
ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಗಮನ ಸೆಳೆದರು. ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಹಾಗೂ ನಟಿ. ಸದ್ಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಂದನಾ ಅವರು ನಟಿಸುತ್ತಿದ್ದಾರೆ. ಈಗ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅವರಿಗೂ ಕಾಸ್ಟಿಂಗ್ ಕೌಚ್ ರೀತಿಯ ಅನುಭವ ಆಗಿತ್ತು. ಈ ಬಗ್ಗೆ ಚಂದನಾ ನೇರ ಮಾತುಗಳಲ್ಲಿ ವಿವರಣೆ ನೀಡಿದ್ದಾರೆ.
‘ವೈ5 ಟಿವಿ ಕನ್ನಡ’ ಯೂಟ್ಯೂಬ್ ಚಾನೆಲ್ಗೆ ಚಂದನಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಜೀವನದಲ್ಲಾದ ಕೆಲ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗಂತ ಅವರಿಗೆ ಕರೆ ಮಾಡಿದ ಯಾರೊಬ್ಬರೂ ನಿರ್ಮಾಪಕರಾಗಿರಲಿಲ್ಲ. ಆಫರ್ ಕೊಡೋ ಹೆಸರಲ್ಲಿ ಚಾನ್ಸ್ ಪಡೆದುಕೊಳ್ಳಲು ಬಯಸಿದವರಾಗಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
‘ಒಬ್ಬರು ಕರೆ ಮಾಡಿದ್ದರು. ಮಾಡರ್ನ್ ಫೋಟೋಶೂಟ್ ಬೇಕು ಎಂದರು. ನಾನು ಅಷ್ಟು ಮಾಡರ್ನ್ ಫೋಟೋಶೂಟ್ ಮಾಡಿಸಿರಲಿಲ್ಲ. ಇದ್ದಿದ್ದರಲ್ಲೇ ಮಾಡರ್ನ್ ಆಗಿರೋ ಫೋಟೋ ಕಳುಹಿಸಿದೆ. ಆ ಬಳಿಕ ಮೇಕಪ್ ಇಲ್ಲದ ಫೋಟೋ ಕಳುಹಿಸಿ ಎಂದರು. ಅದನ್ನೂ ಕಳುಹಿಸಿದೆ’ ಎಂದು ಮಾತು ಆರಂಭಿಸಿದರು ಚಂದನಾ.
‘ವಿಡಿಯೋ ಕಾಲ್ ಮಾಡಿ ಎಂದು ಕೇಳಿದರು. ನನಗೆ ವಿಚಿತ್ರ ಅನಿಸಿತು. ಯಾರು ವಿಡಿಯೋ ಕಾಲ್ ಅಲಾ ಮಾಡಿ ಅಂತಾರೆ? ಅದಕ್ಕೆ ರಿಪ್ಲೈ ಮಾಡಲಿಲ್ಲ. ಅವರು ಪದೇ ಪದೇ ಕರೆ ಮಾಡುತ್ತಲೇ ಇದ್ದ. ಆಗ ನನ್ನ ಗೆಳೆಯರ ಜೊತೆ ಇದ್ದ. ನನ್ನ ಫ್ರೆಂಡ್ ಒಬ್ಬರು ಮಾತನಾಡಿದರು. ಆ ಬಳಿಕ ಕಾಲ್ ಕಟ್ ಮಾಡಿದೆ. ನಂತರ ಬ್ಲಾಕ್ ಮಾಡಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ
‘ಒಂದು ಏಜೆನ್ಸಿ ಅವರು ಕರೆ ಮಾಡಿದ್ದರು. ವಯಸ್ಸು, ಸಂಭಾವನೆ ಎಲ್ಲವೂ ಬರೆದುಕೊಂಡಿತ್ತು. 3 ತಿಂಗಳು ಶೂಟ್ ಪ್ಲಸ್ ಕಾಂಪ್ರಮೈಸ್ ಅಂತ ಅಲ್ಲಿಯೇ ಬರೆದುಕೊಂಡಿತ್ತು. ಈ ರೀತಿಯ ಏಜೆನ್ಸಿಗಳು ಇರುತ್ತವೆ. ಏಜೆನ್ಸಿಗಳ ಸತ್ಯಾಸತ್ಯಯತೆ ನೋಡಿಕೊಂಡು ನಾವು ನಿರ್ಧರಿಸಬೇಕು’ ಎಂದಿದ್ದಾರೆ ಚಂದನಾ. ನಟನೆ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ಇರುವವರಿಗೆ ಈ ರೀತಿಯವರು ಕರೆ ಮಾಡಿದಾಗ ಆ ಬಗ್ಗೆ ಜ್ಞಾನ ಇರೋದಿಲ್ಲ. ಈಗ ಚಂದನಾ ಹೇಳಿದ ಮಾತಿನಿಂದ ಕೆಲವರಲ್ಲಿ ಜಾಗೃತಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.