ಡ್ರೋನ್ ಕೊಡದೆ ಹಣ ವಂಚನೆ ಆರೋಪ: ಉತ್ತರ ನೀಡಿದ ಡ್ರೋನ್ ಪ್ರತಾಪ್

|

Updated on: Jan 30, 2024 | 6:16 PM

Drone Prathap: ಬಿಗ್​ಬಾಸ್ ರನ್ನರ್ ಅಪ್ ಆಗಿದ್ದಾರೆ ಡ್ರೋನ್ ಪ್ರತಾಪ್. ಆದರೆ ಅವರು ಫಿನಾಲೆ ವಾರ ತಲುಪಿದಾಗ ಹೊರಗಡೆ ಅವರ ಬಗ್ಗೆ ಕೆಲವು ವಿವಾದಗಳಿಗೆ ಮರುಜೀವ ನೀಡಲಾಗಿತ್ತು. ಆ ಆರೋಪಗಳಿಗೆ ಪ್ರತಾಪ್ ಉತ್ತರ ನೀಡಿದ್ದಾರೆ.

ಡ್ರೋನ್ ಕೊಡದೆ ಹಣ ವಂಚನೆ ಆರೋಪ: ಉತ್ತರ ನೀಡಿದ ಡ್ರೋನ್ ಪ್ರತಾಪ್
Follow us on

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಮುಗಿದಿದ್ದು ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದಾರೆ. ಸಂಗೀತಾ ಅಥವಾ ವಿನಯ್, ನಮ್ರತಾ ಅಂಥಹಾ ಘಟಾನುಘಟಿಗಳನ್ನು ಮೀರಿಸಿ ಡ್ರೋನ್ ಪ್ರತಾಪ್ (Drone Prathap) ರನ್ನರ್ ಅಪ್ ಆಗಿದ್ದಾರೆ. ಪ್ರತಾಪ್ ಗೆಲ್ಲುವ ಸ್ಪರ್ಧಿ ಎಂದೇ ಪರಿಗಣಿತವಾಗಿದ್ದರು. ಫಿನಾಲೆ ವಾರ ಆರಂಭವಾಗುತ್ತಿದ್ದಂತೆ ಹೊರಗಡೆ ಪ್ರತಾಪ್ ವಿರುದ್ಧವಾಗಿ ಕೆಲವು ಸುದ್ದಿಗಳು ಹರಿದಾಡಲು ಆರಂಭವಾದವು. ಬಿಗ್​ಬಾಸ್​ನಿಂದ ಹೊರಗೆ ಬಂದಿರುವ ಡ್ರೋನ್ ಪ್ರತಾಪ್, ತಮ್ಮ ಮೇಲೆ ಮಾಡಲಾಗಿರುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ.

ಡ್ರೋನ್ ಪ್ರತಾಪ್​ರ ಡ್ರೋನ್ ಆರ್ಕ್ ಸಂಸ್ಥೆಯೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದ ಪುಣೆಯ ಯುವ ಉದ್ಯಮಿ ಸಾರಂಗ್, ಡ್ರೋನ್ ಪ್ರತಾಪ್ ತಮಗೆ 83 ಲಕ್ಷ ರೂಪಾಯಿ ಹಣ ಮರುಪಾವತಿ ಮಾಡಬೇಕು ಎಂದು ಆರೋಪ ಮಾಡಿದ್ದರು. ಡ್ರೋನ್ ಕೊಡುವುದಾಗಿ ಹೇಳಿ ಪ್ರತಾಪ್ ತಮ್ಮಿಂದ 35 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೆ ಆರ್ಡರ್ ನೀಡಿದ ಅರ್ದದಷ್ಟು ಡ್ರೋನ್​ಗಳನ್ನು ಸಹ ತಮಗೆ ಕಳಿಸಿಲ್ಲ. ಈಗ ಕಳಿಸಿರುವ ಡ್ರೋನ್​ಗಳಲ್ಲಿ ಎರಡು ಡ್ರೋನ್​ಗಳು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.

ಇದೀಗ ಬಿಗ್​ಬಾಸ್​ನಿಂದ ಹೊರಗೆ ಬಂದಿರುವ ಪ್ರತಾಪ್, ಸಾರಂಗ್ ಆರೋಪಗಳಿಗೆ ಉತ್ತರ ನೀಡಿದ್ದು, ‘ನಮ್ಮ ಸಂಸ್ಥೆಯ ಮುಖ್ಯ ವ್ಯಕ್ತಿ ನಾನೇ, ನಾನು ಎರಡು ವಾರ ಎಂದುಕೊಂಡು ಬಿಗ್​ಬಾಸ್​ಗೆ ಹೋದೆ ಆದರೆ ಇಷ್ಟು ದಿನ ಆಯ್ತು. ಇದರಿಂದಾಗಿ ನಮ್ಮ ಪ್ರೊಡಕ್ಷನ್ ನಿಂತಿರಬಹುದು. ಸಾರಂಗ್ ಜೊತೆಗೆ ಈಗಾಗಲೇ ನಾನು ಮಾತನಾಡಿದ್ದೇನೆ. ಅವರು ಆದಷ್ಟು ಬೇಗ ಬಂದು ಭೇಟಿ ಆಗುವುದಾಗಿ ಹೇಳಿದ್ದಾರೆ. ನಾವು ಎಲ್ಲವನ್ನೂ ಶೀಘ್ರದಲ್ಲಿಯೇ ಸರಿಮಾಡಿಕೊಳ್ಳಲಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:Drone Prathap​: ಬಿಗ್​ಬಾಸ್​ | ಡ್ರೋನ್ ಪ್ರತಾಪ್ ಸೋತ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಅಭಿಮಾನಿ

ಮಾಜಿ ಬಿಬಿಎಂಪಿ ಅಧಿಕಾರಿ ಪ್ರಯಾಗ್ ಅವರ ಆರೋಪ ಹಾಗೂ ಅವರು ಹೂಡಿರುವ ಮಾನನಷ್ಟ ಮೊಕದ್ದಮೆ ಬಗ್ಗೆ ಮಾತನಾಡಿರುವ ಡ್ರೋನ್ ಪ್ರತಾಪ್, ‘ನಾನು ಫಿನಾಲೆಗೆ ಬಂದಾಗ ಕೆಲವರು ಪಿತೂರಿ ಮಾಡಿದರು. ನನ್ನ ಮೇಲೆ ಆರೋಪ ಮಾಡುವಂತಿದ್ದರೆ ಫಿನಾಲೆ ವಾರದ ವರೆಗೆ ಏಕೆ ಕಾಯಬೇಕಿತ್ತು. ಇರಲಿ, ಅಂಥಹಾ ಪಿತೂರಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಋಣಾತ್ಮಕ ವಿಷಯಗಳ ಬಗ್ಗೆ ಮಾತನಾಡಿದಷ್ಟು, ಅವಕ್ಕೆ ಪ್ರಚಾರ ನೀಡಿದಂತಾಗುತ್ತದೆ’ ಎಂದಿದ್ದಾರೆ.

‘ಯಾರ್ಯಾರು ಅವರಿಗೆ ಏನೇನು ಮಾತನಾಡಿದ್ದಾರೆ, ಹೇಳಿಕೊಟ್ಟಿದ್ದಾರೆ ಎಂಬುದೆಲ್ಲವೂ ಗೊತ್ತು. ನಾವು ಇಲ್ಲದಾಗ ಕೆಲವರು ಮಾತನಾಡಿದ್ದಾರೆ. ಇರಲಿ ಮಾತನಾಡಲಿ. ಬಿಗ್​ಬಾಸ್ ಒಳಗೆ ಹೋಗುವ ಮುಂಚೆ ಸ್ಟಾರ್ಟ್​ ಅಪ್ ಕತೆ ಏನಾಗುತ್ತದೆ ಎಂಬ ಭಯ ಇತ್ತು. ಆದರೆ ಏನೂ ಆಗಿರಲಿಲ್ಲ. ಎಲ್ಲವೂ ಚೆನ್ನಾಗಿದೆ. ನಾನಿಲ್ಲದಾಗ ಕೆಲವು ಮಾತನಾಡಿದ್ದಾರೆ. ಪರವಾಗಿಲ್ಲ. ನಾನು ನನ್ನ ಕೆಲಸದ ಮೂಲಕವೇ ಉತ್ತರ ಕೊಡುತ್ತೀನಿ. ಫಿನಾಲೆ ವಾರದಲ್ಲಿ ಕೆಲವರು ಪಿತೂರಿ ಮಾಡಿದರೂ ಜನ ನನ್ನ ಕೈಬಿಡಲಿಲ್ಲ. ಯಾವ ವಿವಾದದ ಬಗ್ಗೆಯೂ ಮಾತನಾಡುವುದಿಲ್ಲ. ಕೆಲಸ ಮಾಡುತ್ತೀನಿ, ಕೆಲಸ ಮಾಡುತ್ತಲೇ ಹೋಗುತ್ತೀನಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ