ಅರವಿಂದ್​-ದಿವ್ಯಾ ಉರುಡುಗ ಸಂಬಂಧದಲ್ಲಿ ಬಿರುಕು; ಇದು ಯಾರೂ ನಿರೀಕ್ಷಿಸದ ಸಂಗತಿ

| Updated By: ಮದನ್​ ಕುಮಾರ್​

Updated on: Jul 22, 2021 | 2:21 PM

100 ದಿನಗಳನ್ನು ಪೂರೈಸಿರುವ ಬಿಗ್​ ಬಾಸ್ ಈಗ ಫಿನಾಲೆಯತ್ತ ಮುನ್ನುಗ್ಗುತ್ತಿದೆ. ಆದ್ದರಿಂದ ಸ್ಪರ್ಧಿಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ ನಡುವೆ ಮನಸ್ತಾಪ ಮೂಡಿದೆ.

ಅರವಿಂದ್​-ದಿವ್ಯಾ ಉರುಡುಗ ಸಂಬಂಧದಲ್ಲಿ ಬಿರುಕು; ಇದು ಯಾರೂ ನಿರೀಕ್ಷಿಸದ ಸಂಗತಿ
ದಿವ್ಯಾ ಉರುಡುಗ
Follow us on

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ (Bigg Boss Kannada 8) ಆರಂಭ ಆದಾಗಿನಿಂದಲೂ ದಿವ್ಯಾ ಉರುಡುಗ  (Divya Uruduga) ಮತ್ತು ಅರವಿಂದ್​ ಕೆಪಿ (, Aravind KP) ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇಬ್ಬರ ನಡುವೆ ಒಂದು ಆತ್ಮೀಯತೆ ಬೆಳೆದಿತ್ತು. ಸದಾ ಕಾಲ ಇಬ್ಬರೂ ಜೊತೆಯಾಗಿ ಇರುತ್ತಿದ್ದರು. ಅದನ್ನು ಕಂಡು ವೀಕ್ಷಕರು ಕೂಡ ಇಷ್ಟಪಟ್ಟಿದ್ದರು. ಬೆಸ್ಟ್​ ಕಪಲ್​ ಎಂದೆಲ್ಲ ಕಮೆಂಟ್​ಗಳನ್ನು ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ, ದಿವ್ಯಾ ಉರುಡುಗ ಮತ್ತು ಅರವಿಂದ್​ ನಿಜಜೀವನದಲ್ಲಿ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ.

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ವಿವಿಧ ಬಗೆಯ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ‘ನೀನಾ ನಾನಾ’ ಎಂಬ ಟಾಸ್ಕ್​ ನೀಡಲಾಗಿತ್ತು. ಅದರ ಜೊತೆ ಕೊಡಲಾದ ಇನ್ನೊಂದು ಟಾಸ್ಕ್​ನಲ್ಲಿ ಮೊದಲು ಯಾರು ಗ್ಲೌಸ್​ ಹಾಕಿಕೊಳ್ಳುತ್ತಾರೋ ಅವರಿಗೆ ಸ್ಪರ್ಧಿಸುವ ಅವಕಾಶ ಸಿಗುತ್ತದೆ. ಇತರೆ ಸ್ಪರ್ಧಿಗಳು ಗ್ಲೌಸ್​ ಹತ್ತಿರ ನಿಂತುಕೊಂಡಾಗ ಅದನ್ನು ಫೌಲ್​ ಎಂದು ದಿವ್ಯಾ ಉರುಡುಗ ಹೇಳುತ್ತಿದ್ದರು. ಆದರೆ ನಂತರದಲ್ಲಿ ಸ್ವತಃ ದಿವ್ಯಾ ಗ್ಲೌಸ್​ ಬಳಿ ಹೋಗಿ ನಿಂತುಕೊಳ್ಳಲು ಆರಂಭಿಸಿದರು. ಅದನ್ನು ಅರವಿಂದ್​ ವಿರೋಧಿಸಿದರು.

ಈ ಘಟನೆ ನಡೆದ ಬಳಿಕ ಅರವಿಂದ್​ ಮತ್ತು ದಿವ್ಯಾ ಉರುಡುಗ ನಡುವೆ ವೈಮನಸ್ಸು ಉಂಟಾಗಿದೆ. ಅದೇ ರಾತ್ರಿ ಅರವಿಂದ್​ ಬಳಿಗೆ ತೆರಳಿದ ದಿವ್ಯಾ ಅವರು ಮಾತನಾಡಿಸಲು ಪ್ರಯತ್ನಿಸಿದರು. ಆದರೆ ಮಾತನಾಡುವ ಮನಸ್ಸಿಲ್ಲ ಎಂದು ಅರವಿಂದ್​ ಅಂತರ ಕಾಯ್ದುಕೊಂಡರು. ಈ ಕಿಚ್ಚು ನಿಧಾನವಾಗಿ ಇಬ್ಬರ ಮನಸ್ಸಿನಲ್ಲೂ ವ್ಯಾಪಿಸಿದೆ. ಇಷ್ಟು ದಿನಗಳ ಕಾಲ ಖುಷಿಖುಷಿಯಾಗಿ ಮಾತನಾಡಿಕೊಳ್ಳುತ್ತಿದ್ದ ಈ ಜೋಡಿ ಈಗ ಹೀಗೆ ಕಿತ್ತಾಡಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ವೈಯಕ್ತಿಕವಾಗಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ ನಡುವೆ ಯಾವುದೇ ಮನಸ್ತಾಪ ಇಲ್ಲ. ಆದರೆ ಈ ಎಲ್ಲ ಜಟಾಪಟಿ ನಡೆದಿರುವುದು ಟಾಸ್ಕ್​ ವಿಚಾರಕ್ಕೆ. ಹಾಗಾಗಿ ಇಂದಲ್ಲ ನಾಳೆ ಅವರು ಒಂದಾಗುತ್ತಾರೆ. ಮತ್ತೆ ಹಳೇ ಆತ್ಮೀಯತೆಯೊಂದಿಗೆ ಬೆರೆಯುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಈಗ ಬಿಗ್​ ಬಾಸ್​ 100 ದಿನಗಳನ್ನು ಪೂರೈಸಿ ಫಿನಾಲೆಯತ್ತ ಮುನ್ನುಗ್ಗುತ್ತಿದೆ. ಆದ್ದರಿಂದ ಸ್ಪರ್ಧಿಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಚಕ್ರವರ್ತಿ ಚಂದ್ರಚೂಡ್​, ಅರವಿಂದ್​ ಕೆಪಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​, ಮಂಜು ಪಾವಗಡ, ಶುಭಾ ಪೂಂಜಾ, ವೈಷ್ಣವಿ ಗೌಡ, ಶಮಂತ್​ ಬ್ರೋ ಗೌಡ ಮತ್ತು ಪ್ರಶಾಂತ್​ ಸಂಬರಗಿ ನಡುವೆ ಸದ್ಯ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ:

BBK8 Finale: 100 ದಿನ ಪೂರೈಸಿದ ಕನ್ನಡ ಬಿಗ್​ ಬಾಸ್​ ಸೀಸನ್​ 8; ಫಿನಾಲೆ ನಡೆಯೋದು ಯಾವಾಗ?

ಬಿಗ್​ ಬಾಸ್​ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ