ಮೆಹಂದಿ ಹಾಕಿ ಮದುವೆಗೆ ರೆಡಿ ಆದ ಚೈತ್ರಾ ಕುಂದಾಪುರ; ಹುಡುಗನ ಫೋಟೋ ನೋಡಲು ಕಾದ ಫ್ಯಾನ್ಸ್

Chaithra Kundapura Wedding: ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ನಂತರ ಮದುವೆಗೆ ಸಜ್ಜಾಗಿದ್ದಾರೆ. ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ವರನ ಫೋಟೋವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಬಿಗ್ ಬಾಸ್ ಮತ್ತು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗಳಲ್ಲಿ ಚೈತ್ರಾ ಅವರ ಜನಪ್ರಿಯತೆ ಹೆಚ್ಚಾಗಿದೆ.

ಮೆಹಂದಿ ಹಾಕಿ ಮದುವೆಗೆ ರೆಡಿ ಆದ ಚೈತ್ರಾ ಕುಂದಾಪುರ; ಹುಡುಗನ ಫೋಟೋ ನೋಡಲು ಕಾದ ಫ್ಯಾನ್ಸ್
ಚೈತ್ರಾ

Updated on: May 08, 2025 | 1:08 PM

ಚೈತ್ರಾ ಕುಂದಾಪುರ (Chaithra Kundapura) ಅವರು ‘ಬಿಗ್ ಬಾಸ್’ ಮನೆಗೆ ಹೋದಾಗಲೇ ಮದುವೆ ಬಗ್ಗೆ ಮೌನ ಮುರಿದಿದ್ದರು. ‘ನನಗೆ ಈಗಾಗಲೇ ಹುಡುಗ ಫಿಕ್ಸ್ ಆಗಿದ್ದಾನೆ. ಬಿಗ್ ಬಾಸ್​ನಿಂದ ಹೋದ ತಕ್ಷಣ ಮದುವೆ’ ಎಂದಿದ್ದರು. ಬಿಗ್ ಬಾಸ್ ಮುಗಿದು ಐದು ತಿಂಗಳ ಬಳಿಕ ಚೈತ್ರಾ ಕುಂದಾಪುರ ಅವರು ವಿವಾಹಕ್ಕೆ ಸಿದ್ಧರಾಗಿದ್ದಾರೆ. ಅವರು ಕೈಗೆ ಮೆಹಂದಿ ಹಾಕಿಕೊಂಡಿದ್ದಾರೆ. ಶೀಘ್ರವೇ ಅವರ ವಿವಾಹ ಕಾರ್ಯ ನೆರವೇರುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಆಗಿದ್ದು ಅವರ ಬಿಗ್ ಬಾಸ್ ಪ್ರಯಾಣ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಲವ್ ಅಫೇರ್ ಇಟ್ಟುಕೊಂಡು ಸುದ್ದಿ ಆಗಲು ಅವರಿಗೆ ಇಷ್ಟ ಇರಲಿಲ್ಲ. ಹುಡುಗ ಫಿಕ್ಸ್ ಆಗಿದ್ದರಿಂದ ಈ ರೀತಿ ವಿಚಾರಗಳಿಗೆ ಕಿವಿ ಕೊಡದೇ ಇರಲು ಚೈತ್ರಾ ಕುಂದಾಪುರ ಅವರು ನಿರ್ಧರಿಸಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾರೆ.

ಇದನ್ನೂ ಓದಿ
ಶಾರುಖ್ ಮೋಸ ಮಾಡಿದರೆ...; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್
ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ನ ವಿಡಿಯೋ ವೈರಲ್

ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ಚೈತ್ರಾ ವಿವಾಹ ಆಗುತ್ತಿದ್ದರೇನೋ. ಆದರೆ, ಆ ಸಮಯದಲ್ಲಿ ಅವರಿಗೆ ಬೇರೆ ಆಫರ್ ಬತು. ಅದುವೇ ‘ಬಾಯ್ಸ್ vs ಗರ್ಲ್ಸ್’. ಈ ರಿಯಾಲಿಟಿ ಶೋನಲ್ಲಿ ಚೈತ್ರಾ ಮಿಂಚಿದರು. ಇಲ್ಲಿಗೆ ಹೋದ ಬಳಿಕ ಅವರು ಗ್ಲಾಮರ್ ಗೊಂಬೆ ಆಗಿ ಬಿಟ್ಟರು. ಈಗ ಚೈತ್ರಾ ಕುಂದಾಪುರ ಅವರ ವಿವಾಹ ಆಗುವ ದಿನ ಸಮೀಪಿಸಿದೆ.

ಚೈತ್ರಾ ತಾವು ಯಾರನ್ನು ವಿವಾಹ ಆಗುತ್ತಿದ್ದೇನೆ ಎಂಬ ವಿಚಾರವನ್ನು ಈವರೆಗೆ ರಿವೀಲ್ ಮಾಡಿಲ್ಲ. ಅದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಈಗ ಅವರ ಮದುವೆ ಕಾರ್ಯ ನಡೆದರೆ ಆ ಬಳಿಕ ಹಂಚಿಕೊಳ್ಳೋ ಫೋಟೋದಿಂದ ಪತಿಯ ವಿಚಾರ ರಿವೀಲ್ ಆಗಲಿದೆ. ಚೈತ್ರಾ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ನೋಡಿ:  ಮದುಮಗಳ ಗೆಟಪ್​ನಲ್ಲಿ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ವಿವಾಹಕ್ಕಾಗಿ ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಕೈ ತುಂಬ ಮೆಹಂದಿ ಹಾಕಿಕೊಂಡು, ಮದುವೆಗೆ ರೆಡಿ ಆಗಿದ್ದಾರೆ. ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಹುಡುಗನ ಮುಖ ರಿವೀಲ್ ಮಾಡಲು ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:59 pm, Thu, 8 May 25