ಕೊನೆಗೂ ಮುರಿದು ಬಿತ್ತು ದುರ್ಗಾ ಮದುವೆ; ಹಿತಾ ಈಗ ರೆಬೆಲ್
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದುರ್ಗಾಳ ಮದುವೆ ಮುರಿದು ಬಿದ್ದಿದೆ. ಮಾಯಾಳ ಯೋಜನೆ ವಿಫಲವಾಗಿದ್ದು, ಹಿತಾ ರೆಬೆಲ್ ಆಗಿ ಮಾಯಾಗೆ ಸವಾಲು ಹಾಕಿದ್ದಾಳೆ. ದುರ್ಗಾ ಮತ್ತು ಶರತ್ ಮದುವೆಯ ಸಾಧ್ಯತೆ ಇದೆ ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಮಾಟ-ಮಂತ್ರದ ಅಂಶಗಳೂ ಇವೆ.

‘ನಾನಿನ್ನ ಬಿಡಲಾರೆ’ (Naa Ninna Bidalre Serial ) ಧಾರಾವಾಹಿಯಲ್ಲಿ ದುರ್ಗಾಳ ಮದುವೆ ಸಂಭ್ರಮ ನಡೆಯುತ್ತಿತ್ತು. ಆದರೆ, ವಿವಾಹ ಆಗೋದಿಲ್ಲ ಎಂದು ದುರ್ಗಾ ತಂದೆ ಮೊದಲೇ ಭವಿಷ್ಯ ನುಡಿದಾಗಿತ್ತು. ಈಗ ಹಾಗೆಯೇ ಆಗಿದೆ. ದುರ್ಗಾ ವಿವಾಹವು ಮುರಿದು ಬಿದ್ದಿದೆ. ಇದರಿಂದ ತುಂಬಾನೇ ಖುಷಿಪಟ್ಟಿದ್ದು ಶರತ್ ಮಗಳು ಹಿತಾ. ಆಕೆ ಈಗ ರೆಬೆಲ್ ಆಗಿದ್ದಾಳೆ. ಮಾಯಾಗೆ ಹಿತಾ ಅವಾಜ್ ಹಾಕಿದ್ದನ್ನು ಎಪಿಸೋಡ್ನಲ್ಲಿ ಕಾಣಬಹುದು.
‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಈಗಾಗಲೇ ನೂರಕ್ಕೂ ಅಧಿಕ ಎಪಿಸೋಡ್ಗಳನ್ನು ಪ್ರಸಾರ ಮಾಡಿದೆ. ಈಗ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈಗ ಧಾರಾವಾಹಿಗೆ ಹೊಸ ಟ್ವಿಸ್ಟ್ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದರು. ದುರ್ಗಾಳ ವಿವಾಹವನ್ನು ಬೇರೆಯವರ ಜೊತೆ ಮಾಡುವ ಆಲೋಚನೆ ಮಾಯಾಗೆ ಬಂತು.
ಇದಕ್ಕಾಗಿ ಹುಡುಗನನ್ನು ಕೂಡ ಕರೆಸಲಾಯಿತು. ಆದರೆ, ಹುಡುಗ ಫ್ರಾಡ್ ಆಗಿದ್ದ. ಆತನ ಫ್ರಾಡ್ನ ಕಳಚಿದ್ದು ಹಿತಾ. ಆಕೆ ಈಗ ಪರ್ಫೆಕ್ಟ್ ಮಾತನಾಡುತ್ತಾಳೆ. ಅಲ್ಲದೆ, ಹುಡುಗನ ವಿವರನ್ನು ತೆರೆದಿಟ್ಟಿದ್ದಾಳೆ. ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಇದು ದೊಡ್ಡ ಟ್ವಿಸ್ಟ್ ಕೊಟ್ಟಿದೆ.
ಈ ಮದುವೆಯನ್ನು ಪ್ಲ್ಯಾನ್ ಮಾಡಿ, ದುರ್ಗಾಳನ್ನು ಹೊರಕ್ಕೆ ಕಳುಹಿಸಬೇಕು ಎಂಬುದು ಮಾಯಾಳ ಆಲೋಚನೆ ಆಗಿತ್ತು. ಆದರೆ, ಈ ಪ್ಲ್ಯಾನ್ ಫ್ಲಾಪ್ ಆಗಿದೆ. ಇದಾದ ಬಳಿಕ ಹಿತಾಳಿಗೆ ಎಚ್ಚರಿಕೆ ಕೊಡಲು ಮಾಯಾ ಬಂದಳು. ಆದರೆ, ಮಾಯಾಗೆ ಆವಾಜ್ ಹಾಕಿ ಹೋಗಿದ್ದಾಳೆ ಹಿತಾ. ‘ದುರ್ಗಾ ಎಲ್ಲಿಯೂ ಹೋಗಲ್ಲ. ಆಕೆ ಇಲ್ಲೇ ಇರೋದು’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾಳೆ. ಇದನ್ನು ಕೇಳಿ ಮಾಯಾ ಶಾಕ್ ಆಗಿದ್ದಾಳೆ.
ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್; ಶರತ್-ದುರ್ಗಾ ಮದುವೆ
ದುರ್ಗಾಳು ಹಿತಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಈ ವಿಚಾರ ಮನೆಯ ಎಲ್ಲರಿಗೂ ಗೊತ್ತಾಗಿದೆ. ಮುಂದೆ ದುರ್ಗಾ ಹಾಗೂ ಶರತ್ ಮದುವೆ ನಡೆಯುವ ಎಲ್ಲಾ ಸಾಧ್ಯತೆ ಇದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ. ಈಗಾಗಲೇ ಶರತ್ ಹಾಗೂ ಮಾಯಾಳ ಎಂಗೇಜ್ಮೆಂಟ್ ನಡೆದಿದೆ. ಅದು ಮುರಿದು ಬಿದ್ದ ಬಳಿಕವೇ ದುರ್ಗಾಳ ಜೊತೆ ವಿವಾಹ ನಡೆಯಲಿದೆ. ಧಾರಾವಾಹಿ ಹಂತ ಹಂತವಾಗಿ ತೆರೆದುಕೊಳ್ಳುತ್ತಿದೆ. ಧಾರಾವಾಹಿಯಲ್ಲಿ ಮಾಟ-ಮಂತ್ರದ ವಿಚಾರ ಕೂಡ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







