ಅಣ್ಣನ ಸ್ಥಾನದಲ್ಲಿ ನಿಂತು ಚೈತ್ರಾ ಕಣ್ಣೊರಿಸಿದ ಕಿಚ್ಚ; ಸುದೀಪ್ ನಡೆಗೆ ಶ್ಲಾಘನೆ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರ ನಿರ್ಗಮನವು ಭಾವನಾತ್ಮಕವಾಗಿತ್ತು. ಅವರ ಪ್ರಯಾಣದ ವಿಡಿಯೋ ವೀಕ್ಷಿಸಿದ ನಂತರ ಅವರು ಕಣ್ಣೀರು ಹಾಕಿದರು. ಸುದೀಪ್ ಅವರು ಅವರನ್ನು ಸಮಾಧಾನಪಡಿಸಿದ್ದು ಮತ್ತು ಅವರ ಆಟವನ್ನು ಶ್ಲಾಘಿಸಿದ್ದ ವಿಡಿಯೋ ವೈರಲ್ ಆಗಿದೆ. ಚೈತ್ರಾ ಅವರು ಹಲವು ಬಾರಿ ಕಳಪೆ ಪಡೆದಿದ್ದರೂ, ಅವರ ಅಭಿಮಾನಿಗಳು ಅವರನ್ನು ಬೆಂಬಲಿಸಿದ್ದಾರೆ.

ಅಣ್ಣನ ಸ್ಥಾನದಲ್ಲಿ ನಿಂತು ಚೈತ್ರಾ ಕಣ್ಣೊರಿಸಿದ ಕಿಚ್ಚ; ಸುದೀಪ್ ನಡೆಗೆ ಶ್ಲಾಘನೆ
ಚೈತ್ರಾ-ಸುದೀಪ್

Updated on: Jan 13, 2025 | 11:57 AM

ಚೈತ್ರಾ ಕುಂದಾಪುರ ಅವರು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅವರು ಹಲವು ತಪ್ಪುಗಳನ್ನು ಮಾಡಿದ ಆರೋಪ ಹೊಂದಿದ್ದಾರೆ. ಅವರೇನೇ ತಪ್ಪು ಮಾಡಿದರೂ ಅದನ್ನು ಮನ್ನಿಸಿ ಒಳಕ್ಕೆ ಕರೆದುಕೊಂಡಿದ್ದು ಬಿಗ್ ಬಾಸ್. ಈ ರಿಯಾಲಿಟಿ ಶೋಗೆ ಬಂದ ಬಳಿಕ ಅವರನ್ನು ನೋಡುವ ರೀತಿ ಬದಲಾಗಿದೆ. ಅವರಿಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಸಮಾಧಾನ ಮಾಡುವ ಕೆಲಸ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಅವರು 100 ದಿನಗಳಿಗೂ ಅಧಿಕ ಕಾಲ ಇದ್ದು ಎಲಿಮಿನೇಟ್ ಆದರು. ಅವರು ಹೊರ ಹೋಗುತ್ತಾರೆ ಎನ್ನುವುದು ಬಹುತೇಕ ಖಚಿತ ಆಗಿತ್ತು. ಅಂತಿಮವಾಗಿ ಧನರಾಜ್ ಹಾಗೂ ಚೈತ್ರಾ ಇದ್ದರು. ಈ ವೇಳೆ ಚೈತ್ರಾ ಕುಂದಾಪುರ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು.

ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿ ಬಂದ ಚೈತ್ರಾಗೆ ತಮ್ಮ ಜರ್ನಿಯ ವಿಡಿಯೋ ತೋರಿಸಲಾಯಿತು. ಆಗ ಚೈತ್ರಾ ಕಣ್ಣೀರು ಹಾಕಿದರು. ‘ಯಾಕೆ ಅಳೋದು’ ಎಂದು ಸುದೀಪ್ ಚೈತ್ರಾ ಅವರ ಕಣ್ಣೀರು ಒರಿಸಿದರು. ‘ಉತ್ತಮವಾಗಿ ಆಟ ಆಡಿದ್ದೀರಿ. ಎಷ್ಟು ಬಾರಿ ಕಳಪೆ ತೆಗೆದುಕೊಂಡ್ರಿ ಅನ್ನೋದು ಮುಖ್ಯವಲ್ಲ. ವಿಡಿಯೋ ಕೊನೆಗೊಂಡಿದ್ದು ಉತ್ತಮದೊಟ್ಟಿಗೆ’ ಎಂದಿದ್ದಾರೆ ಸುದೀಪ್.

ಚೈತ್ರಾ ಕುಂದಾಪುರ ಅವರು ಇಷ್ಟು ವಾರಗಳ ಕಾಲ ಕಳಪೆ ಪಟ್ಟ ಪಡೆದಿದ್ದೇ ಹೆಚ್ಚು. ಈ ಸೀಸನ್​ನಲ್ಲಿ ಅವರು ಅತಿ ಹೆಚ್ಚು ಬಾರಿ ಕಳಪೆ ಪಡೆದಿದ್ದಾರೆ. ಆದರೆ, ಕಳೆದ ವಾರ ಅವರಿಗೆ ಉತ್ತಮ ಬಂದಿತ್ತು. ಅದೇ ವಾರವೇ ಚೈತ್ರಾ ಅವರು ಎಲಿಮಿನೇಟ್ ಆಗಿದ್ದಾರೆ. ಈ ಬಗ್ಗೆ ಅವರಿಗೆ ಖುಷಿಯೂ ಇದೆ.

ಇದನ್ನೂ ಓದಿ: ಹೀಗೆ ಆಟ ಮುಂದುವರಿದರೆ ಹನುಮಂತನೇ ವಿನ್ನರ್? ಸೂಚನೆ ಕೊಟ್ಟ ಸುದೀಪ್

ಇನ್ನು ಸುದೀಪ್ ಅವರು ಚೈತ್ರಾ ಅವರ ಕಣ್ಣೀರು ಒರೆಸಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಅವರನ್ನು ಶ್ಲಾಘಿಸಿದ್ದಾರೆ. ‘ಸುದೀಪ್ ಅವರು ಸ್ಪರ್ಧಿಗಳಿಗೆ ಅಣ್ಣನ ಸ್ಥಾನ ನೀಡಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us