ಬಿಗ್​ಬಾಸ್ ತೆಲುಗು ಸೀಸನ್ 8 ಶೀಘ್ರ ಆರಂಭ, ಭಾಗಿಯಾಗುವ ಸ್ಪರ್ಧಿಗಳು ಯಾರು?

ಕಳೆದ ಬಾರಿ ಸಖತ್ ಜನಪ್ರಿಯತೆ ಗಳಿಸಿದ್ದ ಕೆಲವು ವಿವಾದಗಳನ್ನು ಸಹ ಸೃಷ್ಟಿಸಿದ್ದ ತೆಲುಗು ಬಿಗ್​ಬಾಸ್ ಸೀಸನ್ 08 ಶೀಘ್ರವೇ ಆರಂಭವಾಗಲಿದೆ. ಈ ಬಾರಿ ಶೋನಲ್ಲಿ ಭಾಗಿಯಾಗಲಿರುವ ಕೆಲವು ಸ್ಪರ್ಧಿಗಳ ಹೆಸರು ಸಹ ಬಹಿರಂಗವಾಗಿದೆ.

ಬಿಗ್​ಬಾಸ್ ತೆಲುಗು ಸೀಸನ್ 8 ಶೀಘ್ರ ಆರಂಭ, ಭಾಗಿಯಾಗುವ ಸ್ಪರ್ಧಿಗಳು ಯಾರು?
Follow us
ಮಂಜುನಾಥ ಸಿ.
|

Updated on:Jul 04, 2024 | 9:36 PM

ಬಿಗ್​ಬಾಸ್ ತೆಲುಗು ಮತ್ತು ಕನ್ನಡದ ಕಳೆದ ಸೀಸನ್​ ಭಾರಿ ಹಿಟ್ ಆಗಿದೆ. ಹಿಂದಿ, ತಮಿಳು, ಮಲಯಾಳಂ ಅಥವಾ ಇನ್ನಿತರೆ ಯಾವುದೇ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಹಾಗೂ ತೆಲುಗಿನ ಬಿಗ್​ಬಾಸ್ ಸೀಸನ್ ಭಾರಿ ಹಿಟ್ ಆಗಿದೆ. ತೆಲುಗಿನಲ್ಲಂತೂ ಶೋ ಗೆ ಭಾರಿ ಟಿಆರ್​ಪಿ ದೊರಕಿದ್ದು ಮಾತ್ರವೇ ಅಲ್ಲದೆ. ಬಿಗ್​ಬಾಸ್ ಸ್ಪರ್ಧಿಗಳಿಗೆ ದೊಡ್ಡ ಅಭಿಮಾನಿ ವರ್ಗ ಹುಟ್ಟಿಕೊಂಡಿದ್ದು, ಹೊರಗೆ ಸ್ಪರ್ಧಿಗಳ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡ ಘಟನೆ ಸಹ ನಡೆದವು. ಬಿಗ್​ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ವಿರುದ್ಧ ಕೆಲ ಪ್ರಕರಣಗಳು ಸಹ ದಾಖಲಾದವು. ಇದೀಗ ಬಿಗ್​ಬಾಸ್ ತೆಲುಗು ಮತ್ತೆ ಪ್ರಾರಂಭವಾಗುತ್ತಿದೆ.

ಕಳೆದ ಬಾರಿ ಭಾರಿ ಜನಪ್ರಿಯತೆ ದೊರೆತಿದ್ದ ಕಾರಣ ಈ ಬಾರಿ ತುಸು ಬೇಗನೇ ರಿಯಾಲಿಟಿ ಶೋ ಅನ್ನು ಪ್ರಾರಂಭ ಮಾಡಲಾಗುತ್ತಿದೆ. ಆಗಸ್ಟ್ 4 ರಂದು ಬಿಗ್​ಬಾಸ್ ತೆಲುಗು ಸೀಸನ್ 8 ಪ್ರಾರಂಭ ಆಗಲಿದೆ. ಈ ಬಾರಿ ಬಿಗ್​ಬಾಸ್​ನಲ್ಲಿ ಭಾಗಿಯಾಗಲಿರುವ ಸ್ಪರ್ಧಿಗಳು ಈಗಾಗಲೇ ಖಾತ್ರಿ ಆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿಯಂತೆಯೇ ಸಾಮಾಜಿಕ ಜಾಲತಾಣದ ಮೂಲಕ ಜನಪ್ರಿಯರಾದ ಸಾಮಾನ್ಯ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಭಾರಿ ದುಬಾರಿ ಬೆಲೆಗೆ ಆಹಾರ ಮಾರಾಟ ಮಾಡುತ್ತಾ ಜನಪ್ರಿಯವಾಗಿರುವ ಕುಮಾರಿ ಆಂಟಿ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಕುಮಾರಿ ಆಂಟಿ ರಸ್ತೆ ಬದಿ ಅಂಗಡಿ ನಡೆಸುತ್ತಾರೆ. ಆದರೆ ಇವರ ಬಳಿ ಊಟ ಬಲು ದುಬಾರಿ, ಇದೇ ಕಾರಣಕ್ಕೆ ಈ ಆಂಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದರು. ಈಗ ಬಿಗ್​ಬಾಸ್​ಗೂ ಹೋಗಲಿದ್ದಾರೆ.

ಇದನ್ನೂ ಓದಿ:Varthur Santhosh: ಬಿಗ್​ಬಾಸ್ ಸೆಲೆಬ್ರಿಟಿ ವರ್ತೂರು ಸಂತೋಷ್​ ವಿರುದ್ಧ ಪ್ರಕರಣ ದಾಖಲು

ಅಮೃತಾ ಪ್ರಣಯ್ ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ. ದೇಶವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದಾ ಹತ್ಯೆಯ ಸಂತ್ರಸ್ತೆ ಅಮೃತಾ ಪ್ರಣಯ್. ಅಮೃತಾ, ಪ್ರಣಯ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು, ಆದರೆ ಮದುವೆ ಇಷ್ಟವಿಲ್ಲದ ಅಮೃತಾರ ಶ್ರೀಮಂತ ತಂದೆ ಪ್ರಣಯ್ ಅನ್ನು ಹಾಡಹಗಲೆ ಕೊಲ್ಲಿಸಿದ್ದರು. ಅಮೃತಾ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ. ಡ್ರಗ್ಸ್ ಪ್ರಕರಣದ ಆರೋಪಿ ಹೇಮಾ ಸಹ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದ ನಟಿ ಹೇಮಾ, ಮಾ ಅಸೋಸಿಯೆಷನ್​ನಿಂದ ಬ್ಯಾನ್ ಸಹ ಆಗಿದ್ದಾರೆ. ಅವರೂ ಸಹ ಬಿಗ್​ಬಾಸ್​ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಜನಪ್ರಿಯ ಯೂಟ್ಯೂಬ್ ಕಪಲ್ ಆಗಿರುವ ನೇತ್ರಾ ಮತ್ತು ವಂಶಿ ಸಹ ಈ ಬಾರಿ ಬಿಗ್​ಬಾಸ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ತೆಲುಗು ಚಿತ್ರರಂಗದ ಕೆಲವು ಹಿರಿಯ ನಟ-ನಟಿಯರು, ಟಿವಿ ಜಗತ್ತಿನ ಕೆಲವು ಗ್ಲಾಮರಸ್ ನಟಿಯರು ಸಹ ಬಿಗ್​ಬಾಸ್​ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರತಿಬಾರಿಯಂತೆ ನಟ ನಾಗಾರ್ಜುನ ಅವರೇ ಈ ಬಾರಿಯೂ ಶೋ ನಡೆಸಿಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Thu, 4 July 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ