‘ಬೃಂದಾವನ ತಂಡ ಮಾಡಿದ್ದು ಸರಿ ಅಲ್ಲ’; ವಿಶ್ವನಾಥ್ ಹಾವೇರಿಗೆ ನ್ಯಾಯ ಕೊಡಿಸಿ ಎಂದು ಆಗ್ರಹ

| Updated By: ರಾಜೇಶ್ ದುಗ್ಗುಮನೆ

Updated on: Nov 21, 2023 | 3:27 PM

ಸಾಮಾನ್ಯವಾಗಿ ಕಲಾವಿದರಿಗೆ ಬೇರೆ ಆಫರ್ ಸಿಕ್ಕರೆ, ತಂಡದ ಜೊತೆ ಕಿರಿಕ್ ಆದರೆ ಕಲಾವಿದರು ಚೇಂಜ್ ಆಗೋದು ಸಾಮಾನ್ಯ. ಆದರೆ, ಏನೂ ಇಲ್ಲದೇ ವಿಶ್ವನಾಥ್ ಅವರನ್ನು ‘ಬೃಂದಾವನ’ ಧಾರಾವಾಹಿಯಿಂದ ಹೊರಗೆ ಇಡಲಾಗಿದೆ.

‘ಬೃಂದಾವನ ತಂಡ ಮಾಡಿದ್ದು ಸರಿ ಅಲ್ಲ’; ವಿಶ್ವನಾಥ್ ಹಾವೇರಿಗೆ ನ್ಯಾಯ ಕೊಡಿಸಿ ಎಂದು ಆಗ್ರಹ
ವರುಣ್ ಆರಾಧ್ಯ-ವಿಶ್ವನಾಥ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಭಾಗಿ ಆದ ಸ್ಪರ್ಧಿಗಳ ಪೈಕಿ ಶಮಂತ್ ಬ್ರೋ ಗೌಡ ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ, ಮಂಜು ಪಾವಗಡ ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ದಿವ್ಯಾ ಸುರೇಶ್ (Divya Suresh) ಅವರು ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಅದೇ ರೀತಿ ‘ಬಿಗ್ ಬಾಸ್​’ನಲ್ಲಿ ಸ್ಪರ್ಧಿಸಿದ್ದ ವಿಶ್ವನಾಥ್ ಹಾವೇರಿ ಅವರಿಗೂ ಚಾನ್ಸ್ ಸಿಕ್ಕಿತ್ತು. ‘ಬೃಂದಾವನ’ ಧಾರಾವಾಹಿಯಲ್ಲಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಅವರಿಗೆ ಬೇಸರ ಆಗುವ ಘಟನೆ ನಡೆದಿದೆ. ಧಾರಾವಾಹಿ ಆರಂಭ ಆಗಿ ಒಂದು ತಿಂಗಳು ತುಂಬುವ ಮೊದಲೇ ಧಾರಾವಾಹಿಯಿಂದ ವಿಶ್ವನಾಥ್ ಅವರು ಹೊರ ಬಿದ್ದಿದ್ದಾರೆ. ಈ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ.

ಸಾಮಾನ್ಯವಾಗಿ ಕಲಾವಿದರಿಗೆ ಬೇರೆ ಆಫರ್ ಸಿಕ್ಕರೆ, ತಂಡದ ಜೊತೆ ಕಿರಿಕ್ ಆದರೆ ಕಲಾವಿದರು ಚೇಂಜ್ ಆಗೋದು ಸಾಮಾನ್ಯ. ಆದರೆ, ಏನೂ ಇಲ್ಲದೇ ವಿಶ್ವನಾಥ್ ಅವರನ್ನು ‘ಬೃಂದಾವನ’ ಧಾರಾವಾಹಿಯಿಂದ ಹೊರಗೆ ಇಡಲಾಗಿದೆ. ಧಾರಾವಾಹಿಯ ನಾಯಕ ಆಕಾಶ್ ಪಾತ್ರದಿಂದ ವಿಶ್ವನಾಥ್ ಹೊರ ಹೋಗಿದ್ದಾರೆ. ರೀಲ್ಸ್ ಮಾಡಿ ಫೇಮಸ್ ಆಗಿರುವ ವರುಣ್ ಆರಾಧ್ಯ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

‘ಬೃಂದಾವನ’ ಧಾರಾವಾಹಿಯಲ್ಲಿ ಚಿತ್ಕಲಾ ಬೀರಾದರ್, ಅಮೂಲ್ಯ ಭಾರದ್ವಾಜ್, ವೀಣಾ ಸುಂದರ್, ಅಂಬುಜಾ ಸೇರಿ ಅನೇಕರು ನಟಿಸುತ್ತಿದ್ದಾರೆ. ವಿಶ್ವನಾಥ್ ಹಾವೇರಿ ಅವರು ಆಕಾಶ್ ಪಾತ್ರ ಮಾಡುತ್ತಿದ್ದರು. ವಿಶ್ವನಾಥ್ ಅವರು ಗಾಯಕ. ಅವರು ಬಿಗ್ ಬಾಸ್​ನ ಮಾಜಿ ಸ್ಪರ್ಧಿ. ಮನೆಯ ಮುದ್ದಿನ ಮಗನಾಗಿರುವ ಆಕಾಶ್ ವಿದೇಶದಲ್ಲಿ ಓದುತ್ತಿದ್ದಾನೆ. ಆತನಿಗೆ ಮದುವೆ ಮಾಡೋಕೆ ಕುಟುಂಬದವರು ನಿರ್ಧರಿಸುತ್ತಾರೆ. ಮದುವೆ ಕಾರ್ಯಕ್ರಮ ಆರಂಭಕ್ಕೂ ಮೊದಲೇ ವರುಣ್ ಆರಾಧ್ಯ ಎಂಟ್ರಿ ಆಗಿದೆ.

ವೀಕ್ಷಕರಿಂದ ಟೀಕೆ

ಧಾರಾವಾಹಿ ಆರಂಭ ಆದ ಕೆಲವೇ ದಿನಗಳಲ್ಲಿ ಅವರನ್ನು ಹೊರ ಹಾಕಿರುವ ವಿಚಾರಕ್ಕೆ ಅನೇಕರು ಅಪಸ್ವರ ತೆಗೆದಿದ್ದಾರೆ. ಅವರು ಈ ರೀತಿ ಮಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ‘ವಿಶ್ವನಾಥ್​ಗೆ ನ್ಯಾಯ ಸಿಗಬೇಕು’ ಎಂದು ಅನೇಕರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಈ ನಿರ್ಧಾರ ಸರಿ ಇದೆ ಎಂದಿದ್ದಾರೆ. ವಿಶ್ವನಾಥ್ ಅವರು ಸಾಕಷ್ಟು ಯಂಗ್ ಆಗಿ ಕಾಣಿಸುತ್ತಿದ್ದರು. ಹೀಗಾಗಿ, ನಾಯಕನ ಬದಲಾವಣೆ ಸರಿ ಇದೆ ಅನ್ನೋದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ‘ಬೃಂದಾವನ’ ಧಾರಾವಾಹಿಯಲ್ಲಿ ನೆಗಟಿವ್ ಶೇಡ್​ನ ಪಾತ್ರಗಳೇ ಇಲ್ಲ; ಹೀಗೊಂದು ಹೊಸ ಪ್ರಯೋಗ

ವರುಣ್ ಆರಾಧ್ಯ ಯಾರು?

ವರುಣ್ ಆರಾಧ್ಯ ಟಿಕ್ ಟಾಕ್ ಮೂಲಕ ಫೇಮಸ್ ಆದವರು. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಇನ್​ಸ್ಟಾಗ್ರಾಮ್​ ಮೂಲಕ ಫೇಮಸ್ ಆದರು. ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಅವರು ಗರ್ಲ್​ಫ್ರೆಂಡ್​ ವರ್ಷ ಕಾವೇರಿ ಜೊತೆ ಬಿಗ್ ಬಾಸ್​ಗೆ ಬರುತ್ತಾರೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮೊದಲೇ ಇಬ್ಬರೂ ಬೇರೆ ಆದರು. ಇದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ