ಸಿನಿಮಾ ನಿರ್ದೇಶನಕ್ಕೆ ಇಳಿಯುತ್ತಾರೆ ಗಿಲ್ಲಿ ನಟ? ದೊಡ್ಡ ಪ್ಲ್ಯಾನ್ ರಿವೀಲ್
ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ, ಇದೀಗ ಸಿನಿಮಾ ನಿರ್ದೇಶನದತ್ತ ಗಮನ ಹರಿಸುತ್ತಾರೆ ಎನ್ನಲಾಗಿದೆ. ಕಾವ್ಯಾ ಅವರ ಪೋಸ್ಟ್ ಕೂಡ ನಿರ್ದೇಶನದ ಸುಳಿವು ನೀಡಿದ್ದು, ಗಿಲ್ಲಿ ನಟ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಹೊಸ ಇನ್ನಿಂಗ್ಸ್ ಪ್ರಾರಂಭಿಸುವ ಸಾಧ್ಯತೆ ಇದೆ.

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ವಿನ್ನರ್ ಆಗಿ ಹೊರಹೊಮ್ಮಿದರು. ಅವರು ಅದ್ಭುತವಾಗಿ ಮನರಂಜನೆ ನೀಡಿದರು ಮತ್ತು ವಿಜಯ ಪತಾಕೆಯನ್ನು ಹಾರಿಸಿದರು. ಈಗ ಗಿಲ್ಲಿ ನಟ ಅವರನ್ನು ಹುಡುಕಿ ಸಿನಿಮಾ ಆಫರ್ಗಳು ಬರಬಹುದು ಎಂದು ಹೇಳಲಾಗುತ್ತಾ ಇದೆ. ಇದರ ಜೊತೆಗೆ ಅವರಿಗೆ ಸಿನಿಮಾ ನಿರ್ದೇಶನ ಮಾಡೋ ಪ್ಲ್ಯಾನ್ ಇದೆ ಎಂದು ಹೇಳಲಾಗುತ್ತಾ ಇದೆ. ವೈರಲ್ ಆದ ಹಳೆಯ ವಿಡಿಯೋ ಇದಕ್ಕೆ ಕಾರಣ ಎನ್ನಬಹುದು.
ಗಿಲ್ಲಿ ನಟ ಅವರು ಮೊದಲಿನಿಂದಲೂ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಈ ಮೊದಲು ಕೆಲವು ಶಾರ್ಟ್ ಫಿಲ್ಮ್ಗಳನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಅವರೇ ಸಂಭಾಷಣೆಗಳನ್ನು ಬರೆದಿದ್ದರು. ಹೀಗಾಗಿ, ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ಈಗ ಅವರಿಗೆ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಲಾಗುತ್ತಾ ಇದೆ.
ಯೋಗರಾಜ್ ಭಟ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಿಲ್ಲಿ ನಟ ಅವರ ಬಗ್ಗೆ ಯೋಗರಾಜ್ ಭಟ್ ಮಾತನಾಡಿದ್ದರು. ‘ನಿರ್ದೇಶನದಲ್ಲಿ ಆತನಿಗೆ ಹೆಚ್ಚು ಆಸಕ್ತಿ’ ಎಂದು ಯೋಗರಾಜ್ ಭಟ್ ಅವರು ಹೇಳಿದ್ದರು. ಹೀಗಾಗಿ, ಸಿನಿಮಾ ನಿರ್ದೇಶನ ಮಾಡಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ.
Yogaraj Sir GILLI Direction Talks📽️#BBK12 #Gilli pic.twitter.com/P0lw5O3L9S
— Raju-7777 (@DBOSS0718) January 22, 2026
ಇನ್ನು, ಕಾವ್ಯಾ ಅವರು ಇತ್ತೀಚೆಗೆ ಪೋಸ್ಟ್ ಮಾಡುವಾಗ ಬರೆದ ಕ್ಯಾಪ್ಶನ್ ಗಮನ ಸೆಳೆದಿತ್ತು. ‘ಆದಷ್ಟು ಬೇಗ ಆ್ಯಕ್ಷನ್ ಕಟ್ ಹೇಳುವ ರೀತಿ ಆಗಲಿ’ ಎಂದು ಹಾರೈಸಿದ್ದರು. ನಿರ್ದೇಶನ ಮಾಡುತ್ತಾರೆ ಎಂದರೆ ಮಾತ್ರ ಆ್ಯಕ್ಷನ್ ಕಟ್ ಪದ ಬಳಕೆ ಮಾಡುತ್ತಾರೆ ಎನ್ನಬಹುದು. ಹೀಗಾಗಿ, ಕಾವ್ಯಾ ವಿಶ್ ಹಿಂದೆ ಈ ರೀತಿಯ ರಹಸ್ಯ ಅಡಗಿರಬಹುದು ಎಂದು ಹೇಳಲಾಗುತ್ತಾ ಇದೆ.
ಇದನ್ನೂ ಓದಿ: ‘ತುಂಬಾ ಗೊಂದಲದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್ಫ್ಯೂಸ್ ಆದ ಗಿಲ್ಲಿ ನಟ
ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ ಆದ ಬಳಿಕ ಹಲವು ರಾಜಕಾರಣಿಗಳು, ನಟರನ್ನು ಭೇಟಿ ಮಾಡಿದ್ದಾರೆ. ಹೊರಗೆ ಅವರ ಕ್ರೇಜ್ ಜೋರಾಗಿಯೇ ಇದೆ. ಅವರು ನಿರ್ದೇಶನ ಮಾಡುತ್ತಾರೆ ಎಂದರೆ ಹಣ ಹಾಕಲು ನಿರ್ಮಾಪಕರು ಬಂದೇ ಬರುತ್ತಾರೆ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



