‘ಸರಿಗಮಪ’ ಶೋ ಮತ್ತೆ ಆರಂಭ ಆಗಿರೋದು ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ (ಡಿಸೆಂಬರ್ 14) ಈ ಶೋ ಪ್ರಸಾರ ಆರಂಭಿಸಿದೆ. ಈ ಶೋಗೆ ಮೆಗಾ ಆಡಿಷನ್ಗೆ ಈ ಬಾರಿ ಬರೋಬ್ಬರಿ 40 ಸ್ಪರ್ಧಿಗಳು ಇದ್ದು, ಈ ಪೈಕಿ ಕೆಲವು ಸ್ಪರ್ಧಿಗಳನ್ನು ಫೈನಲ್ ಆಗಲಿದ್ದಾರೆ. ಈ ಬಾರಿ ಜಡ್ಜ್ ಸ್ಥಾನದಲ್ಲಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಇದ್ದಾರೆ. ಸ್ಪರ್ಧಿಗಳನ್ನು ಈ ಮೂವರನ್ನು ಫೈನಲ್ ಮಾಡಲಿದ್ದಾರೆ. ರಾಜೇಶ್ ಕೃಷ್ಣನ್ ಎಂಟ್ರಿಗೆ ಫನ್ ಮಾಡಲಾಯಿತು.
ರಾಜೇಶ್ ಕೃಷ್ಣನ್ ಅವರು ಈ ಮೊದಲು ‘ಸರಿಗಮಪ’ ಶೋ ಜಡ್ಜ್ ಸ್ಥಾನದಲ್ಲಿ ಇದ್ದರು. ಆ ಬಳಿಕ ಅವರು ಕಾರಣಾಂತರಗಳಿಂದ ಈ ಶೋನ ಬಿಟ್ಟು ಹೋದರು. ಅವರು ಈ ಶೋನ ತೊರೆದು ಮೂರು ವರ್ಷಗಳು ಕಳೆದಿವೆ. ಈಗ 2024ರ ಅಂತ್ಯದಲ್ಲಿ ಆರಂಭ ಆಗಿರುವ ‘ಸರಿಗಮಪ’ ಶೋಗೆ ಅವರು ಮತ್ತೆ ಆಗಮಿಸಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ರಾಜೇಶ್ ಕೃಷ್ಣನ್ ಅವರು ಈ ಶೋ ಬಿಡಲು ಅನುಶ್ರೀ ಕಾರಣ ಎಂದು ವಿಜಯ್ ಪ್ರಕಾಶ್ ಅವರು ಕಾಲೆಳೆದಿದ್ದಾರೆ.
‘ನೀವು ಬಂದಿದ್ದು ಬಹಳ ಸಂತೋಷ ಆಯಿತು. ನೀವು ನನ್ನ ಗುರುಗಳು’ ಎಂದು ಅನುಶ್ರೀ ಹೇಳಿದರು. ಇದಕ್ಕೆ ಫನ್ ಆಗಿ ಉತ್ತರ ಕೊಟ್ಟರು ವಿಜಯ್ ಪ್ರಕಾಶ್. ‘ಅನುಶ್ರೀ ಇದಾಳೆ ಎಂದೇ ಅಲ್ಲವೇ ನೀವು ಶೋನ ಬಿಟ್ಟು ಹೋಗಿದ್ದು’ ಎಂದರು. ಇದಕ್ಕೆ ರಾಜೇಶ್ ಕೃಷ್ಣನ್ ಹೌದು ಎಂದರು. ಆ ಬಳಿಕ ಇದಕ್ಕೆ ಕಾರಣ ವಿವರಿಸಲಾಯಿತು.
ಇದನ್ನೂ ಓದಿ:ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್
‘ಅನುಶ್ರೀ ಸಂಗೀತ ಹೇಳಿಕೊಡಿ ಎಂದು ಕೇಳಿ ಕೇಳಿ ರಾಜೇಶ್ ಕೃಷ್ಣನ್ ಅವರು ಸುಸ್ತಾಗಿದ್ದಾರೆ. ಅನುಶ್ರೀಗೆ ಸಂಗೀತ ಕಲಿಸುವ ಪ್ರಯತ್ನದಲ್ಲಿ ಈಗ ರಾಜೇಶ್ಗೆ ಐದೇ ಸ್ವರ ನೆನಪಿದೆ. ಶೋ ಬಿಡೋಕೆ ನೀವೇ ಕಾರಣ’ ಎಂದು ಅನುಶ್ರೀ ಬಗ್ಗೆ ಫನ್ ಮಾಡಿದರು ವಿಜಯ್ ಪ್ರಕಾಶ್. ಇದಕ್ಕೆ ರಾಜೇಶ್ ಕೃಷ್ಣನ್ ಕೂಡ ಹೌದು ಎಂದರು. ‘ಸರಿಗಮಪ’ ಅವರು ಈ ಬಾರಿ 40 ಸ್ಪರ್ಧಿಗಳು ಇದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದೆ. ಕೆಲವು ವಾರಗಳ ಈ ಆಡಿಷನ್ ಪ್ರಸಾರ ಕಾಣಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ