ಹಬ್ಬ-ಹರಿದಿನಗಳು ಬಂದರೆ ವೀಕ್ಷಕರನ್ನು ಸೆಳೆಯೋಕೆ ಮನರಂಜನಾ ವಾಹಿನಿಗಳು ಹೊಸಹೊಸ ಕಾರ್ಯಕ್ರಮ, ಸಿನಿಮಾಗಳೊಂದಿಗೆ ವೀಕ್ಷಕರ ಎದುರು ಬರುತ್ತವೆ. ಈಗ ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಎಲ್ಲ ಕಡೆಗಳಲ್ಲಿ ಗಣಪತಿಯನ್ನು ತಂದಿಟ್ಟು ಪೂಜೆ ಮಾಡಲಾಗುತ್ತಿದೆ. ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತಿದೆ. ಇದರ ಜತೆಗೆ ಮನರಂಜನಾ ವಾಹಿನಿಗಳು ನಾನಾ ರೀತಿಯ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಕಲರ್ಸ್ ಕನ್ನಡ ವಾಹಿನಿ ‘ಬಿಗ್ ಗಣೇಶೋತ್ಸವ’ ಕಾರ್ಯಕ್ರಮದ ಹೆಸರಲ್ಲಿ ವೀಕ್ಷಕರ ಎದುರು ಬಂದಿತ್ತು. ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ ಪೂರ್ಣಗೊಂಡು ತಿಂಗಳಾಗಿದೆ. ಸೆಕೆಂಡ್ ಸೀಸನ್ನಲ್ಲಿದ್ದ ಬಹುತೇಕ ಸ್ಪರ್ಧಿಗಳ ಜನಪ್ರಿಯತೆ ಹೆಚ್ಚಿದೆ. ಅದರಲ್ಲೂ ಮಂಜು ಪಾವಗಡ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಅರವಿಂದ್ ಕೆ.ಪಿ, ಶಮಂತ್ ಬ್ರೋ ಗೌಡ, ಪ್ರಶಾಂತ್ ಸಂಬರಗಿ ಮೊದಲಾದವರ ಖ್ಯಾತಿ ದುಪ್ಪಟ್ಟಾಗಿದೆ. ಈ ಕಾರಣಕ್ಕೆ ಇವರುಗಳು ಪದೇಪದೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಲರ್ಸ್ ಕನ್ನಡ ವಾಹಿನಿ ಆಯೋಜಿಸಿದ್ದ ‘ಬಿಗ್ ಗಣೇಶೋತ್ಸವ’ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಆಗಮಿಸಿದ್ದರು. ಈ ವೇಳೆ ಇವರೆಲ್ಲರಿಗೂ ಒಂದು ಸರ್ಪ್ರೈಸ್ ಇತ್ತು.
ಮಜಾ ಭಾರತ ತಂಡದವರು ಬಿಗ್ ಬಾಸ್ ಸ್ಪರ್ಧಿಗಳ ಮಿಮಿಕ್ರಿ ಮಾಡಿ ತೋರಿಸಿದ್ದಾರೆ. ಶುಭಾ ಪೂಂಜಾ, ವೈಷ್ಣವಿ ಗೌಡ, ರಘು ಗೌಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಅರವಿಂದ್ ಕೆ.ಪಿ. ಮೊದಲಾದವರ ಮಿಮಿಕ್ರಿಯನ್ನು ಮಾಡಲಾಗಿದೆ. ಮಿಮಿಕ್ರಿ ಎಂದರೆ ಕೇವಲ ಧ್ವನಿಯ ಅನುಕರಣೆ ಮಾತ್ರವಲ್ಲ. ಸ್ಪರ್ಧಿಗಳ ಹಾವಭಾವವನ್ನೂ ಕಾಪಿ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ನಡೆದ ಕೆಲ ಪ್ರಮುಖ ಘಟನೆಗಳನ್ನು ಮರುಸೃಷ್ಟಿ ಮಾಡಲಾಗಿದೆ. ಇದನ್ನು ನೋಡಿ ಬಿಗ್ ಬಾಸ್ ಸ್ಪರ್ಧಿಗಳೇ ಅಚ್ಚರಿಗೊಂಡಿದ್ದಾರೆ. ಅಲ್ಲದೆ, ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಶುಕ್ರವಾರ ಈ ಕಾರ್ಯಕ್ರಮ ಪ್ರಸಾರವಾಗಿದೆ. ಈ ಕಾರ್ಯಕ್ರಮದ ಕ್ಲಿಪ್ಗಳನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಳ್ಳುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಸಪ್ನಾ ಸಾವಿನ ವದಂತಿ ಬಳಿಕ ವಿಡಿಯೋ ವೈರಲ್; RIP ಎಂದವರೆಲ್ಲ ಈಗ ಗಪ್ಚುಪ್