ಸೀರೆಯಲ್ಲಿ ಕಾಣಿಸಿಕೊಂಡ ದಿವ್ಯಾ ಉರುಡುಗ; ನಾಚಿ ನೀರಾದ ಅರವಿಂದ್

ಅರವಿಂದ್ ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯೊಳಗೆ ತೆರಳಿದ ನಂತರ ಕ್ಲೋಸ್​ ಆದರು. ಇವರ ಜೋಡಿ ನೋಡಿದ ಮನೆ ಮಂದಿ ಸಾಕಷ್ಟು ಖುಷಿಪಟ್ಟಿದ್ದಾರೆ. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಸೀರೆಯಲ್ಲಿ ಕಾಣಿಸಿಕೊಂಡ ದಿವ್ಯಾ ಉರುಡುಗ; ನಾಚಿ ನೀರಾದ ಅರವಿಂದ್
ಸೀರೆಯಲ್ಲಿ ಕಾಣಿಸಿಕೊಂಡ ದಿವ್ಯಾ ಉರುಡುಗ; ನಾಚಿ ನೀರಾದ ಅರವಿಂದ್
Edited By:

Updated on: Jul 29, 2021 | 4:44 PM

‘ಬಿಗ್​ ಬಾಸ್​ ಸೀಸನ್​ 8’ ಕೊನೆಯ ಹಂತಕ್ಕೆ ಬಂದು ನಿಂತಿದೆ. ಮುಂದಿನ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಫಿನಾಲೆ ಹಿಂದಿನವಾರ ಆದ ಕಾರಣ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್​ ನೀಡಲಾಗುತ್ತಿಲ್ಲ. ಹೀಗಾಗಿ, ಮನೆ ಮಂದಿ ಟೈಮ್​ ಪಾಸ್​ಗೆ ನಾನಾ ಮಾರ್ಗ ಅನುಸರಿಸುತ್ತಿದ್ದಾರೆ. ಬಿಗ್ ಮನೆಯಲ್ಲಿರುವ ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ದಿವ್ಯಾ ನೋಡಿದ ಅರವಿಂದ್ ನಾಚಿ ನೀರಾಗಿದ್ದಾರೆ.

ಅರವಿಂದ್ ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯೊಳಗೆ ತೆರಳಿದ ನಂತರ ಕ್ಲೋಸ್​ ಆದರು. ಇವರ ಜೋಡಿ ನೋಡಿದ ಮನೆ ಮಂದಿ ಸಾಕಷ್ಟು ಖುಷಿಪಟ್ಟಿದ್ದಾರೆ. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅರವಿಂದ್​-ದಿವ್ಯಾ ಮನೆಯಲ್ಲಿ ಏನೇ ಮಾಡಿದರೂ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಗಿದೆ. ಈಗ ಇದೇ ಮೊದಲ ಬಾರಿಗೆ ದಿವ್ಯಾ ಅವರನ್ನು ಅರವಿಂದ್​ ಸೀರೆಯಲ್ಲಿ ನೋಡಿದ್ದಾರೆ. ಅವರನ್ನು ನೋಡಿ ನಾಚಿ ನೀರಾಗಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ದಿವ್ಯಾ ಕೆಂಪು​ ಬಣ್ಣದ ಸೀರೆ ಉಟ್ಟಿದ್ದಾರೆ. ಸೀರೆಯಲ್ಲಿಯೇ ಅವರು ಅರವಿಂದ್​ ಎದುರು ಹೋಗಿ ನಿಂತಿದ್ದಾರೆ. ದಿವ್ಯಾ ಅವರನ್ನು ಸೀರೆಯಲ್ಲಿ ನೋಡಿದ ಅರವಿಂದ್ ನಾಚಿಕೊಂಡಿದ್ದಾರೆ. ದಿಟ್ಟಿಸಿ ದಿವ್ಯಾರನ್ನು ನೋಡೋಕೂ ಹಿಂಜರಿಕೆ ಮಾಡಿದ್ದಾರೆ ಅರವಿಂದ್.

ಇನ್ನು, ಶುಭಾ ಕೂಡ ಸೀರೆ ಉಟ್ಟಿದ್ದಾರೆ. ಅವರು ಸೀರೆಯಲ್ಲಿ ತುಂಬಾನೇ ಲಕ್ಷಣವಾಗಿ ಕಾಣಿಸಿದ್ದಾರೆ. ಇದನ್ನು ನೋಡಿದ ಮಂಜು, ‘ನಮ್ಮ ಗುಂಡಮ್ಮ (ಶುಭಾ) ಎಲ್ಲಾದರೂ ಕಂಡರೆ ದಯವಿಟ್ಟು ಹೇಳಿ’ ಎಂದು ಸೀರೆಯುಟ್ಟ ಶುಭಾಗೆ ಮಂಜು ಕೇಳಿಕೊಂಡಿದ್ದಾರೆ. ಪೂರ್ತಿ ಎಪಿಸೋಡ್​ ಇಂದು (ಜುಲೈ 29) ಪ್ರಸಾರವಾಗಲಿದೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ: ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ

ಬಿಗ್​ ಬಾಸ್​ ಮನೆಯ ಪ್ರೇಮ್​ ಕಹಾನಿಗಳು ನಿಜವೋ, ಸುಳ್ಳೋ? ಹೊರ ಬಿತ್ತು ಅಸಲಿ ಮಾಹಿತಿ