Bigg Boss Kannada: ಹೊಸ ಬಿಗ್​ ಬಾಸ್​ ಮನೆ ಹೇಗಿದೆ ಅಂತ ತೋರಿಸಿದ ಚಂದನ್​ ಶೆಟ್ಟಿ; ನೀವೂ ನೋಡಿ..

|

Updated on: Oct 08, 2023 | 4:41 PM

10ನೇ ಸೀಸನ್​ ಆದ್ದರಿಂದ ತುಂಬ ಕಾಳಜಿ ವಹಿಸಿ ಮನೆಯ ವಿನ್ಯಾಸ ಮಾಡಲಾಗಿದೆ. ‘ಮನೆ ಮಾತ್ರ ರಾಯಲ್​ ಆಗಿದೆ’ ಎಂದು ಚಂದನ್​ ಶೆಟ್ಟಿ ಅವರು ಹಾಡಿ ಹೊಗಳಿದ್ದಾರೆ. ಈ ಸಾಂಗ್​ನಲ್ಲಿ ಅವರ ಜೊತೆ ಕಿಚ್ಚ ಸುದೀಪ್​ ಕೂಡ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್​ ಮನೆಯ ಎಲ್ಲ ಮೂಲೆಗಳು ಹೊಸ ಸ್ವರೂಪ ಪಡೆದುಕೊಂಡಿವೆ.

Bigg Boss Kannada: ಹೊಸ ಬಿಗ್​ ಬಾಸ್​ ಮನೆ ಹೇಗಿದೆ ಅಂತ ತೋರಿಸಿದ ಚಂದನ್​ ಶೆಟ್ಟಿ; ನೀವೂ ನೋಡಿ..
ಚಂದನ್​ ಶೆಟ್ಟಿ, ಕಿಚ್ಚ ಸುದೀಪ್​
Follow us on

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ‘ಬಿಗ್​ ಬಾಸ್​’ ಕಾರ್ಯಕ್ರಮಕ್ಕಿದೆ. ಈವರೆಗೂ ಕನ್ನಡದಲ್ಲಿ 9 ಸೀಸನ್​ಗಳು ಪೂರ್ಣಗೊಂಡಿವೆ. ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಆರಂಭ ಆಗಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಎಂದಿನಂತೆ ಈ ಬಾರಿ ಕೂಡ ಶೋ ಅದ್ದೂರಿಯಾಗಿ ಪ್ರಸಾರ ಆಗಲಿದೆ. ಯಾವೆಲ್ಲ ಸ್ಪರ್ಧಿಗಳು ದೊಡ್ಮನೆ ಒಳಗೆ ಕಾಲಿಡುತ್ತಾರೆ ಎಂಬ ಕುತೂಹಲ ಒಂದು ಕಡೆಯಾದರೆ, ಈ ಸಲ ಬಿಗ್ ಬಾಸ್ (Bigg Boss Kannada) ಮನೆ ಹೇಗಿದೆ ಎಂಬ ಕೌತುಕ ಇನ್ನೊಂದು ಕಡೆ. ಈ ಬಾರಿ ಬಿಗ್​ ಬಾಸ್​ ಮನೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಅದು ಹೇಗಿದೆ ಎಂಬುದನ್ನು ಚಂದನ್​ ಶೆಟ್ಟಿ (Chandan Shetty) ಅವರು ತೋರಿಸಿದ್ದಾರೆ.

ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಅವರು ‘ಬಿಗ್ ಬಾಸ್​ ಸೀಸನ್​ 5’ರಲ್ಲಿ ಭಾಗವಹಿಸಿ ಟ್ರೋಫಿ ಗೆದ್ದಿದ್ದರು. ಆ ಶೋನಲ್ಲಿ ಭಾಗವಹಿಸಿದ ಬಳಿಕ ಅವರ ಚಾರ್ಮ್​ ಹೆಚ್ಚಿತು. ಈಗ ಮತ್ತೆ ಅವರು ಬಿಗ್​ ಬಾಸ್​ ಮನೆಯೊಳಗೆ ಕಾಲು ಇಟ್ಟಿದ್ದಾರೆ. ಆದರೆ ಸ್ಪರ್ಧಿಯಾಗಿ ಅಲ್ಲ. ಬದಲಿಗೆ, ಬಿಗ್​ ಬಾಸ್​ ಮನೆಯನ್ನು ಪರಿಚಯಿಸುವ ಸಲುವಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ತಮ್ಮದೇ ಸ್ಟೈಲ್​ನಲ್ಲಿ ಹೊಸ ಹಾಡಿನ ಮೂಲಕ ಅವರು ಈ ಮನೆಯ ಪರಿಚಯ ಮಾಡಿಸಿದ್ದಾರೆ.

ಲಿವಿಂಗ್​ ಏರಿಯಾ, ಅಡುಗೆ ಮನೆ, ಕ್ಯಾಪ್ಟನ್​ ರೂಮ್​, ಕನ್ಫೆಷನ್​ ರೂಮ್​ ಸೇರಿದಂತೆ ಬಿಗ್ ಬಾಸ್​ ಮನೆಯ ಎಲ್ಲ ಮೂಲೆಗಳು ಕೂಡ ಹೊಸ ಸ್ವರೂಪ ಪಡೆದುಕೊಂಡಿವೆ. ದುಬಾರಿ ವೆಚ್ಚದಲ್ಲಿ ಈ ಮನೆ ನಿರ್ಮಾಣ ಆಗಿದೆ. 10ನೇ ಸೀಸನ್​ ಆದ್ದರಿಂದ ತುಂಬ ಕಾಳಜಿ ವಹಿಸಿ ಮನೆಯ ವಿನ್ಯಾಸ ಮಾಡಲಾಗಿದೆ. ‘ಮನೆ ಮಾತ್ರ ರಾಯಲ್​ ಆಗಿದೆ’ ಎಂದು ಚಂದನ್​ ಶೆಟ್ಟಿ ಅವರು ಹಾಡಿ ಹೊಗಳಿದ್ದಾರೆ. ಈ ಸಾಂಗ್​ನಲ್ಲಿ ಅವರ ಜೊತೆ ಕಿಚ್ಚ ಸುದೀಪ್​ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada: ‘ಜಿಯೋ ಸಿನಿಮಾ’ದಲ್ಲಿ ‘ಬಿಗ್​ ಬಾಸ್​’ ನೋಡುವ ವೀಕ್ಷಕರಿಗೆ ಸಿಗುತ್ತದೆ ಹತ್ತಾರು ಅವಕಾಶ

ಇಂದು (ಅಕ್ಟೋಬರ್​ 8) ಸಂಜೆ 6 ಗಂಟೆಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋಗೆ ಅದ್ದೂರಿ ಚಾಲನೆ ಸಿಗಲಿದೆ. ಈಗಾಗಲೇ ಇದರ ಶೂಟಿಂಗ್​ ನಡೆದಿದೆ. ವಿಶೇಷ ಪ್ರೋಮೋಗಳ ಮೂಲಕ ಲಾಂಚಿಂಗ್​ ಎಪಿಸೋಡ್​ನ ಝಲಕ್​ ತೋರಿಸಲಾಗುತ್ತಿದೆ. ಈ ಬಾರಿ ಆಟದಲ್ಲಿ ಸಾಕಷ್ಟು ಹೊಸತನ ಇರಲಿದೆ. ಸ್ಪರ್ಧಿಗಳನ್ನು ಬಿಗ್​ ಬಾಸ್​ ಮನೆಯೊಳಗೆ ಕಳಿಸುವ ಪ್ರಕ್ರಿಯೆಯಲ್ಲೂ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಪ್ರತಿ ದಿನದ ಸಂಚಿಕೆಗಳು ‘ಕಲರ್ಸ್​ ಕನ್ನಡ’ದಲ್ಲಿ ರಾತ್ರಿ 9.30 ಪ್ರಸಾರ ಅಗಲಿವೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಶೋ ಪ್ರಸಾರ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.