‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಚಂದ್ರಶೇಖರ್ ಸಿದ್ದಿ ನಿಧನ

ನಟ ರಾಕೇಶ್ ಪೂಜಾರಿ ಅವರ ಸಾವಿನ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಚಂದ್ರಶೇಖರ್ ಸಿದ್ದಿ ಅವರು ಮೃತರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಅವರು ನಿಧನರಾಗಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಚಂದ್ರಶೇಖರ್ ಸಿದ್ದಿ ನಿಧನ
Chandrashekhar Siddi
Edited By:

Updated on: Aug 01, 2025 | 9:10 PM

ಕೆಲವು ತಿಂಗಳ ಹಿಂದೆ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ನಟ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದರು. ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಂದಿದೆ. ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಜನಮನ ಗೆದ್ದಿದ್ದ ನಟ ಚಂದ್ರಶೇಖರ್ ಸಿದ್ಧಿ (Chandrashekhar Siddi) ಅವರು ನಿಧನರಾಗಿದ್ದಾರೆ. ಆತ್ಯಹತ್ಯೆ ಮಾಡಿಕೊಂಡು ಅವರು ಸಾವನ್ನಪ್ಪಿದ್ದಾರೆ. ಯಲ್ಲಾಪುರದ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಚಿಮನಳ್ಳಿಯ ಮೂಲದವರಾದ ಚಂದ್ರಶೇಖರ ಸಿದ್ದಿ ಅವರು ಖಾಸಗಿ ವಾಹಿನಿಯಲ್ಲಿ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದರು. ‘ನಿನಾಸಂ’ನಲ್ಲಿ ಅಭಿನಯದ ತರಬೇತಿ ಪಡೆದಿದ್ದ ಅವರು ಕೆಲವು ಧಾರವಾಹಿಗಳಲ್ಲಿ ಕೂಡ ನಟಿಸಿದ್ದರು. ಹಾಸ್ಯ ನಟನಾಗಿ ಅವರು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು.

ಹೆಚ್ಚಿನ ಕೆಲಸ ಇಲ್ಲದೇ ಚಂದ್ರಶೇಖರ್ ಸಿದ್ದಿ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೂರು ತಿಂಗಳ ಹಿಂದೆ ಮಾನಸಿಕವಾಗಿ ಜರ್ಜರಿತನಾಗಿದ್ದರು ಎನ್ನಲಾಗಿದೆ. ಚಂದ್ರಶೇಖರ್ ಅವರ ಸಾವಿಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ನಿಧನದಿಂದ ಕುಟುಂಬದವರಿಗೆ ಮತ್ತು ಆಪ್ತರಿಗೆ ತೀವ್ರ ನೋವಾಗಿದೆ. ಚಂದ್ರಶೇಖರ್ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.