ ಪೊಲೀಸ್ ಠಾಣೆ ಮೆಟ್ಟಿಲೇರೋ ಪರಿಸ್ಥಿತಿ ಬಂದಿದೆ. ಅಷ್ಟಕ್ಕೂ ಆದ ಕಿರಿಕ್ ಏನು? ಆ ಬಗ್ಗೆ ಇಲ್ಲಿದೆ ವಿವರ.

2018ರಿಂದ ಅಮೃತಹಳ್ಳಿಯ ಫ್ಲ್ಯಾಟ್​ನಲ್ಲಿ ರಂಜಿತ್ ಸಹೋದರಿ ರಶ್ಮಿ ಹಾಗೂ ಅವರ ಪತಿ ಜಗದೀಶ್ ವಾಸವಿದ್ದಾರೆ. 2025ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್ ವಾಸವಿದ್ದರಂತೆ. ಇದೀಗ ಮನೆ ವಿಚಾರಕ್ಕೆ ಅಕ್ಕ ತಮ್ಮನ ನಡುವೆ ಗಲಾಟೆ ಆಗಿದೆ. ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದೆ.

ಈ ಮನೆ ರಶ್ಮಿ ಹೆಸರಲ್ಲೇ ಇದೆ ಎನ್ನಲಾಗಿದೆ. ಆದರೆ, ಮನೆ ಖರೀದಿಸಲು ನಾನೂ ಹಣ ಹಾಕಿದ್ದೆ ಎಂದು ರಂಜಿತ್ ಹೇಳಿದ್ದಾರೆ. ಇದೇ ವಿಚಾರಕ್ಕೆ ರಂಜಿತ್ ಪತ್ನಿ ಹಾಗೂ ರಶ್ಮಿ ನಡುವೆ ಜಗಳ ನಡೆದಿದೆ. ಸದ್ಯ, ‘ಮನೆ ಬಿಟ್ಟು ಹೋಗು, ನಂದೆ ಮನೆ ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ಜಗದೀಶ್ ದೂರು ದಾಖಲು ಮಾಡಿದ್ದಾರೆ. ‘ನನ್ನ ಹೆಸರಲ್ಲಿ ಫ್ಲಾಟ್ ಇದೆ, ನೀವು ಮನೆ ಖಾಲಿ ಮಾಡಬೇಕು’ ಎಂದು ರಂಜಿತ್, ರಶ್ಮಿಗೆ ಹೇಳಿದ್ದಾರಂತೆ.

ಇದನ್ನೂ ಓದಿ
Image
ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ನಡೆದ ಪ್ರಯತ್ನಗಳು ಒಂದೆರಡಲ್ಲ
Image
ಇನ್ನೂ ಕಡಿಮೆ ಆಗಿಲ್ಲ ಮಾಲಾಶ್ರೀ ಖದರ್; ಈ ವಿಡಿಯೋನೇ ಸಾಕ್ಷಿ
Image
ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ; ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಗಂಭೀರವಲ್ಲದ ಪ್ರಕರಣ (Non-Cognizable Report) ದಾಖಲು ಮಾಡಿದ್ದಾರೆ. ಫ್ಲಾಟ್ ವಿಚಾರ ಸಿವಿಲ್ ವ್ಯಾಜ್ಯ ಆಗಿದೆ. ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ಬುದ್ಧಿ ಹೇಳಿ ಪೊಲೀಸರು ಕಳುಹಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನಿಂದ ಔಟ್ ಆಗಿರೋ ರಂಜಿತ್ ಈಗೇನು ಮಾಡ್ತಿದ್ದಾರೆ?

ರಂಜಿತ್ ಅವರು ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದರು. ಅವರು ಸಿಸಿಎಲ್​ನಲ್ಲೂ ಕ್ರಿಕೆಟ್ ಆಡಿದ್ದರು. ಈ ವೇಳೆ ಸುದೀಪ್ ಜೊತೆ ಆಪ್ತತೆ ಬೆಳೆದಿತ್ತು. ಆ ಬಳಿಕ ಅವರು ಬಿಗ್ ಬಾಸ್​ಗೆ ಬಂದರು. ಆದರೆ, ಲಾಯರ್ ಜಗದೀಶ್ ಜೊತೆಗಿನ ಕಿರಿಕ್​ನಿಂದ ಕೆಲವೇ ದಿನಗಳಲ್ಲಿ ಅವರು ಹೊರ ಹೋಗಬೇಕಾದ ಪರಿಸ್ಥಿತಿ ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:02 pm, Thu, 18 September 25