‘ಎಂತ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾನ ಟೀಕಿಸಿ ಟ್ರೋಲ್ ಆದ ಧ್ರುವಂತ್

Bigg Boss Kannada 12: ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಧ್ರುವಂತ್ ಅವರಲ್ಲಿ ಅಚ್ಚರಿಯ ಬದಲಾವಣೆ ಕಂಡುಬಂದಿದೆ. ಆರಂಭದಲ್ಲಿ ಶಾಂತ ಸ್ವಭಾವದವರಾಗಿದ್ದ ಧ್ರುವಂತ್ ಈಗ ಎಲ್ಲರ ಮೇಲೆ ಕೋಪಗೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಕುರಿತು ಅವರ ಕೋಪ ಹೊರಬಿದ್ದಿವೆ. ಈ ಘಟನೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

‘ಎಂತ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾನ ಟೀಕಿಸಿ ಟ್ರೋಲ್ ಆದ ಧ್ರುವಂತ್
ಧ್ರುವಂತ್

Updated on: Nov 11, 2025 | 1:03 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಧ್ರುವಂತ್ ಅವರು ಎಲ್ಲಾ ಸ್ಪರ್ಧಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದರು. ಅವರು ಯಾರ ತಂಟೆಗೂ ಹೋಗಿ ಗಲಾಟೆ ಮಾಡುತ್ತಿರಲಿಲ್ಲ. ತಮ್ಮ ಬಗ್ಗೆ ಯಾವುದಾದರೂ ಆರೋಪ ಕೇಳಿ ಬಂದಾಗ ಆ ವಿಚಾರ ಅವರಿಗೆ ಸಾಕಷ್ಟು ಬೇಸರ ಮೂಡಿಸುತ್ತಿತ್ತು. ಆದರೆ, ಧ್ರುವಂತ್ ಅವರು ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರು ಎಲ್ಲರ ಮೇಲೆ ಕೋಪಗೊಳ್ಳುತ್ತಿದ್ದಾರೆ. ಈಗ ಅವರು ರಕ್ಷಿತಾ ಶೆಟ್ಟಿ ವಿರುದ್ಧ ಹರಿಹಾಯ್ದಿದ್ದಾರೆ. ಇದರಿಂದ ಅವರೇ ಟ್ರೋಲ್ ಎದುರಿಸಬೇಕಿದೆ.

ಧ್ರುವಂತ್ ಅವರಿಗೆ ರಕ್ಷಿತಾ ಶೆಟ್ಟಿ ಮೇಲೆ ಕೋಪ ಇದೆ. ‘ಎಂತಾ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾ ಶೆಟ್ಟಿ ಹೇಳೋ ಡೈಲಾಗ್​ ಧ್ರುವಂತ್​ಗೆ ಇಷ್ಟ ಆಗೋದಿಲ್ಲ. ಇದನ್ನು ಅವರು ನಿರಂತರವಾಗಿ ಹೇಳುತ್ತಿದ್ದಾರೆ. ಈ ಮೊದಲು ಮಾತನಾಡಿದ್ದ ಧ್ರುವಂತ್ ಅವರು, ‘ಮಂಗಳೂರಿನಲ್ಲಿ ಯಾರೂ ರಕ್ಷಿತಾ ರೀತಿ ಮಾತನಾಡುವುದಿಲ್ಲ’ ಎಂಬ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್ ಅವರು, ‘ನಮಗೆ ಈ ಭಾಷೆ ಬಗ್ಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದರು.


ಈಗ ಧ್ರುವಂತ್ ಅವರು ಸಾಕಷ್ಟು ಟೀಕೆ ಎದುರಿಸಬೇಕಾಗಿದೆ.  ಧ್ರುವಂತ್ ಅವರನ್ನು ‘ಕಲ್ಪನಾ’ ಚಿತ್ರದಲ್ಲಿ ಬರೋ ಉಪೇಂದ್ರ ಲುಕ್ ರೀತಿಯಲ್ಲಿ ಬದಲಿಸಲಾಗಿದೆ. ಅನೇಕರು ರಕ್ಷಿತಾ ಶೆಟ್ಟಿಯನ್ನು ಬೆಂಬಲಿಸಿದ್ದಾರೆ. ‘ಅವರು ಇರೋದೇ ಹಾಗೆ. ಆ ರೀತಿ ಇದ್ದರೆ ತಪ್ಪೇ ಎಂದು ಎನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಬಳಿ ಇದೆ ದುಬಾರಿ ಕಾರು; ಧ್ರುವಂತ್ ಆರೋಪ ಒಪ್ಪಿಕೊಂಡ ನಟ

ಧ್ರುವಂತ್ ಅವರಿಗೆ ಈ ವಾರ ಸುದೀಪ್ ಪಾಠ ಹೇಳೋದು ಪಕ್ಕಾ ಎನ್ನಲಾಗುತ್ತಿದೆ. ಇದನ್ನು ಧ್ರುವಂತ್ ಅವರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಮೊದಲು ಅವರು ಶೋನಿಂದ ಹೊರ ಹೋಗುವ ಬಗ್ಗೆ ಬೆದರಿಕೆ ಹಾಕಿದ್ದರು. ಈ ವಾರ ಕಡಿಮೆ ವೋಟ್ ಪಡೆದು ಅವರೇ ಹೋಗಬೇಕಿತ್ತು ಎಂದು ಅನೇಕರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:18 am, Tue, 11 November 25