
ರಜತ್ ‘ಬಿಗ್ ಬಾಸ್’ (Bigg Boss) ಮೂಲಕ ಫೇಮಸ್ ಆದವರು. ಅವರು ಇಷ್ಟು ದಿನ ಮಚ್ಚು-ಲಾಂಗ್ ವಿಚಾರಕ್ಕೆ ಸಾಕಷ್ಟು ಸುದ್ದಿ ಆಗಿದ್ದು ಗೊತ್ತೇ ಇದೆ. ಈಗ ಅವರು ಜೀ ಕನ್ನಡ ರಿಯಾಲಿಟಿ ಶೋಗೆ ಬಂದಿದ್ದಾರೆ. ‘ನಾನು ನಮ್ಮವರು’ ರಿಯಾಲಿಟಿ ಶೋ ಆಗಸ್ಟ್ 2ರಿಂದ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಈ ಶೋನ ಭಾಗವಾಗಿ ರಜತ್ ಕೂಡ ಇದ್ದಾರೆ. ಇಡೀ ಕುಟುಂಬದ ಜೊತೆ ಅವರು ಶೋಗೆ ಬಂದಿದ್ದಾರೆ. ಒಟ್ಟೂ 9 ಜೋಡಿಗಳು ಶೋಗೆ ಬಂದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಅವರು ಸ್ಪರ್ಧಿ ಆಗಿದ್ದರು. ವೈಲ್ಡ್ ಕಾರ್ಡ್ ಮೂಲಕ ಅವರು ದೊಡ್ಮನೆ ಪ್ರವೇಶ ಮಾಡಿ ಸಾಕಷ್ಟು ಸದ್ದು ಮಾಡಿದರು. ಫಿನಾಲೆವರೆಗೆ ಅವರು ಇದ್ದರು. ಆ ಬಳಿಕ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನ ಭಾಗ ಆದರು. ಈ ವೇಳೆ ಅವರು ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿ ಸದ್ದು ಮಾಡಿದರು ಮತ್ತು ಬಂಧನ ಕೂಡ ಆದರು. ಈಗ ಅವರು ‘ನಾನು ನಮ್ಮವರು’ ಶೋಗೆ ಬಂದಿದ್ದಾರೆ. ಈ ಶೋನಲ್ಲಿ ಪತ್ನಿ ಹಾಗೂ ಮಗನ ಜೊತೆ ಬಂದಿದ್ದಾರೆ ಅನ್ನೋದು ವಿಶೇಷ.
‘ಸವಿ ಸವಿ ಮನರಂಜನೆಯ ನೆನಪಿನಂಗಳಕ್ಕೆ ‘ನಾವು ನಮ್ಮವರು’ ಮಾಡಿದರು ಗೃಹಪ್ರವೇಶ. ನಾವು ನಮ್ಮವರು. ನಾಳೆಯಿಂದ (ಆಗಸ್ಟ್ 2) ಶನಿ-ಭಾನು ರಾತ್ರಿ 9ಕ್ಕೆ’ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ. ರಜತ್ ಮಾತ್ರವಲ್ಲದೆ, ಸುಜಯ್ ಶಾಸ್ತ್ರಿ, ಸಮೀರ್ ಆಚಾರ್ಯ ಮೊದಲಾದವರು ಶೋನ ಭಾಗ ಆಗಿದ್ದಾರೆ.
ಈ ಶೋನಲ್ಲಿ ಗಮನ ಸೆಳೆಯುತ್ತಿರುವವರು ಜಡ್ಜ್ಗಳು. ಶೋಗೆ ಶರಣ್, ತಾರಾ ಹಾಗೂ ಅಮೂಲ್ಯ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಅಮೂಲ್ಯ ಅವರು ಇಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದರು. 2017ರ ಬಳಿಕ ಅವರು ಸಿನಿಮಾ ಮಾಡಿಯೇ ಇರಲಿಲ್ಲ. ಇದೇ ಮೊದಲ ಬಾರಿಗೆ ಅವರು ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶರಣ್ ಕೂಡ ಹಿರಿತೆರೆ ಜೊತೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ