ಖಾಸಗಿ ಭೇಟಿ ವೇಳೆ ಗಿಲ್ಲಿಗೆ ಒಂದೊಳ್ಳೆ ಕಿವಿಮಾತು ಹೇಳಿದ ಸುದೀಪ್; ಅಳವಡಿಸಿಕೊಂಡರೆ ಬಾಳು ಬಂಗಾರ

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಕಿಚ್ಚ ಸುದೀಪ್ ನೀಡಿದ ಮಹತ್ವದ ಕಿವಿಮಾತು ಹೇಳಿದ್ದಾರೆ. ಇತ್ತೀಚೆಗೆ ಸುದೀಪ್ ಹಾಗೂ ಗಿಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಸುದೀಪ್ ಕೊಟ್ಟ ಸಲಹೆ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.ಈ ಸಲಹೆಗಳು ಗಿಲ್ಲಿಯ ಮುಂದಿನ ಯಶಸ್ಸಿಗೆ ದಾರಿದೀಪವಾಗಲಿವೆ.

ಖಾಸಗಿ ಭೇಟಿ ವೇಳೆ ಗಿಲ್ಲಿಗೆ ಒಂದೊಳ್ಳೆ ಕಿವಿಮಾತು ಹೇಳಿದ ಸುದೀಪ್; ಅಳವಡಿಸಿಕೊಂಡರೆ ಬಾಳು ಬಂಗಾರ
ಗಿಲ್ಲಿ ಸುದೀಪ್

Updated on: Jan 23, 2026 | 7:01 AM

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಇದರ ಹಿಂದೆ ಕಿಚ್ಚ ಸುದೀಪ್ ಶ್ರಮ ಕೂಡ ಇದೆ ಎಂದರೂ ತಪ್ಪಾಗಲಾರದು. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಯಾವ ರೀತಿಯಲ್ಲಿ ಆಡುತ್ತಿದ್ದೇವೆ ಎಂಬುದು ಗೊತ್ತೇ ಆಗೋದಿಲ್ಲ. ಮಾತು, ಆಟ, ವ್ಯಕ್ತಿತ್ವ ಹೀಗೆಯೇ ಎಲ್ಲವೂ ತಪ್ಪುತ್ತದೆ. ಆಗ ಸುದೀಪ್ ಅದನ್ನು ತಿದ್ದೋ ಕೆಲಸ ಸುದೀಪ್ ಮಾಡುತ್ತಾರೆ. ಗಿಲ್ಲಿ ವಿಷಯದಲ್ಲೂ ಸುದೀಪ್ ಅನೇಕ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಖಾಸಗಿಯಾಗಿ ಇಬ್ಬರ ಭೇಟಿ ನಡೆದಿದೆ. ಈ ವೇಳೆ ಸುದೀಪ್ ಕೊಟ್ಟ ಸಲಹೆ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಅಲ್ಲಿ ಗಿಲ್ಲಿ ಅನೇಕ ಬಾರಿ ತಪ್ಪು ಮಾಡಿದ್ದರು. ಆಗ ಗಿಲ್ಲಿಗೆ ಸುದೀಪ್ ಕಿವಿಮಾತುಗಳನ್ನು ಹೇಳಿದರು. ತಪ್ಪು ಮಾಡಿದಾಗ ಅವರನ್ನು ತಿದ್ದೋ ಕೆಲಸ ಮಾಡಿದ್ದಾರೆ. ಫಿನಾಲೆ ದಿನ ಸುದೀಪ್ ಎದುರು ಧನ್ಯವಾದ ಅರ್ಪಿಸಿದ್ದರು ಗಿಲ್ಲಿ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದಿದ್ದರು. ಬಿಗ್ ಬಾಸ್ ಗೆದ್ದ ಬಳಿಕ ಗಿಲ್ಲಿ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

ಸುದೀಪ್ ಅವರು ಗಿಲ್ಲಿಗೆ ಸಲಹೆ ನೀಡಿದ್ದಾರೆ. ‘ಯೋಚಿಸಿ ಹೆಜ್ಜೆ ಇಡಬೇಕು’ ಎಂದು ಗಿಲ್ಲಿಗೆ ಕಿವಿಮಾತು ಹೇಳಿದ್ದಾರೆ ಸುದೀಪ್. ಇದನ್ನು ಗಿಲ್ಲಿ ಅಳವಡಿಸಿಕೊಳ್ಳುವ ಭರವಸೆ ನೀಡಿದ್ದಾರೆ. ದೊಡ್ಡ ಗೆಲುವು ಸಿಕ್ಕಾಗ ಮನಸ್ಸು ನಮ್ಮ ಹಿಡಿತದಲ್ಲಿ ಇರೋದಿಲ್ಲ. ಗೆದ್ದಿದ್ದೇವೆ ಎಂಬ ಖುಷಿಯಲ್ಲಿ ಕೆಲವೊಮ್ಮೆ ತಪ್ಪು ಹೆಜ್ಜೆಗಳನ್ನು ಇಡೋ ಸಾಧ್ಯತೆ ಇರುತ್ತದೆ. ಆ ರೀತಿ ಆಗದಿರಲಿ ಎಂಬುದು ಸುದೀಪ್ ಬಯಕೆ.

ಇದನ್ನೂ ಓದಿ: ‘ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು’; ದೊಡ್ಡ ಘೋಷಣೆ ಮಾಡಿದ ಗಿಲ್ಲಿ ನಟ

ಗಿಲ್ಲಿ ಅವರು ‘ಬಿಗ್ ಬಾಸ್’ ಗೆದ್ದ ಬಳಿಕ ಶಿವರಾಜ್​​​ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಗಿಲ್ಲಿ ಗೆದ್ದೇ ಗೆಲ್ಲುತ್ತಾನೆ ಎಂದು ಶಿವಣ್ಣ ಹೇಳಿದ್ದರು. ಅದೇ ದಿನ ಸಂಜೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಶಿವಣ್ಣನ ಬಗ್ಗೆ ಮಾತನಾಡಿದ್ದರಂತೆ. ಈ ವಿಷಯಗಳನ್ನು ಇವರು ಚರ್ಚೆ ಮಾಡಿದ್ದಾರೆ. ಶಿವಣ್ಣನ ಭೇಟಿ ವೇಳೆ ಸುದೀಪ್​​ಗೆ ವಿಡಿಯೋ ಕರೆ ಮಾಡಿ ಮಾತನಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.